ಸಾರಾಂಶ
ಹಿಂದೂ ಧಾರ್ಮಿಕ ಮತ್ತು ತೀರ್ಥ ಕ್ಷೇತ್ರಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮುಖಂಡರು ಗುರುವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಚಿಕ್ಕಮಗಳೂರು : ಪವಿತ್ರ ಶ್ರದ್ಧಾ ಕೇಂದ್ರಗಳಾದ ಹಿಂದೂ ಧಾರ್ಮಿಕ ಮತ್ತು ತೀರ್ಥ ಕ್ಷೇತ್ರಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮುಖಂಡರು ಗುರುವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವಿಹೆಚ್‌ಪಿ ಜಿಲ್ಲಾ ಕಾರ್ಯದರ್ಶಿ ರಂಗನಾಥ್, ತಿರುಪತಿ ಮತ್ತು ಇತರೆ ಸ್ಥಳಗಳಲ್ಲಿ ನಡೆದಿರುವ ಅನಿಯಮಿ ತತೆಯ ಕಾರಣದಿಂದ ಹಿಂದೂ ಸಮಾಜದ ದೇವಾಲಯಗಳ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕಾದರೆ ಸರ್ಕಾರದ ನಿಯಂತ್ರಣದಿಂದ ಮುಕ್ತ ವಾದರೆ ಮಾತ್ರ ಸಾಧ್ಯ ಎಂದರು.
ಪ್ರತಿ ಹಿಂದೂ ದೇವಾಲಯಗಳ ಆಸ್ತಿ ಮತ್ತು ಆದಾಯ ದೇವಾಲಯಗಳ ಅಭಿವೃದ್ಧಿ ಮತ್ತು ಧಾರ್ಮಿಕ, ಸಂಬಂಧಿತ ಸೇವಾ ಚಟುವಟಿಕೆಗೆ ಮಾತ್ರವೇ ಬಳಸಬೇಕು. ವಾಸ್ತವದಲ್ಲಿ ದೇವಾಲಯಗಳ ಆದಾಯ ಮತ್ತು ಆಸ್ತಿ ಪಾಸ್ತಿಗಳ ತೆರೆದ ಲೂಟಿಯನ್ನು ಅಧಿಕಾರಿ, ರಾಜಕಾರಣಿಗಳು ಮಾತ್ರವಲ್ಲ ಅವರೊಂದಿಗೆ ಕೈಜೋಡಿಸಿರುವ ಸನಾತನ ವಿರೋಧಿ ಪಾತ್ರಧಾರಿಗಳ ಕೆಲಸವಾಗಿದೆ ಎಂದು ದೂರಿದರು.
ಕೋಟ್ಯಂತರ ಹಿಂದೂಗಳಿಗೆ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ಆರಾದ್ಯದೈವ. ಅಲ್ಲದೇ ಭಕ್ತರಿಗೆ ವಿತರಿಸುವ ಪ್ರಸಾದ ರೂಪವಾಗಿ ನೀಡುವ ಲಾಡುಗಳ ಶುದ್ಧತೆ ಮತ್ತು ಪರಿಪೂರ್ಣತೆ ಮೇಲೆ ಅನಾದಿ ಕಾಲದಿಂದಲೂ ಅಪಾರ ನಂಬಿಕೆಯಿದೆ. ಆದರೆ, ಇತ್ತೀಚೆಗೆ ಲಾಡುವಿನಲ್ಲಿ ಹಂದಿಯ ಚರ್ಮದ ಕೊಬ್ಬು, ಮೀನಿನ ಎಣ್ಣೆ ಸೇರಿಸುತ್ತಿದ್ದಾರೆಂಬ ವಿಷಯ ಸಾರ್ವಜನಿಕಲ್ಲಿ ತೀವ್ರ ವಿರೋಧ ಎದುರಿಸುತ್ತಿದೆ ಎಂದರು.
ಕೆಲವು ಧರ್ಮದ್ರೋಹಿಗಳು ಮತ್ತು ಸರ್ಕಾರಿ ಲಂಚಕೋರರು ದುರುದ್ದೇಶದಿಂದ ಹಿಂದೂ ಧರ್ಮಕ್ಕೆ ದ್ರೋಹ ಬಗೆದಿರುವುದಲ್ಲದೇ ಕೋಟ್ಯಂತರ ಹಿಂದೂ ಭಕ್ತಾಧಿಗಳ ಮನಸ್ಸಿಗೆ ಘಾಸಿಯುನ್ನುಂಟು ಮಾಡಿದೆ. ಇದರಿಂದ ರೊಚ್ಚಿಗೆದ್ದು ವಿವಿಧ ಸಂತರು, ಮಠಾಧೀಶರು, ಧಾರ್ಮಿಕ ಮುಖಂಡರು ಹಾಗೂ ಭಕ್ತಾಧಿಗಳ ಕೋಪ ವಿಭಿನ್ನ ರೀತಿಯಲ್ಲಿ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರ ತಕ್ಷಣವೇ ಎಲ್ಲಾ ಹಿಂದೂ ದೇವಾಲಯಗಳನ್ನು ತಮ್ಮ ನಿಯಂತ್ರಣದಿಂದ ಬಿಡುಗಡೆಗೊಳಿಸಬೇಕು. ಪ್ರಾದೇಶಿಕ ವ್ಯವಸ್ಥೆಯಡಿ ಹಿಂದೂ ಸಂತರು ಮತ್ತು ಭಕ್ತರಿಗೆ ಒಪ್ಪಿಸಲು ಪ್ರೇರೇಪಿಸಲು ದಯಪಾಲಿಸಬೇಕು. ಪವಿತ್ರ ಸಂತರು ಹಲವಾರು ವರ್ಷಗಳ ಅನುಭವ ಮತ್ತು ಸತ್ಯಾಸತ್ಯತೆ ಅರಿತು, ಚರ್ಚಿಸಿದ ನಂತರ ನಿರ್ಧರಿಸಿದ್ದು ಈಗಾಗಲೇ ಈ ಸ್ವರೂಪ ಹಲವಾರು ಸ್ಥಳಗಳಲ್ಲಿ ಯಶಸ್ವಿಯಾಗಿ ಬಳಸಲ್ಪಡುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಉಪಾಧ್ಯಕ್ಷ ಯೋಗೇಶ್ ರಾಜ್ ಅರಸ್, ಸಹ ಕಾರ್ಯದರ್ಶಿ ಅಮಿತ್ ಗೌಡ, ಬಜರಂಗದಳ ಜಿಲ್ಲಾ ಸಹ ಸಂಯೋಜಕ ಶ್ಯಾಮ್ ವಿ. ಗೌಡ. ನಗರ ಉಪ ಅಧ್ಯಕ್ಷ ದೇವು, ಸಂಯೋಜಕ ಸುನಿಲ್, ಸಹ ಸಂಯೋಜಕ ರವಿ, ಮುಖಂಡರಾದ ಕಿರಣ್, ಗುರು, ಆಕಾಶ್, ಕಿಶೋರ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪೋಟೋ ಫೈಲ್ ನೇಮ್ 26 ಕೆಸಿಕೆಎಂ 2ಹಿಂದೂ ಧಾರ್ಮಿಕ ಮತ್ತು ತೀರ್ಥ ಕ್ಷೇತ್ರಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮುಖಂಡರು ಗುರುವಾರ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.