ವಿದ್ಯಾನಿಕೇತನ ಶಾಲೇಲಿ ವಚನ ಕಂಠಪಾಠ ಸ್ಪರ್ಧೆ

| Published : Mar 27 2024, 01:07 AM IST

ಸಾರಾಂಶ

ವಿದ್ಯಾನಿಕೇತನ ಶಾಲೇಲಿ ವಚನ ಕಂಠಪಾಠ ಸ್ಪರ್ಧೆ ಆಯೋಜನೆ

ಕನ್ನಡಪ್ರಭ ವಾರ್ತೆ ಹಾಸನಶಿವಶರಣರ ಸಾಹಿತ್ಯ ವಿಚಾರಧಾರೆಗಳನ್ನು ಶೈಕ್ಷಣಿಕವಾಗಿ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನದಾಗಿ ಪ್ರಚಾರ ಮಾಡಿಕೊಂಡು ಬರುವಂತೆ ಸುತ್ತೂರು ಶ್ರೀ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿ ಮಾರ್ಗದರ್ಶನದಂತೆ ಶರಣ ಸಾಹಿತ್ಯ ಪರಿಷತ್ತು ಉತ್ತಮ ರೀತಿಯಲ್ಲಿ ದತ್ತಿಗಳು, ವಚನಗಳ ಕಂಠಪಾಠ ಸ್ಪರ್ಧೆಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಶಾಲನಗರ ಶರಣ ‌ಕೆ.ಎಸ್. ಮೂರ್ತಿ ತಿಳಿಸಿದರು.

ಹಾಸನ ಜಿಲ್ಲಾ ಅರಕಲಗೂಡು ತಾಲೂಕಿನ ರಾಮನಾಥಪುರ ಶ್ರೀ ವಿದ್ಯಾನಿಕೇತನ ಶಾಲೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ತಣ್ಣಿರುಹಳ್ಳ ಮಠದ ಶ್ರೀ ಶಿವಲಿಂಗಸ್ವಾಮಿಜಿ ದತ್ತಿ ಹಾಗೂ ಕಂಠಪಾಠ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾವು ಹೆಚ್ಚಿನ ಪ್ರಮಾಣದಲ್ಲಿ ಸಂಘಟನೆಯಾಗಲು ಎಲ್ಲಾ ಜಿಲ್ಲಾ ಘಟಕಗಳು ಶರಣ ಸಾಹಿತ್ಯ ಪರಿಷತ್ತಿಗೆ ಸದಸ್ಯರನ್ನು ಮಾಡಬೇಕು ಹಾಗೂ ದತ್ತಿಗಳನ್ನು ಸದಸ್ಯತ್ವವನ್ನು ಹೆಚ್ಚು ಹೆಚ್ಚು ಮಾಡುವ ಮೂಲಕ ಹಾಗೂ ಮಹಾಮನೆ ಸದಸ್ಯತ್ವ ಮಾಡಿ ಎಲ್ಲಾ ಪ್ರತಿ ಮನೆಗಳಿಗೂ ಶರಣ ತತ್ವ ತಿಳಿಯಲು ಶರಣರ ಮಹಾಮನೆ ಪುಸ್ತಕಗಳನ್ನು ತರಿಸಿಕೊಳ್ಳಲು ಕೆ.ಎಸ್. ಮೂರ್ತಿ ಮನವಿ ಮಾಡಿದರು.

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಬೆಟ್ಟಸೋಗೆ ಶಿವಮೂರ್ತಿ, ಜಗದ್ಗುರು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾಗಿ ಇರುವುದು ನಮ್ಮ ಸಂಘಟನೆಗೆ ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗಿದೆ ಎಂದರು. ಸಾಹಿತಿಗಳು ಸೀಬಹಳ್ಳಿ ಶರಣ ಸೋಮಶೇಖರ ದತ್ತಿ ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿ, ಮನೆಯೇ ಮೊದಲ ಪಾಠಶಾಲೆ ಎಂದು ಸುತ್ತೂರು ಶ್ರೀಮಠದ ಜಗದ್ಗುರು ಶ್ರೀ ಶಿವರಾತ್ರಿರಾಜೇಂದ್ರ ಮಹಾಸ್ವಾಮಿಗಳು 1983 ರಲ್ಲಿ ಹುಟ್ಟುಹಾಕಿದ ಶರಣ ಸಾಹಿತ್ಯ ಪರಿಷತ್ತು ಇಂದು ಹೆಮ್ಮರವಾಗಿ ಬೆಳೆದು ಜೊತೆಯಲ್ಲಿ, ಧಾರ್ಮಿಕ, ಸಂಸ್ಕೃತ, ಸಂಗೀತ, ಸಾಹಿತ್ಯ ಕಾರ್ಯಕ್ರಮಗಳಲ್ಲದೇ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿಯೂ ವಚನ ಗಾಯನ, ವಚನ ಕಂಠಪಾಠ ಸ್ವರ್ಧೆಗಳು ನಡೆಯುತ್ತಿದ್ದು, ಮುಂದೆಯೂ ಹೆಚ್ಚಿನ ಸಂಖ್ಯೆಯಲ್ಲಿ ಶರಣರ ವಿಚಾರಗಳು ಶಾಲಾ ಮಕ್ಕಳಿಂದಲೇ ಕಲಿಸಬೇಕು ಅಗ ವಿದ್ಯೆ, ಕ್ರೀಡಾ ಚಟುವಟಿಕೆಗಳ ಜೊತೆಯಲ್ಲಿ ಶರಣರ ವಿಚಾರಗಳು ಮಕ್ಕಳಲ್ಲಿ ಬೆಳೆಸಬೇಕು ಈ ಬಗ್ಗೆ ಪರಿಷತ್ತಿನ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಹೆಚ್ಚಿನ ಚಟುವಟಿಕೆಗಳನ್ನು ಮಾಡುವಂತೆ ಪರಿಷತ್ತಿನವರಿಗೆ ಶರಣ ಸೋಮಶೇಖರ ಕಿವಿಮಾತು ಹೇಳಿದರು. ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ವಿದ್ಯಾನಿಕೇತನ ಸಂಸ್ಥೆ ಅಧ್ಯಕ್ಷ ವಿರುಪಾಕ್ಷ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಸದಸ್ಯರಾದ ಕೆರಗೋಡು ಮಂಜುನಾಥ್, ಮುಖ್ಯ ಶಿಕ್ಷಕರು ರಾಜಣ್ಣ, ಶೈಲಜಾ, ಲಕ್ಷ್ಮಿ, ಅರ್ಫಿತ, ಜಿ.ಕೆ. ವಿನಂತ್ ಮುಂತಾದವರಿದ್ದರು.