ವಿದ್ಯಾ ಅಧ್ಯಕ್ಷೆ, ದೀಪಾ ಉಪಾಧ್ಯಕ್ಷೆಯಾಗಿ ಆಯ್ಕೆ

| Published : Aug 18 2024, 01:49 AM IST

ವಿದ್ಯಾ ಅಧ್ಯಕ್ಷೆ, ದೀಪಾ ಉಪಾಧ್ಯಕ್ಷೆಯಾಗಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆಯ ಎರಡನೇ ಅವಧಿಗೆ ಸ್ಥಳೀಯ ನಗರಸಭೆಯ ನೂತನ ಅಧ್ಯಕ್ಷರಾಗಿ ವಾರ್ಡ್ ನಂ.೨ರ ವಿದ್ಯಾ ಪ್ರವೀಣ ದಭಾಡಿ ಹಾಗೂ ಉಪಾಧ್ಯಕ್ಷರಾಗಿ ವಾರ್ಡ್ ನಂ.೨೦ ರ ದೀಪಾ ಮಾರುತಿ ಗಾಡಿವಡ್ಡರ ಅವಿರೋಧವಾಗಿ ಆಯ್ಕೆಗೊಂಡರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನಗರಸಭೆಯ ಎರಡನೇ ಅವಧಿಗೆ ಸ್ಥಳೀಯ ನಗರಸಭೆಯ ನೂತನ ಅಧ್ಯಕ್ಷರಾಗಿ ವಾರ್ಡ್ ನಂ.೨ರ ವಿದ್ಯಾ ಪ್ರವೀಣ ದಭಾಡಿ ಹಾಗೂ ಉಪಾಧ್ಯಕ್ಷರಾಗಿ ವಾರ್ಡ್ ನಂ.೨೦ ರ ದೀಪಾ ಮಾರುತಿ ಗಾಡಿವಡ್ಡರ ಅವಿರೋಧವಾಗಿ ಆಯ್ಕೆಗೊಂಡರು.

೩೧ ಸದಸ್ಯರ ಬಲ ಹೊಂದಿರುವ ನಗರಸಭೆಯಲ್ಲಿ ೨೪ ಬಿಜೆಪಿ, ೫ ಕಾಂಗ್ರೆಸ್ ಹಾಗೂ ೨ ಪಕ್ಷೇತರರನ್ನು ಹೊಂದಿದೆ. ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಗೊಂಡ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ೨೨, ಸಂಸದ, ಶಾಸಕರು ಸೇರಿ ೨೪ರ ಹಾಜರಾತಿಯಿತ್ತು.

ಉಳಿದ ಬಿಜೆಪಿಯಿಂದ ಚುನಾಯಿತಗೊಂಡಿದ್ದ ವಾರ್ಡ್ ನಂ.೧ ಸದಸ್ಯೆ ಸಾವಿತ್ರಿ ಶೇಖರ ಹಕ್ಕಲದಡ್ಡಿ ಹಾಗೂ ವಾರ್ಡ್ ನಂ.೨೩ ರ ಸದಸ್ಯ ವಿಶ್ವನಾಥ ಸವದಿಯವರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಉಳಿದಂತೆ ಕಾಂಗ್ರೆಸ್‌ನ ಐವರು ಸದಸ್ಯರೂ ಗೈರು ಹಾಜರಿ ಕಂಡಿದ್ದರು.

ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದ್ದ ಕಾರಣ ಅವಿರೋಧವಾಗಿ ಆಯ್ಕೆಯಾಗಿದೆ ಎಂದು ಚುನಾವಣಾಧಿಕಾರಿಯಾಗಿದ್ದ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದರು.

ಕೊನೆಗೂ ಬಿಕ್ಕಟ್ಟು ಶಮನ:

ಶನಿವಾರ ಬೆಳಿಗಿನ ಜಾವದವರೆಗೂ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿ ಐವರಲ್ಲಿ ತೀವ್ರ ಪೈಪೋಟಿ ಎದುರಾಗಿತ್ತು. ಇದರಲ್ಲಿ ನಾಲ್ವರೂ ಒಂದೇ ಸಮುದಾಯದವರಾಗಿರುವುದು ಆಯ್ಕೆಯು ತೀವ್ರ ತಲೆನೋವುಂಟಾಗಿತ್ತು. ಕೊನೆಗೂ ವಿದ್ಯಾ ಪ್ರವೀಣ ದಭಾಡಿ ಆಯ್ಕೆಯಾದರು.

ಮೊದಲ ಗೆಲುವಿನಲ್ಲಿ ಎರಡೂ ಹುದ್ದೆ:

ಪ್ರಥಮ ಬಾರಿಗೆ ನಗರಸಭೆ ಪ್ರವೇಶ ಪಡೆದ ವಾರ್ಡ್ ನಂ.೨ ರ ಸದಸ್ಯೆ ವಿದ್ಯಾ ಪ್ರವೀಣ ದಭಾಡಿ ಈ ಮೊದಲ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಈ ಬಾರಿ ಮತ್ತೆ ಅಧ್ಯಕ್ಷ ಗದ್ದುಗೆ ಅಲಂಕರಿಸಿರುವುದು ವಿಶೇಷ.

---