ವಿಶ್ವವಿಖ್ಯಾತ, ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣಿಯವಾದ ನಗರದ ಕುಪ್ಪಣ್ಣ ಪಾರ್ಕ್ ನಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಅ. 11 ರಿಂದ 21 ರವರೆಗೆ ಆಯೋಜಿಸಿರುವ ದಸರಾ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟಿಸಿದರು.
ಎಲ್.ಎಸ್. ಶ್ರೀಕಾಂತ್
ಕನ್ನಡಪ್ರಭ ವಾರ್ತೆ ಮೈಸೂರುವಿಶ್ವವಿಖ್ಯಾತ, ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣಿಯವಾದ ನಗರದ ಕುಪ್ಪಣ್ಣ ಪಾರ್ಕ್ ನಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಅ. 11 ರಿಂದ 21 ರವರೆಗೆ ಆಯೋಜಿಸಿರುವ ದಸರಾ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟಿಸಿದರು.
ಉದ್ಘಾಟನೆ ನಂತರ ಗಾಜಿನಮನೆಯಲ್ಲಿ ವಿವಿಧ ಬಗೆಯ ಹೂಗಳಿಂದ ನಿರ್ಮಿಸಿದ್ದ ವಿಧಾನಸೌಧ ಮಾದರಿಯನ್ನು ಸಚಿವರು ಹಾಗೂ ಅಧಿಕಾರಿಗಳೊಡನೆ ವೀಕ್ಷಿಸಿ, ಭಾರಿ ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಜಾಪ್ರಭುತ್ವ ಕಾಪಾಡುವ ಕೆಲಸ ಮಾಡುತ್ತಿದೆ:
ಈ ಬಾರಿ ದಸರಾ ಫಲಪುಷ್ಪ ಪ್ರದರ್ಶನವನ್ನು ಪ್ರಜಾಪ್ರಭುತ್ವ ಹಬ್ಬದ ವಿಷಯಾಧಾರಿತ ಮಾದರಿಯಲ್ಲಿ ಊಟಿ, ಪುಣೆ, ಕೊಲ್ಕತ್ತಾ ರಾಜ್ಯಗಳಿಂದ ತಂದಿರುವ ಸಾವಿರಾರು ವಿವಿಧ ಬಗೆಯ ಹೂಗಳಿಂದ ಪ್ರದರ್ಶಿಸಿದ್ದಾರೆ. ನಮ್ಮ ಸರ್ಕಾರದ ಉದ್ದೇಶವೂ ಪ್ರಜಾಪ್ರಭುತ್ವ ಕಾಪಾಡುವ ಕೆಲಸ ಮಾಡುತ್ತಿದೆ ಅದರಂತೆ ಫಲಪುಷ್ಪ ಪ್ರದರ್ಶನ ಆಯೋಜಿಸಿರುವಿದು ಸಂತಸ ತಂದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.ಗಾಜಿನಮನೆಯಲ್ಲಿ ವಿಧಾನಸೌಧ ಆಕರ್ಷಣೆ:
ಈ ಬಾರಿಯ ಫಲಪುಷ್ಪ ಪ್ರಮುಖ ಆಕರ್ಷಣಿಯವಾದ ಗಾಜಿನಮನೆಯಲ್ಲಿ ವಿವಿಧ ಪುಷ್ಪಗಳಿಂದ ವಿಧಾನಸೌಧವನ್ನು ನಿರ್ಮಿಸಲಾಗಿದೆ. 2 ಲಕ್ಷ ಕೆಂಪು ಗುಲಾಬಿ, 4 ಸಾವಿರ ಸೇವಂತಿಗೆ ಹಾಗೂ 25 ಸಾವಿರ ಗ್ರೀನ್ ಫೋಲಿಯಜ್ ಗಳನ್ನು ಬಳಸಿ ವಿಧಾನ ಸೌಧ ಮಾದರಿಯ ಪುಷ್ಪ ಪರಿಕಲ್ಪನೆಯನ್ನು ಗಾಜಿನಮನೆಯಲ್ಲಿ ನಿರ್ಮಿಸಲಾಗಿದೆ ಹಾಗೂ ಗಾಜಿನಮನೆ ಹೊರಗಡೆ ಚಿಕ್ಕ ಗಡಿಯಾರ ಮಾದರಿಯ ಪುಷ್ಪ, ಮತದಾನ ಜಾಗೃತಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪುಷ್ಪಕೃತಿ ಹೀಗೆ ಇನ್ನು ಹಲವಾರು ಪುಷ್ಪ ಪ್ರದರ್ಶನಗಳು ಪ್ರವಾಸಿಗರನ್ನು ಆಕರ್ಷಣೆ ಮಾಡಲಿದೆ.ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಸಿ. ಪುಟ್ಟರಂಗಶೆಟ್ಟಿ, ಶಾಸಕ ಕೆ. ಹರೀಶ್ ಗೌಡ, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ್, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ. ನರೇಂದ್ರ ಹಾಗೂ ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ್ ರೆಡ್ಡಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇದ್ದರು.