ಸಾರಾಂಶ
ಸಿಆರ್‌ಪಿಸಿ 164 ನಿಯಮದಂತೆ ಸಂತ್ರಸ್ತೆ ಹೇಳಿಕೆ ದಾಖಲಾಗಿದೆ. ತನಿಖಾಧಿಕಾರಿ ಮಂಜಪ್ಪ ನೇತೃತ್ವದಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.
ಕಾರ್ಕಳ: ಕಾರ್ಕಳದ ಯುವತಿ ಮೇಲಿನ ಅತ್ಯಾಚಾರ ಕ್ಕೆ ಸಂಬಂಧಿಸಿದಂತೆ ಕಾರ್ಕಳದ ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಸಂತ್ರಸ್ತ ಯುವತಿಯನ್ನು ಕಾರ್ಕಳ ಪೊಲೀಸರು ಬುಧವಾರ ಹಾಜರು ಪಡಿಸಿದ್ದಾರೆ.
ಸಿಆರ್ ಪಿಸಿ 164 ನಿಯಮದಂತೆ ಸಂತ್ರಸ್ತೆ ಹೇಳಿಕೆ ದಾಖಲಾಗಿದೆ. ತನಿಖಾಧಿಕಾರಿ ಮಂಜಪ್ಪ ನೇತೃತ್ವದಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.ಕಳೆದ ಶುಕ್ರವಾರ ಕಾರ್ಕಳ ಕುಕ್ಕುಂದೂರು ಗ್ರಾಮದ ಯುವತಿ ಮೇಲೆ ಮಾದಕ ವಸ್ತು ನೀಡಿ ಅತ್ಯಾಚಾರ ಗೈಯ್ಯಲಾಗಿತ್ತು.
ಮಣಿಪಾಲ ಕೆಎಂಸಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬುಧವಾರ ಸಂತ್ರಸ್ತ ಯುವತಿಯನ್ನು ಕಾರ್ಕಳ ನ್ಯಾಯಾಲಯದ ಜಡ್ಜ್ ಮುಂದೆ ಹಾಜರು ಪಡಿಸಲಾಗಿದೆ.ಅತ್ಯಾಚಾರ ಹಾಗು ಮಾದಕವಸ್ತುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೆ ಅಲ್ತಾಫ್, ಕ್ಸೇವಿಯರ್ ಹಾಗೂ ಮಾದಕ ವಸ್ತುಗಳ ಸರಬರಾಜು ಮಾಡಿದ ಅಭಯ್ ಸೇರಿದಂತೆ ಇತರ ಇಬ್ಬರನ್ನು ಒಟ್ಟು 5 ಜನ ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.