ಸಾರಾಂಶ
ಚಿಕ್ಕಮಗಳೂರು: ಜಿಲ್ಲೆಯ ಹಿರಿಯ ಪತ್ರಕರ್ತ ಜಿ.ವಿ. ಚೂಡನಾಥ ಅಯ್ಯರ್ (76 ) ನಿಧನರಾಗಿದ್ದಾರೆ.ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಪತ್ನಿ ಯಶೋಧ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಉಪ್ಪಳ್ಳಿಯ ಮುಕ್ತಿಧಾಮದಲ್ಲಿ ಸೋಮವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಿತು.ಹೊಸದಿಗಂತ ಮತ್ತು ಗಿರಿವಾಹಿನಿಯ ಜಿಲ್ಲಾ ಮಟ್ಟದ ಪತ್ರಿಕೆ ಸಂಪಾದಕರು ಮತ್ತು ಪ್ರಕಾಶಕರೂ ಆಗಿದ್ದ ಅವರು. ಹಿಂದುತ್ವವಾದಿಯಾಗಿದ್ದರು. ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದು, ದತ್ತಪೀಠದ ಹೋರಾಟಗಾರರಿಗೆ ಮಾರ್ಗದರ್ಶನವನ್ನು ನೀಡುತ್ತಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಶಾಸಕ ಎಚ್.ಡಿ. ತಮ್ಮಯ್ಯ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಸಚಿವರಾದ ಸಗೀರ್ ಅಹ್ಮದ್, ಬಿ.ಬಿ.ನಿಂಗಯ್ಯ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಅವರು ಮೃತರ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.ವಿವಿಧ ಪಕ್ಷಗಳು ಮುಖಂಡರು ಜನಪ್ರತಿನಿಧಿಗಳು ನಗರದ ವಾಣಿಜ್ಯೋದ್ಯಮಿಗಳು ಮೃತರ ಅಂತಿಮ ದರ್ಶನ ಪಡೆದರು. ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ಚೂಡನಾಥ ಅಯ್ಯರ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪತ್ರಕರ್ತರಾದ ದಿನೇಶ್ ಪಟವರ್ಧನ್, ಉಮೇಶ್‌ಕುಮಾರ್, ಸುರೇಶ್ ಮಾತನಾಡಿದರು.
ಅಂತ್ಯಕ್ರಿಯೆಗೂ ಮುನ್ನ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ, ಡಾ.ಜೆ.ಪಿ.ಕೃಷ್ಣೇಗೌಡ, ಸತ್ಯ ನಾರಾಯಣಸ್ವಾಮಿ ಮಾತನಾಡಿದರು. ಬ್ರಾಹ್ಮಣ ಮಹಾಸಭಾದಿಂದಲೂ ಸಂತಾಪ ಸೂಚಿಸಲಾಯಿತು.ಪೋಟೋ ಫೈಲ್ ನೇಮ್ 29 ಕೆಸಿಕೆಎಂ 6