ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ದ್ವಿತೀಯ ಪಿಯುಸಿ ವಿದ್ಯಾರ್ಥಿ ವಿನಯ್ ಆಚಾರ್ಯ (ಲತಾ ಮತ್ತು ಗೋಪಾಲ ಆಚಾರ್ಯರ ಪುತ್ರ) ಅವರಿಗೆ ಕಾಪು ತಾಲೂಕಿನ ಮುದರಂಗಡಿಯಲ್ಲಿ, ನಿಟ್ಟೆ ವಿಶ್ವವಿದ್ಯಾಲಯದ ನಿರ್ದೇಶಕರಾದ ಜಪಾನ್‍ನ ಅಲೆವೂರು ಹರಿಕೃಷ್ಣ ಭಟ್ ಮತ್ತು ಪತ್ನಿ ಯಸುಕೊ ಸತೊ ಅವರ ಪ್ರಾಯೋಜಕತ್ವದಲ್ಲಿ 7 ಲಕ್ಷ ರು. ವೆಚ್ಚದಲ್ಲಿ ಪೂರ್ಣಗೊಳಿಸಿದ ಮನೆ ‘ಶಾಂತಿ ನಿಲಯ’ವನ್ನು ಶನಿವಾರ ದಂಪತಿ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಕಾಪು: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ದ್ವಿತೀಯ ಪಿಯುಸಿ ವಿದ್ಯಾರ್ಥಿ ವಿನಯ್ ಆಚಾರ್ಯ (ಲತಾ ಮತ್ತು ಗೋಪಾಲ ಆಚಾರ್ಯರ ಪುತ್ರ) ಅವರಿಗೆ ಕಾಪು ತಾಲೂಕಿನ ಮುದರಂಗಡಿಯಲ್ಲಿ, ನಿಟ್ಟೆ ವಿಶ್ವವಿದ್ಯಾಲಯದ ನಿರ್ದೇಶಕರಾದ ಜಪಾನ್‍ನ ಅಲೆವೂರು ಹರಿಕೃಷ್ಣ ಭಟ್ ಮತ್ತು ಪತ್ನಿ ಯಸುಕೊ ಸತೊ ಅವರ ಪ್ರಾಯೋಜಕತ್ವದಲ್ಲಿ 7 ಲಕ್ಷ ರು. ವೆಚ್ಚದಲ್ಲಿ ಪೂರ್ಣಗೊಳಿಸಿದ ಮನೆ ‘ಶಾಂತಿ ನಿಲಯ’ವನ್ನು ಶನಿವಾರ ದಂಪತಿ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ಅವರು ತನ್ನ ಬಾಲ್ಯದ ಕಷ್ಟದ ದಿನಗಳನ್ನು ನೆನಪಿಸಿಕೊಂಡು, ನಾನೂ ಬೇರೆಯವರ ಸಹಾಯ ಪಡೆದು ಈ ಸಾಧನೆ ಮಾಡಲು ಸಾಧ್ಯವಾಯಿತು. ವಿನಯ ಅವರು ಒಳ್ಳೆಯ ಅಂಕ ಗಳಿಸಿ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಕಲಿತು ಜಪಾನಿನಲ್ಲಿ ಉದ್ಯೋಗ ಪಡೆಯಲು ಸಾಧ್ಯವಿದೆ ಎಂದರು. ಯಸುಕೊ ಸತೊ ಕನ್ನಡದಲ್ಲಿ ಶುಭಕೋರಿದರು.ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಯಕ್ಷಗಾನ ಕಲಾರಂಗದ ಪ್ರತಿಯೊಂದು ಕೆಲಸದಲ್ಲೂ ಸಮಾಜಕ್ಕೊಂದು ಸಂದೇಶವಿರುತ್ತದೆ. ಬಡವಿದ್ಯಾರ್ಥಿಗಳ ಕುರಿತು ಅವರು ಮಾಡುವ ಕೆಲಸ ಅತ್ಯಂತ ಶ್ಲಾಘನೀಯ ಎಂದರು.ಎ. ರಘುಪತಿ ಭಟ್, ಗೋವಾ ರಾಜ್ಯ ಉನ್ನತ ಶಿಕ್ಷಣ ಸಮಿತಿ ಉಪಾಧ್ಯಕ್ಷ ಡಾ. ಗೋಪಾಲ್ ಮುಗೇರಾಯ, ನಿಟ್ಟೆ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ರಾಘವೇಂದ್ರ ಪೈ ಮಾತನಾಡಿದರು. ಮನೆಯ ಇಂಜಿನಿಯರ್ ಮುಬಾರಕ್ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ರಾಜಾ ರಾವ್ - ವತ್ಸಲಾ ದಂಪತಿ, ಶೋಭಾ ಗೋಪಾಲ್ ಮುಗೇರಾಯ ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷ ವಿ.ಜಿ.ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಸದಸ್ಯರು, ನಿವೃತ್ತ ಪ್ರಾಂಶುಪಾಲ ಶ್ರೀನಿವಾಸ ಪ್ರಭು, ಅದಮಾರು ಶಾಲಾ ಮುಖ್ಯೋಪಾಧ್ಯಾಯ ಶ್ರೀಕಾಂತ ಆಚಾರ್, ಉದ್ಯಮಿ ವೀರೇಂದ್ರ ಹೆಗ್ಡೆ ಭಾಗವಹಿಸಿದ್ದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.