ಸಾರಾಂಶ
ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ವತಿಯಿಂದ ಬಂಜಾರ ಸಮುದಾಯದವರು ಹೆಚ್ಚಾಗಿ ವಾಸವಾಗಿರುವ ತಾಲೂಕಿನ ಅರಳಿಕೊಪ್ಪ ಗ್ರಾಮದಲ್ಲಿ ಧರ್ಮ ಜಾಗೃತಿ ಸಭೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಭದ್ರಾವತಿ
ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ವತಿಯಿಂದ ಬಂಜಾರ ಸಮುದಾಯದವರು ಹೆಚ್ಚಾಗಿ ವಾಸವಾಗಿರುವ ತಾಲೂಕಿನ ಅರಳಿಕೊಪ್ಪ ಗ್ರಾಮದಲ್ಲಿ ಧರ್ಮ ಜಾಗೃತಿ ಸಭೆ ನಡೆಸಲಾಯಿತು.ಧರ್ಮ ಜ್ಯೋತಿ ಹಿಡಿದು ಭಜನೆ, ಸಂಕೀರ್ತನೆಯೊಂದಿಗೆ ಸದಸ್ಯರು ಬಂಜಾರ ಸಮುದಾಯದ ಸೇವಾಲಾಲ್ ಗುರುಗಳಾದ ಕುಂಚೇನಹಳ್ಳಿ ಶನೇಶ್ವರ ದೇವಸ್ಥಾನ ಮಠದ ಶ್ರೀ ನಾಗರಾಜ ನಾಯ್ಕ ಸ್ವಾಮೀಜಿ ಮತ್ತು ವಿಜಯಪುರ ಕೊಟ್ಟೂರು ಸೇವಾಲಾಲ್ ಮಠದ ಶ್ರೀ ಬಸವರಾಜ ಸ್ವಾಮೀಜಿಯವರ ನೇತೃತ್ವದಲ್ಲಿ ಗ್ರಾಮದೇವರುಗಳ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರು.
ಗ್ರಾಮದ ಕೆಲವು ಮನೆಗಳಲ್ಲಿ ಸ್ವಾಮೀಜಿಯವರು ಪಾದ ಪೂಜೆಯನ್ನು ಸ್ವೀಕರಿಸಿ ನಂತರ ಗ್ರಾಮದ ಸೇವಾಲಾಲ್ ದೇವಸ್ಥಾನದ ಆವರಣದಲ್ಲಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ಗ್ರಾಮದ ಪ್ರಮುಖ ಕಾರ್ಯಕರ್ತರಾದ ಪ್ರೇಮಾ ನಾಯ್ಕರವರು ವಹಿಸಿದ್ದರು.ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಕಾರ್ಯಕಾರಿಣಿ ಹಾ. ರಾಮಪ್ಪ, ಪ್ರಾಂತ್ಯ ಧರ್ಮ ಪ್ರಸಾರ ವಿಭಾಗದ ನಾರಾಯಣ ವರ್ಣೇಕರ್, ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿ ಆನಂದರಾವ್, ಗ್ರಾಮಾಂತರ ವಿಭಾಗದ ಅಧ್ಯಕ್ಷ ಮುತ್ತು ರಾಮಲಿಂಗಂ, ವಿಶ್ವೇಶ್ವರಯ್ಯ ಪ್ರಖಂಡದ ಸತೀಶ್ಚಂದ್ರ, ಮಂಜುನಾಥ್, ರೇಣುಕಯ್ಯ ಲೀಲಾವತಿ ಮತ್ತು ಯಶೋಧಮ್ಮ ಹಾಗೂ ಪ್ರಮುಖ ಸದಸ್ಯರು ಮತ್ತು ಸುಮಾರು ೨೦೦ಕ್ಕೂ ಹೆಚ್ಚಿನ ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು. ನಂತರ ಕಾರ್ತಿಕ ದೀಪೋತ್ಸವ ನಡೆಸಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))