ಆಧುನಿಕ ತಂತ್ರಜ್ಞಾನ ಶಿಕ್ಷಣವೇ ಸರ್ವಾಂಗೀಣ ಅಭಿವೃದ್ಧಿಯ ದಾರಿ

| Published : Sep 08 2025, 01:00 AM IST

ಸಾರಾಂಶ

ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು.

ಕನ್ನಡಪ್ರಭ ವಾರ್ತೆ ಮೈಸೂರು

ಗುರುಕುಲ ಮಾದರಿಯಿಂದ ಆರಂಭವಾದ ಶಿಕ್ಷಣ ಕ್ರಮ ಇಂದು ಹಲವು ಆಯಾಮಗಳನ್ನು ದಾಟಿ, ಆಧುನಿಕ ತಂತ್ರಜ್ಞಾನ ಶಿಕ್ಷಣದ ಮೂಲಕ ಸರ್ವಾಂಗೀಣ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿಕೊಂಡಿದೆ ಎಂದು ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಪಿ. ವಿಶ್ವನಾಥ್ ತಿಳಿಸಿದರು.ನಗರದ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಸಮಾಜಕ್ಕೆ ವೈದ್ಯ, ನ್ಯಾಯವಾದಿ, ಎಂಜಿನಿಯರ್ ಹಾಗೂ ಇತರ ವೃತ್ತಿಪರರನ್ನು ರೂಪಿಸುವವರೇ ಶಿಕ್ಷಕರು. ಅವರಿಲ್ಲದಿದ್ದರೆ ಯಾವುದೇ ವೃತ್ತಿ ಸಾಧ್ಯವಿಲ್ಲ ಎಂದು ಹೇಳಿದರು.ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು, ಶಿಕ್ಷಕರಿಗೆ ಗೌರವ ಸಲ್ಲಿಸಿದರು. ಸಂಸ್ಥೆಯ ಅಧ್ಯಕ್ಷ ಗುಂಡಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಶ್ರೀಶೈಲ ರಾಮಣ್ಣನವರ್ ಬಹುಮಾನ ವಿತರಿಸಿದರು. ಕಾಲೇಜಿನ ಪ್ರಾಂಶುಪಾಲ ಪಿ. ಮಹದೇವಸ್ವಾಮಿ, ಉಪನ್ಯಾಸಕರಾದ ಡಿ. ಮಹೇಶ್, ಎಸ್.ಆರ್. ದಾಕ್ಷಯಿಣಿ ಇದ್ದರು.