ಸಾರಾಂಶ
ಚನ್ನಪಟ್ಟಣ: ಉಪ ಚುನಾವಣೆಯ ಫಲಿತಾಂಶ ಘೋಷಣೆಗೂ ಮುನ್ನವೇ ಕಾಂಗ್ರೆಸ್‌ನ ವಿಜಯೋತ್ಸವ ವಾಹನ ಸಿದ್ಧಗೊಂಡಿದ್ದು ವಿಶೇಷವೆನಿಸಿತು.
ಚನ್ನಪಟ್ಟಣ: ಉಪ ಚುನಾವಣೆಯ ಫಲಿತಾಂಶ ಪೂರ್ಣಗೊಳ್ಳುವ ಮುನ್ನವೇ ಕಾಂಗ್ರೆಸ್‌ನ ವಿಜಯೋತ್ಸವ ವಾಹನ ಸಿದ್ಧಗೊಂಡಿದ್ದು ವಿಶೇಷವೆನಿಸಿತು. ರಾಮನಗರದ ಅರ್ಚಕರಹಳ್ಳಿ ಬಳಿ ಇರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚನ್ನಪಟ್ಟಣ ಉಪಚುನಾವಣೆಯ ಮತ ಎಣಿಕೆ ಕಾರ್ಯ ನಡೆದಿತ್ತು. ೭ನೇ ಸುತ್ತಿನ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮುನ್ನಡೆ ಸಾಧಿಸಿದರು. ಅವರು ಮುನ್ನಡೆ ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮದಲ್ಲಿ ತೊಡಗಿದ್ದರೆ, ಇತ್ತ ವಿಜಯೋತ್ಸವ ವಾಹನ ಸಹ ಸಿದ್ಧಗೊಂಡಿದ್ದು, ಕಾಂಗ್ರೆಸ್‌ಗೆ ಗೆಲುವಿನ ಬಗ್ಗೆ ಇದ್ದ ವಿಶ್ವಾಸವನ್ನು ತೋರಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ ಮನೆ ಮಕ್ಕಳ ಟ್ರೆಂಡ್!
ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಗೆಲುವು ಸಾಧಿಸುತ್ತಿದ್ದಂತೆ ಮನೆ ಮಕ್ಕಳು ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಶುರುವಾಗಿದೆ. ಬೇರೆ ಜಿಲ್ಲೆಯವರನ್ನು ಬಿಟ್ಟು ಮನೆ ಮಗನನ್ನು ಗೆಲ್ಲಿಸಿ ಎಂದೇ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರೂ ಪ್ರಚಾರ ನಡೆಸಿದ್ದರು. ಇದೀಗ ಸಿಪಿವೈ ಗೆಲುವು ಸಾಧಿಸುತ್ತಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ಶಾಸಕರಾದ ಬಾಲಕೃಷ್ಣ, ಇಕ್ಬಾಲ್ ಹುಸೇನ್, ಸಿ.ಪಿ.ಯೋಗೇಶ್ವರ್ ಅವರನ್ನೊಳಗೊಂಡ ಭಾವಚಿತ್ರವಿರುವ ಮನೆ ಮಕ್ಕಳು ಎಂಬ ಪೋಸ್ಟ್ ಅನ್ನು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.