ಕುಪ್ಪಂಡ, ಮತ್ರಂಡ, ಪರದಂಡ ತಂಡಕ್ಕೆ ಜಯ

| Published : Apr 18 2025, 12:37 AM IST

ಸಾರಾಂಶ

ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಹಾಕಿ ಕಪ್‌ನ ಗುರುವಾರ ನಡೆದ ಪಂದ್ಯದಲ್ಲಿ ಕುಪ್ಪಂಡ, ಮತ್ರಂಡ, ಪರದಂಡ ತಂಡಗಳು ಜಯ ಸಾಧಿಸಿವೆ.

ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಮುದ್ದಂಡ ಹಾಕಿ

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಹಾಕಿ ಕಪ್‌ನ ಗುರುವಾರ ನಡೆದ ಪಂದ್ಯದಲ್ಲಿ ಕುಪ್ಪಂಡ, ಮತ್ರಂಡ, ಪರದಂಡ ತಂಡಗಳು ಜಯ ಸಾಧಿಸಿವೆ.

ಕುಪ್ಪಂಡ (ಕೈಕೇರಿ) ಮತ್ತು ನಾಗಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಕುಪ್ಪಂಡ ತಂಡ ಗೆಲುವು ದಾಖಲಿಸಿತು. ಕುಪ್ಪಂಡ ಪರ ಸೋಮಯ್ಯ 2, ನಾಚಪ್ಪ, ಚಂಗಪ್ಪ ಹಾಗೂ ದ್ಯಾನ್ ತಲಾ 1 ಗೋಲು ದಾಖಲಿಸಿದರು.

ಮತ್ರಂಡ ಮತ್ತು ಅಮ್ಮಂಡ ನಡುವಿನ ಪಂದ್ಯದಲ್ಲಿ 2 ತಂಡಗಳು ನಿಗದಿತ ಸಮಯದಲ್ಲಿ ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 4-2 ಗೋಲುಗಳ ಅಂತರದಲ್ಲಿ ಮತ್ರಂಡ ಜಯ ಸಾಧಿಸಿತು.ಅನ್ನಡಿಯಂಡ ಮತ್ತು ಪರದಂಡ ನಡುವಿನ ಪಂದ್ಯದಲ್ಲಿ 6-2 ಗೋಲುಗಳ ಅಂತದಲ್ಲಿ ಪರದಂಡ ಜಯ ಸಾಧಿಸಿತು.

ಬೊಳ್ಳೇರ ಮತ್ತು ಮುಕ್ಕಾಟಿರ (ಬೋಂದ) ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಮುಕ್ಕಾಟಿರ ಗೆಲುವು ಸಾಧಿಸಿತು. ಪಾಡೆಯಂಡ ಮತ್ತು ಐನಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಐನಂಡ ತಂಡ ಗೆಲುವು ದಾಖಲಿಸಿತು. ನೆಲ್ಲಮಕ್ಕಡ ಮತ್ತು ಮುಕ್ಕಾಟಿರ (ಕಡಗದಾಳು) ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ನೆಲ್ಲಮಕ್ಕಡ ತಂಡ ಜಯ ಸಾಧಿಸಿತು. ಕುಂಡ್ಯೋಳಂಡ ಮತ್ತು ನಾಪಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ನಾಪಂಡ ತಂಡ ಗೆಲುವು ಸಾಧಿಸಿತು. ಕೇಲೇಟಿರ ಮತ್ತು ಕೋಳೆರ ನಡುವೆ ನಡೆದ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಕೋಳೆರ ತಂಡ ಗೆಲುವು ದಾಖಲಿಸಿತು. ಚೆಕ್ಕೇರ ಮತ್ತು ಶಾಂತೆಯಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ನಿಗದಿತ ಅವಧಿಯಲ್ಲಿ ತಲಾ 1 ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 3-1 ಗೋಲುಗಳ ಅಂತರದಲ್ಲಿ ಚೆಕ್ಕೇರ ಜಯ ಸಾಧಿಸಿತು. ಕೂತಂಡ ಮತ್ತು ಅಲ್ಲಪಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಕೂತಂಡ ತಂಡ ಗೆಲುವು ದಾಖಲಿಸಿತು. ಕೂತಂಡ ಪರ ಸಂತೋಷ್ ಮೇದಪ್ಪ 2 ಹಾಗೂ ಬೋಪಣ್ಣ 1 ಗೋಲು ದಾಖಲಿಸಿದರು. ಅಲ್ಲಪಂಡ ಗಿರಿ ಚೆಂಗಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ಕುಲ್ಲಚಂಡ ಮತ್ತು ಪೆಮ್ಮಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂಗತರದಲ್ಲಿ ಪೆಮ್ಮಂಡ ತಂಡ ಜಯ ಸಾಧಿಸಿತು. ಪೆಮ್ಮಂಡ ಪರ ಲವಿನ್ ಅಯ್ಯಪ್ಪ, ಸುಹಾಸ್ ಸೋಮಣ್ಣ ಹಾಗೂ ಸೋಮಣ್ಣ ಪಿ.ಎ.ತಲಾ 1 ಗೋಲು ದಾಖಲಿಸಿದರು. ಕುಲ್ಲಚಂಡ ಸುಜನ್ ಬೋಪಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.