ಸಾರಾಂಶ
ಕೇಂದ್ರ ಸರ್ಕಾರದ ಬಜೆಟ್ ಕಾಟಾಚಾರ ಬಜೆಟ್ ಆಗಿದೆ. ಕೆಲವು ಉದ್ಯಮಿಗಳಿಗೆ ಗುತ್ತಿಗೆ ನೀಡಲು ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ. ಇದು ಅತ್ಯಂತ ಕಳಪೆ ಬಜೆಟ್. ಕಳೆದ ಬಜೆಟ್‌ನಲ್ಲಿ ಕೊರೋನಾದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ₹20 ಸಾವಿರ ಕೋಟಿಯನ್ನು ಸಣ್ಣ ಕೈಗಾರಿಕೆಗಳಿಗೆ ಮೀಸಲು ಇಟ್ಟಿರುವುದಾಗಿ ಘೋಷಣೆ ಮಾಡಿದ್ದರು. ಆದರೆ, ಜಿಲ್ಲೆಯ ಯಾವ ಕೈಗಾರಿಕೆಗೂ ಇದರಿಂದ ಪ್ರಯೋಜನ ಆಗಲಿಲ್ಲ. 2022 ಗುಡಿಸಲು ಮುಕ್ತ ರಾಷ್ಟ್ರ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಈವರೆಗೂ ಜಿಲ್ಲೆಯಲ್ಲಿ ಒಂದು ಮನೆಯೂ ನಿರ್ಮಾಣ ಆಗಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್ ಶಿವಮೊಗ್ಗದಲ್ಲಿ ಆರೋಪಿಸಿದ್ದಾರೆ.
ಶಿವಮೊಗ್ಗ: ಕೇಂದ್ರ ಸರ್ಕಾರದ ಬಜೆಟ್ ಕಾಟಾಚಾರ ಬಜೆಟ್ ಆಗಿದೆ. ಕೆಲವು ಉದ್ಯಮಿಗಳಿಗೆ ಗುತ್ತಿಗೆ ನೀಡಲು ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್ ಆರೋಪಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇದು ಅತ್ಯಂತ ಕಳಪೆ ಬಜೆಟ್. ಕಳೆದ ಬಜೆಟ್‌ನಲ್ಲಿ ಕೊರೋನಾದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ₹20 ಸಾವಿರ ಕೋಟಿಯನ್ನು ಸಣ್ಣ ಕೈಗಾರಿಕೆಗಳಿಗೆ ಮೀಸಲು ಇಟ್ಟಿರುವುದಾಗಿ ಘೋಷಣೆ ಮಾಡಿದ್ದರು. ಆದರೆ, ಜಿಲ್ಲೆಯ ಯಾವ ಕೈಗಾರಿಕೆಗೂ ಇದರಿಂದ ಪ್ರಯೋಜನ ಆಗಲಿಲ್ಲ. 2022 ಗುಡಿಸಲು ಮುಕ್ತ ರಾಷ್ಟ್ರ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಈವರೆಗೂ ಜಿಲ್ಲೆಯಲ್ಲಿ ಒಂದು ಮನೆಯೂ ನಿರ್ಮಾಣ ಆಗಿಲ್ಲ ಎಂದು ದೂರಿದರು.ಮಹಿಳೆಯರು, ಯುವಕರಿಗೆ ಒತ್ತು ನೀಡಲಾಗಿದೆ ಎಂದು ಘೋಷಿಸಿದ್ದಾರೆ. ಆದರೆ ಯಾವುದೇ ಯೋಜನೆ ಪ್ರಕಟಿಸದೇ, ಅನುದಾನ ಮೀಸಲಿಡದೇ ಕೇವಲ ಹೇಳಿಕೆಗೆ ಸೀಮಿತವಾಗಿದೆ. ಗ್ರಾಮೀಣ ಅಭಿವೃದ್ಧಿಗೆ ಸಾವಿರಾರು ಕೋಟಿ ರು. ಮೀಸಲು ಇಡುತ್ತಿದ್ದಾರೆ. ಆದರೆ, ಜಿಲ್ಲೆಯಲ್ಲಿ ಯಾವುದೇ ಗ್ರಾಮೀಣ ರಸ್ತೆ ನಿರ್ಮಾಣ ಆಗಿಲ್ಲ. ರಕ್ಷಣಾ ಇಲಾಖೆಗೆ ಪ್ರತಿ ವರ್ಷ ಲಕ್ಷಾಂತರ ಕೋಟಿ ಹಣ ಇಡುತ್ತಿದ್ದಾರೆ. ಆದರೆ, ಈ ಹಣದಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ ಕಳೆದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹5300 ಕೋಟಿ ಘೋಷಿಸಿದ್ದರು. ಆದರೆ, ಈತನಕ 1 ರುಪಾಯಿಯನ್ನೂ ಕೊಟ್ಟಿಲ್ಲ. ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಅದರ ಚಕಾರವೆತ್ತಿಲ್ಲ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಶೇಖರ್, ಕಲೀಮ್, ಶಿ.ಜು ಪಾಷಾ, ಚಂದನ್, ಚಂದ್ರಭೂಪಾಲ, ಸೌಗಂಧಿಕಾ, ಮುಜೀಬ್ , ವೈ.ಬಿ. ಚಂದ್ರಕಾಂತ್, ಪಿ.ಎಸ್. ಗಿರೀಶ್ ರಾವ್ ಇದ್ದರು.- - - -2ಎಸ್‌ಎಂಜಿಕೆಪಿ07: ಎಚ್.ಎಸ್.ಸುಂದರೇಶ್