ಸಾರಾಂಶ
‘ಭಜನ್ ವಿಭೀಷಣ್ ಸ್ಮೃತಿ ದಿವಸ್’ ಪ್ರಯುಕ್ತ ಜಿಲ್ಲಾ ಬಿಜೆಪಿ ವತಿಯಿಂದ ವಿವಿಧ ಪ್ರಕೋಷ್ಠಗಳ ಸಹಯೋಗದಲ್ಲಿ ಆಚಾರ್ಯ ಮಾರ್ಗ ಜಂಕ್ಷನ್‌ನಿಂದ ಜಿಲ್ಲಾ ಬಿಜೆಪಿ ಕಚೇರಿ ವರೆಗೆ ಗುರುವಾರ ಮೌನ ಮೆರವಣಿಗೆ ನಡೆಯಿತು.
ಉಡುಪಿ: 1947ರಲ್ಲಿ ನಡೆದ ದೇಶ ವಿಭಜನೆಯ ಕರಾಳ ಇತಿಹಾಸವನ್ನು ನೆನಪಿಸುವ ‘ಭಜನ್ ವಿಭೀಷಣ್ ಸ್ಮೃತಿ ದಿವಸ್’ ಪ್ರಯುಕ್ತ ಜಿಲ್ಲಾ ಬಿಜೆಪಿ ವತಿಯಿಂದ ವಿವಿಧ ಪ್ರಕೋಷ್ಠಗಳ ಸಹಯೋಗದಲ್ಲಿ ಆಚಾರ್ಯ ಮಾರ್ಗ ಜಂಕ್ಷನ್‌ನಿಂದ ಜಿಲ್ಲಾ ಬಿಜೆಪಿ ಕಚೇರಿ ವರೆಗೆ ಗುರುವಾರ ಸಂಜೆ ಮೌನ ಮೆರವಣಿಗೆ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ನೇತೃತ್ವ ವಹಿಸಿದ್ದರು.
ಬಳಿಕ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕಾರ್ಕಳದ ನ್ಯಾಯವಾದಿ ಸುವ್ಹೃತ್ ಕುಮಾರ್ ಅವರಿಂದ ‘ದೇಶ ವಿಭಜನೆಯ ಕರಾಳ ಇತಿಹಾಸ’ದ ಕುರಿತು ವಿಸ್ತೃತ ಉಪನ್ಯಾಸ ಕಾರ್ಯಕ್ರಮ ನಡೆಯಿತು. ದೇಶ ವಿಭಜನೆಯ ಕರಾಳತೆಯಲ್ಲಿ ಬೆಂದು ಮಡಿದ ಲಕ್ಷಾಂತರ ಚೇತನಗಳ ಗೌರವಾರ್ಥವಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಜಿಲ್ಲಾ ಪ್ರಕೋಷ್ಠಗಳ ಸಹ ಸಂಯೋಜಕ ಶಂಕರ ಅಂಕದಕಟ್ಟೆ ಸಹಿತ ಪಕ್ಷದ ರಾಜ್ಯ, ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಸಹಿತ ವಿವಿಧ ಸ್ಥರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ದಿಲೇಶ್ ಶೆಟ್ಟಿ ಸ್ವಾಗತಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಗರ ಪ್ರಕೋಷ್ಠ ಸಂಚಾಲಕ ಮಧುಕರ ಮುದ್ರಾಡಿ ವಂದಿಸಿದರು.