ತಾಲೂಕಿನ ಪಿಚ್ಚೇನಹಳ್ಳಿ ಗ್ರಾಮದ ಕಿರಣ್ ಎಂಬುವವರಿಗೆ ಸೇರಿದ ಹಸುವೊಂದು ಸಗಣಿ ಹಾಕಲಾಗದೆ ತೀವ್ರವಾಗಿ ಪರಿತಪಿಸುತ್ತಿತ್ತು. ಹಸುವನ್ನು ಪರೀಕ್ಷಿಸಿದ ನೊಣವಿನಕೆರೆ ಪಶು ಆಸ್ಪತ್ರೆಯ ಹಿರಿಯ ಪಶುವೈದ್ಯಾಧಿಕಾರಿ ಡಾ. ಮಂಜುನಾಥ್ ಎಸ್.ಪಿ.

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕಿನ ಪಿಚ್ಚೇನಹಳ್ಳಿ ಗ್ರಾಮದ ಕಿರಣ್ ಎಂಬುವವರಿಗೆ ಸೇರಿದ ಹಸುವೊಂದು ಸಗಣಿ ಹಾಕಲಾಗದೆ ತೀವ್ರವಾಗಿ ಪರಿತಪಿಸುತ್ತಿತ್ತು. ಹಸುವನ್ನು ಪರೀಕ್ಷಿಸಿದ ನೊಣವಿನಕೆರೆ ಪಶು ಆಸ್ಪತ್ರೆಯ ಹಿರಿಯ ಪಶುವೈದ್ಯಾಧಿಕಾರಿ ಡಾ. ಮಂಜುನಾಥ್ ಎಸ್.ಪಿ. ಅವರು, ಹಸುವಿನ ದೊಡ್ಡ ಕರುಳು ನುಲುಚಿಕೊಂಡಿರುವುದನ್ನು (ತಿರುಚಿಕೊಂಡಿರುವುದನ್ನು) ಪತ್ತೆಹಚ್ಚಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಹಸುವನ್ನು ಮಲಗಿಸದೆ ನಿಂತಿರುವಂತೆಯೇ ಬಲಭಾಗದ ಉದರ ತೆರೆಯುವ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ, ಕರುಳಿನ ತಿರುಚಿದ ಭಾಗವನ್ನು ಸರಿಪಡಿಸಿದರು. ಗರ್ಭ ಧರಿಸಿದ್ದ ವೇಳೆಯೆ ಈ ಶಸ್ತ್ರಚಿಕಿತ್ಸೆ ನೀಡಿರುವುದು ಅಪರೂಪದ ಘಟನೆಯಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ಹಸು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಇದೀಗ ಆರೋಗ್ಯವಂತ ಕರುವಿಗೆ ಜನ್ಮ ನೀಡಿದೆ. ಪಶುವೈದ್ಯರ ಸಮಯಪ್ರಜ್ಞೆ ಮತ್ತು ಯಶಸ್ವಿ ಶಸ್ತ್ರಚಿಕಿತ್ಸೆಗೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.