ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ವಿಜಯಪುರ ಲೋಕಸಭೆ ಮೀಸಲು ಮತಕ್ಷೇತ್ರದಿಂದ ಸಂಸದ ರಮೇಶ ಜಿಗಜಿಣಗಿ ಅವರು ಪುನರಾಯ್ಕೆಯಾಗುತ್ತಿದ್ದಂತೆ ಜೆಡಿಎಸ್ ಪಕ್ಷದಿಂದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಪರಸ್ಪರ ಗುಲಾಲಎರಚಿಕೊಂಡು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣದವರೆಗೆ ಎತ್ತಿನ ಚಕ್ಕಡಿಯಲ್ಲಿ ಮುಖಂಡರಾದ ಅಪ್ಪುಗೌಡ ಪಾಟೀಲ, ಜಗದೀಶ ಕೊಟ್ರಶೆಟ್ಟಿ , ಬಿ.ಕೆ.ಕಲ್ಲೂರ ಸೇರಿದಂತೆ ಇತರರನ್ನು ನಿಲ್ಲಿಸಿ ಕಾರ್ಯಕರ್ತರು ಜಯಘೋಷ ಹಾಕುತ್ತಾ ಮೆರವಣಿಗೆ ಮೂಲಕ ತೆರಳಿ ಪುನಃ ಬಸವೇಶ್ವರ ವೃತ್ತಕ್ಕೆ ಮೆರವಣಿಗೆ ಬಂದ ನಂತರ ಜರುಗಿದ ವಿಜಯೋತ್ಸವದಲ್ಲಿ ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ ಮನಗೂಳಿ, ಜೆಡಿಎಸ್ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಮಾತನಾಡಿ, ಈ ಸಲ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದೊಂದಿಗೆ ಪಕ್ಷದ ವರಿಷ್ಠರು ಮೈತ್ರಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ವಿಜಯಪುರ ಲೋಕಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಗೆಲುವಿಗೆ ಬಿಜೆಪಿ ಪಕ್ಷದೊಂದಿಗೆ ನಿರಂತರವಾಗಿ ಶ್ರಮಿಸಿದ್ದಾರೆ. ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದಾಗಿ ಅವರಿಗೆ ಹೆಚ್ಚಿನ ಮತಗಳು ಬಂದಿವೆ. ರಮೇಶ ಜಿಗಜಿಣಗಿ ಅವರು ನಾಲ್ಕನೇ ಬಾರಿಗೆ ವಿಜಯಪುರ ಮತಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ವಿಜಯಪುರ ಲೋಕಸಭಾ ಮತಕ್ಷೇತ್ರದಲ್ಲಿ ದಾಖಲೆ ಮಾಡಿದ್ದಾರೆ. ಇವರು ಸರಳ ಸಜ್ಜನ ರಾಜಕಾರಣಿಯಾಗಿದ್ದಾರೆ. ಇವರಿಂದ ಜಿಲ್ಲೆಯ ಅಭಿವೃದ್ಧಿ ಇನ್ನಷ್ಟು ಮುಂಬರುವ ದಿನಗಳಲ್ಲಿ ಆಗುತ್ತದೆ ಎಂದರು.
ವಿಜಯೋತ್ಸವದಲ್ಲಿ ಮುಖಂಡರಾದ ಬಿ.ಕೆ. ಕಲ್ಲೂರ, ರವಿ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಅವಟಿ, ಅಂಬೋಜಿ ಪವಾರ, ಸುರೇಶ ಚಿಂಚೋಳಿ,ಮನ್ನಾನ ಶಾಬಾದಿ, ವೀರಗಂಗಾಧರಯ್ಯ ಕಾಳಹಸ್ತೇಶ್ವರಮಠ, ಎಸ್.ಜಿ. ಕಂದಗಲ್ಲ, ವೈಭವ ಪಾಟೀಲ, ಅಶೋಕ ಗುಳೇದ, ಲಿಂಗಪ್ಪ ಗುಂಡಳ್ಳಿ, ಶಂಕರಗೌಡ ಪಾಟೀಲ, ಅನಿಲ ಸಾರವಾಡ, ರವಿ ಕಾಡಯ್ಯಮಠ, ಮಲ್ಲಿಕಾರ್ಜುನ ಬಸರಕೋಡ, ಮುರುಗೇಶ ಗೊಳಸಂಗಿ, ಪರಶುರಾಮ ಗುಂಡಳ್ಳಿ, ಸೋಮು ನಾಗರಾಳ, ಬಾಲಚಂದ್ರ ನಾಗೊಂಡ, ಮಹಾಂತೇಶ ಅವಟಿ, ಶಂಕ್ರೆಪ್ಪ ರಾಯಗೊಂಡ, ಸಂಜೀವ ಬಿರಾದಾರ ಸೇರಿದಂತೆ ಇತರರು ಇದ್ದರು.