ಸಾರಾಂಶ
ಕನ್ನಡ ಭಾಷೆಯು ಪ್ರೌಢಿಮೆಯನ್ನು ಹೊಂದಿದ್ದು, ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ
ಕನ್ನಡಪ್ರಭ ವಾರ್ತೆ ಭೇರ್ಯಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸುವಲ್ಲಿ ಆಟೋ ಚಾಲಕರ ಪಾತ್ರ ಬಹಳ ಪ್ರಮುಖವಾಗಿದೆ ಎಂದು ಪಶು ವೈದ್ಯಾಧಿಕಾರಿ ಡಾ. ವಿನಯ್ ಕುಮಾರ್ ಹೇಳಿದರು.
ಭೇರ್ಯ ಗ್ರಾಮದಲ್ಲಿ ಶ್ರೀ ವಿಘ್ನೇಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಕನ್ನಡ ಭಾಷೆಯು ಪ್ರೌಢಿಮೆಯನ್ನು ಹೊಂದಿದ್ದು, ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಇತರೆ ಭಾಷೆಗಳಿಗೆ ಹೋಲಿಸಿದರೆ ಭಾಷೆಯು ಉತ್ಕಷ್ಟತೆಯನ್ನು ಪಡೆದಿದ್ದು, ಹೆಗ್ಗಳಿಕೆಯನ್ನುಗಳಿಸಿದೆ. ಹಾಗಾಗಿ ಕರ್ನಾಟದಲ್ಲಿ ಕನ್ನಡಿಗರೇ ಸಾರ್ವಭೌಮರು. ಹೆಚ್ಚಿನ ಒತ್ತು ನೀಡಿರುವುದು ಮೆಚ್ಚುವಂತದ್ದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಗ್ರಾಪಂ ಲೆಕ್ಕ ಸಹಾಯಕಿ ಬಿ.ಎಸ್. ಅಶ್ವಿನಿ ಮಾತನಾಡಿ, ಆಟೋ ಚಾಲಕರು ಕನ್ನಡಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಇವರು ಪ್ರಾಮಾಣಿಕ ಸೇವೆಗೆ ಹೆಸರಾಗಿದ್ದು, ಹಲವು ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಕೊಂಡಿರುವುದು ಶ್ಲಾಘನೀಯ ಎಂದರು.ಕನ್ನಡಾಂಭೆ ಭುವನೇಶ್ವರಿ ಭಾವಚಿತ್ರಕ್ಕೆ ಗ್ರಾಪಂ ಬಿ.ಕೆ. ಮಂಜಪ್ಪ ಪುಷ್ಪಾರ್ಚನೆ ನೆರವೇರಿಸಿದರು.ಶಿಕ್ಷಕ ಕೃಷ್ಣೇಗೌಡ, ಪತ್ರಕರ್ತ ಭೇರ್ಯ ಮಹೇಶ್, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಮಹೇಶನಾಯಕ, ಅಧ್ಯಕ್ಷ ಯೋಗೇಶ್ ಉಪಾಧ್ಯಕ್ಷ ಬಶೀರ್, ಕಾರ್ಯದರ್ಶಿ ಶಾಶ್ವತ, ಮಾಜಿ ಅಧ್ಯಕ್ಷರಾದ ಬಿ.ಎ. ಮಹೇಶ್, ಕುಮಾರ್, ಇಲ್ಲು, ಮಾಜಿ ಕಾರ್ಯದರ್ಶಿ ಪುನೀತ್, ಖಜಾಂಚಿ ಸಂತೋಷ್, ಸದಸ್ಯರಾದ ಮಹದೇವ್, ಕುಮಾರ್, ಮಂಜು, ರಕ್ಷಿತ್, ಪ್ರಕಾಶ್, ಗಫಾರ್, ಫಜ್ಲು, ಟಿ.ವಿ. ಮಂಜ, ಶಂಕರ, ಸುನೀಲ್, ಆಟೋ ಮಾಲೀಕರು ಮತ್ತು ಚಾಲಕರು, ಗ್ರಾಮಸ್ಥರು ಭಾಗವಹಿಸಿದ್ದರು.