ವಚನಗಳು ಮನಸ್ಸಿನ ಕತ್ತಲು ಕಳೆಯುತ್ತವೆ

| Published : May 02 2025, 12:17 AM IST

ಸಾರಾಂಶ

ಬಸವಣ್ಣನವರ ಕಳಬೇಡ ಕೊಲಬೇಡ ಎನ್ನುವ ವಚನದ ಸಪ್ತ ಸೂತ್ರಗಳನ್ನು ಪಾಲಿಸಿದರೆ ಸಾಕು ನಮ್ಮ ಜೀವನ ಪಾವನವಾಗುತ್ತದೆ ಎಂದು ನಿವೃತ್ತ ಉಪನ್ಯಾಸಕ ಎ.ಮಂಜುನಾಥ ಹೇಳಿದರು.

ದಾವಣಗೆರೆ: ಬಸವಣ್ಣನವರ ಕಳಬೇಡ ಕೊಲಬೇಡ ಎನ್ನುವ ವಚನದ ಸಪ್ತ ಸೂತ್ರಗಳನ್ನು ಪಾಲಿಸಿದರೆ ಸಾಕು ನಮ್ಮ ಜೀವನ ಪಾವನವಾಗುತ್ತದೆ ಎಂದು ನಿವೃತ್ತ ಉಪನ್ಯಾಸಕ ಎ.ಮಂಜುನಾಥ ಹೇಳಿದರು.

ನಗರದ ಕೊಂಡಜ್ಜಿ ರಸ್ತೆಯಲ್ಲಿರುವ ಶ್ರೀ ಸಿದ್ಧಗಂಗಾ ಡಾ.ಶಿವಕುಮಾರ ಸ್ವಾಮೀಜಿ ಸರ್ಕಲ್ ಯುವಕರ ಸಂಘದಿಂದ ಆಯೋಜಿಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಚನಗಳು ನಮ್ಮ ಮನಸ್ಸಿನ ಕತ್ತಲನ್ನು ಕಳೆದು, ಜ್ಞಾನದ ಬೆಳಕನ್ನು ನೀಡುತ್ತವೆ. ಲಿಂಗ ಬ್ರಹ್ಮಾಂಡದ ಸಂಕೇತ. ಯಾರು ಲಿಂಗವನ್ನು ಧರಿಸಿ ಪ್ರತಿದಿನ ಲಿಂಗ ಪೂಜೆ ಮಾಡುತ್ತಾರೋ ಅವರು ಸದ್ಗುಣಗಳನ್ನು ಹೊಂದುತ್ತಾರೆ ಎಂದರು.

ವೀರಣ್ಣ ಶಿವಸಾಲಿ ಮಾತನಾಡಿ, ಎಲ್ಲರ ಅಂತರಂಗದೊಳಗಿರುವ ಚೇತನ ಲಿಂಗಚೇತನವೇ ಆಗಿದೆ. ಅದನ್ನು ಅರಿಯಬೇಕಾದರೆ ಬಸವಾದಿ ಶರಣರ ವಚನಗಳನ್ನು ಪ್ರತಿದಿನ ಪಠಣ ಮನನ ಮಾಡುತ್ತ ಅದರಂತೆ ಸಾಗಿದರೆ ನಮ್ಮೊಳಗಿನ ಅರಿವು ಜಾಗೃತವಾಗಿ ಲಿಂಗಾನುಭವ ಸಾಧ್ಯವಾಗುತ್ತದೆ ಎಂದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ಶಂಕರ್ ಎ.ಶಿರೇಕರ್ ಪವರ್, ಕವಿ ರಾಜೇಂದ್ರಪ್ರಸಾದ ನೀಲಗುಂದ, ಸಾಹಿತಿ ಶಿವಪ್ರಸಾದ ಕರ್ಜಗಿ, ಷಣ್ಮುಖಪ್ಪ ಸಾಲಿಮಠ, ಗಣೇಶ, ನಿಂಗಪ್ಪ, ವೀರಾಚಾರಿ, ವಿಜಯಕುಮಾರ, ಬಸಣ್ಣ, ವೀರೇಶ್, ಶಿವಣ್ಣ, ನಬಿವುಲ್ಲಾ, ಸಂತೋಷ್, ಪೂರ್ಣಿಮಾ ಸಾಲಿಮಠ, ಕುಶಾಲ್, ವಚನ ಮತ್ತಿತರರು ಇದ್ದರು.