ರಾಮನಗರ: ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಉಪಚುನಾವಣೆಗಳ ಮತ ಎಣಿಕೆ ವೇಳೆ ನಗರ ಪ್ರದೇಶ ಬಂದಾಗ ಸ್ವಲ್ಪ ಹಿಂದೆ ಮುಂದೆ ಆಗಬಹುದು. ಆದರೆ, ಗೆಲ್ಲಲು ಏನು ತೊಂದರೆ ಇರಲಿಲ್ಲ ಎಂದರು.ತಮಿಳುನಾಡಿನಲ್ಲಿ ನಾನು ಏಳು ದಿನಗಳ ಕಾಲ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದೆ. ಟಿವಿಕೆ ಪಕ್ಷದ ಬಗ್ಗೆ ಜನಾಕರ್ಷಣೆ ಇತ್ತು. ಆ ಜನಾಕರ್ಷಣೆ ಮತಗಳಾಗಿ ಪರಿವರ್ತನೆಯಾದಂತೆ ಕಾಣುತ್ತಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮೂರು ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದರು. ಸಹಜವಾಗಿ ಆಡಳಿತ ವಿರೋಧಿ ಅಲೆ ಇರುತ್ತದೆ. ಅಲ್ಲದೆ ಎಸ್ ಐಆರ್ ನಿಂದಾಗಿ ಕೆಲವು ತೊಂದರೆಗಳಾಗಿವೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಾದ ಪರಿಸ್ಥಿತಿ ಇದೆ. ಯಾವ ರೀತಿ ಆಡಳಿತ ವಿರೋಧಿ ಅಲೆ ಇತ್ತೆಂದು ಮಾಹಿತಿ ಇಲ್ಲ. ಅಲ್ಲಿ ಕಾಂಗ್ರೆಸ್ ಗೆ ಏನು ಹೆಚ್ಚಿನ ನಿರೀಕ್ಷೆ ಇರಲಿಲ್ಲ ಎಂದು ಹೇಳಿದರು.
4ಕೆಆರ್ ಎಂಎನ್ 3.ಜೆಪಿಜಿಸುಧಾಕರ್
