ರಾಮನಗರ: ಸೇವೆ ಕಾಯಂ , ಮಾಸಾಶನವನ್ನು 5 ಸಾವಿರ ರು.ವರೆಗೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಬಳಿಯಿಂದ ಆರಂಭವಾದ ವಿಶೇಷ ಚೇತನರ ವಿಧಾನಸೌಧ ಚಲೋ ಪಾದಯಾತ್ರೆಗೆ ವಿಪಕ್ಷ ನಾಯಕ ಆರ್.ಅಶೋಕ್ ಶುಕ್ರವಾರ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು
ರಾಮನಗರ: ಸೇವೆ ಕಾಯಂ , ಮಾಸಾಶನವನ್ನು 5 ಸಾವಿರ ರು.ವರೆಗೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಬಳಿಯಿಂದ ಆರಂಭವಾದ ವಿಶೇಷ ಚೇತನರ ವಿಧಾನಸೌಧ ಚಲೋ ಪಾದಯಾತ್ರೆಗೆ ವಿಪಕ್ಷ ನಾಯಕ ಆರ್.ಅಶೋಕ್ ಶುಕ್ರವಾರ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಕಳೆದ 26 ದಿನಗಳಿಂದ ವಿಶೇಷ ಚೇತನರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ರಾಜ್ಯಸರ್ಕಾರ ಬೇಡಿಕೆಗಳನ್ನು ಈಡೇರಿಸಲಿಲ್ಲ. ಈ ಹಿನ್ನೆಲೆಯಲ್ಲಿ ರಾಮನಗರದಿಂದ ವಿಧಾನಸೌಧದವರೆಗೆ ಪ್ರಾರಂಭಿಸಿದ ಪಾದಯಾತ್ರೆಗೆ ವಿಪಕ್ಷ ನಾಯಕ ಆರ್.ಅಶೋಕ್ ಚಾಲನೆ ನೀಡಿ ವಿಕಲಚೇತನರೊಂದಿಗೆ ಹೆಜ್ಜೆ ಹಾಕಿದರು.ಮಹಾತ್ಮ ಗಾಂಧಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರದೊಂದಿಗೆ ವಿಶೇಷ ಚೇತನರು ಕುಳಿತಿದ್ದ ವ್ಹೀಲ್ ಚೇರ್ ಅನ್ನು ತಳ್ಳುತ್ತಾ ಆರ್.ಅಶೋಕ್ ಪಾದಯಾತ್ರೆಯಲ್ಲಿ ಸಾಗಿದರು. ಪ್ರತಿಭಟನಾನಿರತ ವಿಕಲಚೇತನರು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಕಲಚೇತನರು ''''''''ವಿಶೇಷ ಚೇತನರ ಸ್ವಯಂ ಉದ್ಯೋಗ ಕಸಿದುಕೊಳ್ಳಬೇಡಿ'''''''', ''''''''ಅಂಗವಿಕಲರ ಮಾಸಾಶನ 5 ಸಾವಿರ ರು. ಜಾರಿಯಾಗಬೇಕು'''''''', ''''''''ವಿಶೇಷ ಚೇತನರನ್ನು ಬದುಕಲು ಅವಕಾಶ ಕೊಡಿ'''''''', ''''''''ಅಂಗವಿಕಲರ ಪಿಂಚಣಿ ಹಣ ಕೂಡಲೇ ಜಾರಿ ಆಗಲೇಬೇಕು''''''''... ಎಂಬ ಪ್ಲೇ ಕಾರ್ಡ್ ಗಳನ್ನು ಪ್ರದರ್ಶಿಸಿದರು.ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧೀನದಲ್ಲಿ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ''''''''ಕಾರ್ಯಕರ್ತರಾದ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ ಎಂಆರ್ ಡಬ್ಲ್ಯೂ/ ವಿಆರ್ ಡಬ್ಲ್ಯೂ/ ಯುಆರ್ ಡಬ್ಲ್ಯೂ ಹಾಗೂ ರಾಜ್ಯ ಮತ್ತು ಜಿಲ್ಲಾ ಸಂಯೋಜಕರ ಸೇವೆಯನ್ನು ಕಾಯಂಗೊಳಿಸಬೇಕು. ವಿಕಲಚೇತನರ ಮಾಸಾಶನವನ್ನು 5,000 ರು. ವರೆಗೆ ಹೆಚ್ಚಿಸಬೇಕು. ಜೊತೆಗೆ ಕಳೆದ ಐದಾರು ತಿಂಗಳುಗಳಿಂದ ತಡೆಹಿಡಿಯಲಾಗಿರುವ ವಿಕಲಚೇತನರ ಮಾಸಾಶನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
ಪಾದಯಾತ್ರೆಯಲ್ಲಿ ನವ ಕರ್ನಾಟಕ ಎಂಆರ್ ಡಬ್ಲ್ಯೂ, ವಿಆರ್ ಡಬ್ಲ್ಯೂ, ಯುಆರ್ ಡಬ್ಲ್ಯೂ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಡಿ ಮೇಟಿ, ರಾಜ್ಯಾಧ್ಯಕ್ಷ ಫಕೀರ್ ಗೌಡ, ರಾಜ್ಯ ಸಂಚಾಲಕ ಅನಿಲ್ ಕೆ.ಗೌಡ , ಪದಾಧಿಕಾರಿಗಳಾದ ಯಶೋಧಾ, ನಾಗರಾಜು, ಗುರುಮಲ್ಲಮ್ಮ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ, ಮಾಜಿ ಜಿಲ್ಲಾಧ್ಯಕ್ಷ ಹುಳುವಾಡಿ ದೇವರಾಜು, ರಾಮನಗರ ಮಂಡಲ ಅಧ್ಯಕ್ಷ ಗೌತಮ್ ಗೌಡ, ಮಾಗಡಿ ಮಂಡಲ ಅಧ್ಯಕ್ಷ ಪ್ರಸಾದ್ ಗೌಡ, ಬೆಂಗಳೂರು ದಕ್ಷಿಣ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ್ ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.16ಕೆಆರ್ ಎಂಎನ್ 6.ಜೆಪಿಜಿ
ವಿಶೇಷ ಚೇತನರು ಕುಳಿತಿದ್ದ ವ್ಹೀಲ್ ಚೇರ್ ಅನ್ನು ತಳ್ಳುತ್ತಾ ಆರ್.ಅಶೋಕ್ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.