ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಗೌಡ ಯುವ ವೇದಿಕೆಯಿಂದ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ ಜಿಪಿಎಲ್ ಸೀಸನ್ - 2 ಕ್ರಿಕೆಟ್ ಕೂಟದ ಮಂಗಳವಾರ ನಡೆದ ಪಂದ್ಯದಲ್ಲಿ ಪ್ಲಾಂಟರ್ಸ್ ಕ್ಲಬ್, ಎಲೈಟ್ ಕ್ರಿಕೆಟ್ ಕ್ಲಬ್ ಸ್ಕ್ವಾಡ್-2, ಕಾಫಿ ಕ್ರಿಕೆಟರ್ಸ್ ತಂಡಗಳು ಜಯ ಸಾಧಿಸಿವೆ.ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡವು ಕಾಫಿ ಕ್ರಿಕೆಟರ್ಸ್ ವಿರುದ್ಧ 6 ವಿಕೆಟ್‌ಗಳ ಜಯ ಗಳಿಸಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕಾಫಿ ಕ್ರಿಕೆಟರ್ಸ್ ತಂಡ ನಿಗದಿತ 10 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿ 69 ರನ್‌ಗಳ ಟಾರ್ಗೆಟ್ ನೀಡಿತು. ದೀಪಕ್ 16 ಎಸೆತಗಳಿಗೆ 18 ರನ್ ಗಳಿಸಿದರು. ಪ್ಲಾಂಟರ್ಸ್ ಕ್ಲಬ್ ಪರ ಕೊಂಬಾರನ ರಂಜು ಮತ್ತು ತುಷಾರ್ ಮೂವನ ತಲಾ 2 ವಿಕೆಟ್ ಪಡೆದರು.
ನಂತರ ಬೆನ್ನಟ್ಟಿದ ಪ್ಲಾಂಟರ್ಸ್ ಕ್ಲಬ್ 8.2 ಓವರಿನಲ್ಲಿ 69 ರನ್ ಗಳಿಸುವ ಮೂಲಕ ಜಯ ಗಳಿಸಿದರು. ರೋಹನ್ 26 ಎಸೆತಗಳಿಗೆ 43 ರನ್ ಪಡೆದರು.ಎರಡನೇ ಪಂದ್ಯಾಟದಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ ಸ್ಕ್ವಾಡ್-2 ತಂಡ ದಿ ಮರಗೋಡಿಯನ್ಸ್ ತಂಡದ ವಿರುದ್ಧ 35 ರನ್‌ಗಳ ಗೆಲುವು ದಾಖಲಿಸಿತು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಎಲೈಟ್ ತಂಡ 10 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 126 ರನ್ ಕಲೆ ಹಾಕಿತು. ತಂಡದ ಪರ ರಾಹುಲ್ ಸತತ ನಾಲ್ಕನೇ ಅರ್ಧ ಶತಕ ದಾಖಲಿಸಿದರು. 27 ಎಸೆತಗಳಲ್ಲಿ 68 ರನ್ ಗಳಿಸಿದರು. 7 ಬೌಂಡರಿ, 4 ಸಿಕ್ಸರ್ ಬಾರಿಸಿದರು. ಮರಗೋಡಿಯನ್ಸ್ ಪರ ಶರ್ವಿನ್ 2 ವಿಕೆಟ್ ಪಡೆದರು. ಗುರಿ ಬೆನ್ನತ್ತಿದ ಮರಗೋಡಿಯನ್ಸ್ ತಂಡ 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 91 ಗಳಿಸಿ ಸೋಲೊಪ್ಪಿಕೊಂಡಿತು. ಎಲೈಟ್ ತಂಡದ ಪರ ಹುದೇರಿ ತಮ್ಮಣ್ಣ 3 ವಿಕೆಟ್, ಹೃತ್‌ಪೂರ್ವಕ್ ಕೂರನ 2 ವಿಕೆಟ್ ಪಡೆದರು.ಇದರೊಂದಿಗೆ ಆಡಿದ ನಾಲ್ಕು ಪಂದ್ಯಗಳ ನ್ನು ಗೆದ್ದ ಎಲೈಟ್ ತಂಡ ಬಿ-ಪೂಲ್ ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತು.
ಕಾಫಿ ಕ್ರಿಕೆಟರ್ಸ್ 4 ರನ್‌ಗಳಿಂದ ಕೂರ್ಗ್ ಹಾಕ್ಸ್ ತಂಡದ ವಿರುದ್ಧ ಜಯಗಳಿಸಿದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಕಾಫಿ ಕ್ರಿಕೆಟರ್ಸ್ ನಿಗದಿತ 10 ಓವರ್‌ಗಳಿಗೆ 4 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿ 77 ರನ್‌ಗಳ ಟಾರ್ಗೆಟ್ ನೀಡಿದರು. ಪವನ್ 29 ಎಸೆತಕ್ಕೆ 35 ರನ್ ಪಡೆದರು. ಕೂರ್ಗ್ ಹಾಕ್ಸ್ ಪರ ಹರ್ಷ ಕೊಂಬಾರನ 2 ವಿಕೆಟ್ ಪಡೆದರು.ನಂತರ ಬೆನ್ನಟ್ಟಿದ ಕೂರ್ಗ್ ಹಾಕ್ಸ್ 72 ರನ್ ಗಳಿಸಿ 4 ರನ್‌ಗಳಿಂದ ಸೋಲೊಪ್ಪಿಕೊಂಡರು. ಕೀರ್ತನ್ ಕಾಳೆಮನೆ 24 ಎಸೆತಕ್ಕೆ 34 ರನ್ ಪಡೆದರು. ಕಾಫಿ ಕ್ರಿಕೆಟರ್ಸ್ ಪರ ದೀಪಕ್, ತಳೂರು ವಿಕ್ಕಿ, ಪವನ್ ತಲಾ ಒಂದು ವಿಕೆಟ್ ಪಡೆದರು. ಕೂರ್ಗ್ ಹಾಕ್ಸ್ ತಂಡದಲ್ಲಿ ಮಹಿಳಾ ಆಟಗಾರರ್ತಿ ಕುಕ್ಕೇರ ಬೆಳಕು ಬೊಳ್ಳಮ್ಮ ಆಡಿ ಗಮನ ಸೆಳೆದರು.
ಮುಂದಿನ ಪಂದ್ಯಾಟಗಳು.27ರ ಶನಿವಾರ: ಕ್ವಾಲಿಫೈಯರ್ 1: 8.45 AM: ಕೂರ್ಗ್ ವಾರಿಯರ್ಸ್ v/s ಎಲೈಟ್ ಕ್ರಿಕೆಟ್ ಕ್ಲಬ್ 2
ಎಲಿಮಿನೇಟರ್ ಪಂದ್ಯ: 12.00 ಎಲೈಟ್ ಕ್ರಿಕೆಟ್ ಕ್ಲಬ್ v/s ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ..