ವೇಣುಗೋಪಾಲನ ಜಾತ್ರೋತ್ಸವ: ಅನ್ನದ ರಾಶಿಗೆ ಸಚಿವರಿಂದ ಪೂಜೆ

| Published : Feb 14 2025, 12:32 AM IST

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌. ಮುನಿಯಪ್ಪ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದ್ದಲ್ಲದೆ ಪ್ರತಿವರ್ಷ ಕಾಲ ಕಾಲಕ್ಕೆ ಮಳೆ ಬೆಳೆಯಾಗಿ ರೈತರ ಬಾಳಲಿ ಹರುಷ ತರಲಿ ಎಂದು ಹಾರೈಸಿದರು.

ದೇವನಹಳ್ಳಿ: ಇಲ್ಲಿನ ಕೋಟೆ ಬೀದಿಯಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿಯವರ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು, ತಹಸೀಲ್ದಾರ್‌ ಬಾಲಕೃಷ್ಣ ದಂಪತಿ ಸ್ವಾಮಿಗೆ ಪೂಜೆ ಸಲ್ಲಿಸಿದರು. ಪೂಜೆಯ ನಂತರ ಪ್ರಾಕಾರೋತ್ಸವ ನಡೆಯಿತು, ಪ್ರಥಮ ಬಾರಿ ರುಕ್ಮಿಣಿ, ಸತ್ಯಭಾಮ ಸಮೇತ ಸ್ವಾಮಿಯವರ ಉತ್ಸವ ಮೂರ್ತಿಗೆ ಬೆಳ್ಳಿ ಕಿರೀಟ, ಎರಡನೇ ಬಾರಿ ಚಿನ್ನದ ಕಿರೀಟಗಳ ಧಾರಣೆ, ಮೂರನೇ ಬಾರಿ ಪ್ರಾಕಾರೋತ್ಸವದಲ್ಲಿ ನವರತ್ನ ಖಚಿತ ಕಿರೀಟಧಾರಣೆ ಮಾಡಿ ಪ್ರದಕ್ಷಿಣೆ ಮಾಡಿದರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌. ಮುನಿಯಪ್ಪ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದ್ದಲ್ಲದೆ ಪ್ರತಿವರ್ಷ ಕಾಲ ಕಾಲಕ್ಕೆ ಮಳೆ ಬೆಳೆಯಾಗಿ ರೈತರ ಬಾಳಲಿ ಹರುಷ ತರಲಿ ಎಂದು ಹಾರೈಸಿದರು. ರಥೋತ್ಸವಕ್ಕೆ ಚಾಲನೆ ನೀಡಿದ ಸಚಿವರು ನಂತರ ಇಲ್ಲಿನ ದೊಡ್ಡ ಅಪ್ಪಯ್ಯಣ್ಣ ಛತ್ರದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಅನ್ನ ಸಂತರ್ಪಣೆ ಸ್ಥಳಕ್ಕೆ ಆಗಮಿಸಿ ಅನ್ನದ ರಾಶಿಗೆ ಪೂಜೆ ಸಲ್ಲಿಸಿ ಶುಭ ಹಾರೈಸಿದರು. ಅನ್ನದಾನ ಸಮಿತಿಯ ಅಧ್ಯಕ್ಷ ಸಿ.ಜಗನ್ನಾಥ್‌, ಮಾಜಿ ಶಾಸಕ ಜಿ. ಚಂದ್ರಣ್ಣ, ಡಾ, ರಾಜಶೇಖರ್‌. ಪಿ. ಗಂಗಾಧರ್‌, ಪೊಲೀಸ್‌ ಲೋಕೇಶ್‌ ಹಾಗೂ ಇತರ ಸಂಘ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.