ಜಾನುವಾರು ಆರೋಗ್ಯ ದೃಷ್ಟಿಯಿಂದ ಪಶು ಚಿಕಿತ್ಸಾಲಯ: ನಯನಾ

| Published : Mar 13 2024, 02:00 AM IST

ಜಾನುವಾರು ಆರೋಗ್ಯ ದೃಷ್ಟಿಯಿಂದ ಪಶು ಚಿಕಿತ್ಸಾಲಯ: ನಯನಾ
Share this Article
  • FB
  • TW
  • Linkdin
  • Email

ಸಾರಾಂಶ

ಜಾನುವಾರುಗಳ ಆರೋಗ್ಯದಲ್ಲಿ ಏರುಪೇರು ಉಂಟಾದರೆ ಕೂಡಲೇ ಚಿಕಿತ್ಸೆ ಸಿಗಬೇಕೆಂಬ ಉದ್ದೇಶದಿಂದ ಗ್ರಾಮಗಳಲ್ಲಿ ಪಶು ಚಿಕಿತ್ಸಾಲಯವನ್ನು ತೆರೆಯಲಾಗುತ್ತಿದೆ ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಾನುವಾರುಗಳ ಆರೋಗ್ಯದಲ್ಲಿ ಏರುಪೇರು ಉಂಟಾದರೆ ಕೂಡಲೇ ಚಿಕಿತ್ಸೆ ಸಿಗಬೇಕೆಂಬ ಉದ್ದೇಶದಿಂದ ಗ್ರಾಮಗಳಲ್ಲಿ ಪಶು ಚಿಕಿತ್ಸಾಲಯವನ್ನು ತೆರೆಯಲಾಗುತ್ತಿದೆ ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹೇಳಿದರು.ತಾಲೂಕಿನ ಅಂಬಳೆ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಪಶು ಚಿಕಿತ್ಸಾಲಯ ಕೇಂದ್ರ ಉದ್ಘಾಟಿಸಿ ಮಾತನಾಡಿದರು.ಅತಿಯಾದ ಬಿಸಿಲು, ಬಾಯಾರಿಕೆ ಹಾಗೂ ನೀರಿನ ಅಭಾವದಿಂದ ಜಾನುವಾರುಗಳ ಆರೋಗ್ಯ ಸ್ಥಿತಿ ಹದ ಗೆಡುವ ಸಂಭವ ವಿರುವುದರಿಂದ ಪಟ್ಟಣಕ್ಕೆ ತಕ್ಷಣವೇ ಕರೆದೊಯ್ಯಲು ಕಷ್ಟಸಾಧ್ಯ. ಹೀಗಾಗಿ ಗ್ರಾಮದಲ್ಲೇ ಚಿಕಿತ್ಸಾಲಯ ತೆರೆದಿದ್ದು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಸುಧಾರಿಸಲಿವೆ ಎಂದು ತಿಳಿಸಿದರು. ಗ್ರಾಮದಲ್ಲಿ ಪಶು ಚಿಕಿತ್ಸಾಲಯ ತೆರೆಯಬೇಕೆಂಬ ಬೇಡಿಕೆಯಿದ್ದ ಹಿನ್ನೆಲೆಯಲ್ಲಿ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿದ ಬಳಿಕ ನೂತನ ಆಸ್ಪತ್ರೆಗೆ ಮಾತ್ರ ಅವಕಾಶವಿರುವ ಕಾರಣ ಸದ್ಯಕ್ಕೆ ತಾತ್ಕಾಲಿಕ ಕೇಂದ್ರ ಆರಂಭಿಸಿದ್ದು ಮುಂದೆ ಗ್ರಾಮ ದಲ್ಲೇ ಜಾಗ ಗುರುತಿಸಿ ಸಕಲ ಸೌಕರ್ಯ ಒಳಗೊಂಡ ಪರಿಪೂರ್ಣ ಪಶು ಚಿಕಿತ್ಸಾ ಕೇಂದ್ರ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. ಅಂಬಳೆ ಹೋಬಳಿ ಮೇಲ್ದರ್ಜೇಗೇರಿಸುವುದು, ಹಾಲಿನ ಡೈರಿ ನಿರ್ಮಾಣ ಹಾಗೂ ಜಾನುವಾರುಗಳಿಗೆ ಪಶು ಚಿಕಿತ್ಸಾಲಯ ಸಂಬಂಧ ಜನ ಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ಒಕ್ಕೊರಲಿನಿಂದ ಮನವಿ ಮಾಡಿದ ಮೇರೆಗೆ ಇದೀಗ ಪಶು ಚಿಕಿತ್ಸಾಲಯ ಕಲ್ಪಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಒಂದೊಂದೇ ಸೌಕರ್ಯಗಳನ್ನು ಪೂರೈಸಲು ಶ್ರಮ ವಹಿಸ ಲಾಗುವುದು ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ವಿ.ಮಂಜುನಾಥ್ ಮಾತನಾಡಿ, ಅಂಬಳೆ ಹಾಗೂ ಮುಗುಳುವಳ್ಳಿ ಗ್ರಾಮಸ್ಥರು ಈ ಹಿಂದೆ ಪಶು ಚಿಕಿತ್ಸಾಲಯ ಸಂಬಂಧ ಶಾಸಕರನ್ನು ಒತ್ತಾಯಿಸಲಾಗಿತ್ತು. ಇದೀಗ ಶಾಸಕರು ಅಂಬಳೆ ಗ್ರಾಮಕ್ಕೆ ತಾತ್ಕಾಲಿಕ ಪಶು ಚಿಕಿತ್ಸಾಲಯ ತೆರೆದಿದ್ದು ಮುಂಬರುವ ದಿನಗಳಲ್ಲೂ ಮುಗುಳುವಳ್ಳಿ ಗ್ರಾಮಕ್ಕೂ ಅನುಕೂಲ ಮಾಡಿ ಕೊಡಬೇಕು ಎಂದು ಹೇಳಿದರು. ಗ್ರಾಮದ ಸುತ್ತಲು ಸುಮಾರು ಸಾವಿರಕ್ಕೂ ಹೆಚ್ಚು ಜಾನುವಾರುಗಳಿರುವ ಕಾರಣ ಕೆಮ್ಮು, ಬೇದಿ, ಕಾಲು ಬಾಯಿ ಸೇರಿ ದಂತೆ ಸಣ್ಣಪುಟ್ಟ ಆರೋಗ್ಯ ಎದುರಾಗುತ್ತಿತ್ತು. ಹೀಗಾಗಿ ಗ್ರಾಮದಲ್ಲೇ ಚಿಕಿತ್ಸಾಲಯ ತೆರೆದಿರುವುದರಿಂದ ಬಹಳಷ್ಟು ಅನುಕೂಲವಾಗಿದೆ. ಜೊತೆಗೆ ತುರ್ತು ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿಗೆ ಅವಕಾಶ ಕಲ್ಪಿಸಿ ರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಂಬಳೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ವಿಜಯ್‌ಕುಮಾರ್, ಗ್ರಾಪಂ ಸದಸ್ಯೆ ವಿಜಯಮ್ಮ, ಗ್ರಾಮಸ್ಥರಾದ ಮಂಜೇಗೌಡ, ಮಲ್ಲಿಕಾರ್ಜುನ್, ಸೋಮಶೇಖರ್, ಹರಿಹರದಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೆಂಚೇಗೌಡ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಮೋಹನ್‌ಕುಮಾರ್, ಸಹಾಯಕ ನಿರ್ದೇಶಕ ಡಾ.ಹೇಮಂತ್‌ಕುಮಾರ್ ಉಪಸ್ಥಿತರಿದ್ದರು. 12 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಅಂಬಳೆ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಪಶು ಚಿಕಿತ್ಸಾಲಯ ಕೇಂದ್ರವನ್ನು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಿದರು.