ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಶಶೀಲ್ ಜಿ. ನಮೋಶಿ ಅವರನ್ನು ಬೆಂಬಲಿಸಿ ಬೆಂಬಲಿಗರು ದಾನಮ್ಮ ಕೋರವಾರ, ಸರೋಜಾದೇವಿ ಪಾಟೀಲ್, ಸಂಗೀತಾ ಸಡಕೀನ್, ಛಾಯಾ ಪಾಟೀಲ ವಿವಿಧೆಡೆ ಪ್ರಚಾರ ಕಾರ್ಯದಲ್ಲಿ ತೊಡಗಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಶಶೀಲ್ ಜಿ. ನಮೋಶಿ ಅವರನ್ನು ಬೆಂಬಲಿಸಿ ಬೆಂಬಲಿಗರು ದಾನಮ್ಮ ಕೋರವಾರ, ಸರೋಜಾದೇವಿ ಪಾಟೀಲ್, ಸಂಗೀತಾ ಸಡಕೀನ್, ಛಾಯಾ ಪಾಟೀಲ ವಿವಿಧೆಡೆ ಪ್ರಚಾರ ಕಾರ್ಯದಲ್ಲಿ ತೊಡಗಿದರು.

ಶಿಕ್ಷಕರ ಸಮಸ್ಯೆಗಳು, ಸೇವಾ ಭದ್ರತೆ, ಹಳೆಯ ಪಿಂಚಣಿ ಯೋಜನೆ (OPS) ಜಾರಿ, ಹೊಸ ಪಿಂಚಣಿ ಯೋಜನೆ (NPS) ಕುರಿತ ಸಮಸ್ಯೆಗಳು, ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರ ಬೇಡಿಕೆಗಳು, 371 ಜೇ ಸಮರ್ಪಕ ಅನುಷ್ಠಾನ, ತೃತೀಯ ಭಾಷಾ ಶಿಕ್ಷಕರ ಸಮಸ್ಯೇ ಪರಿಹಾರ ಹಾಗೂ ಶೈಕ್ಷಣಿಕ ಕ್ಷೇತ್ರದ ವಿವಿಧ ಸವಾಲುಗಳ ಕುರಿತು ಚುನಾವಣಾ ಪ್ರಚಾರ ತಂಡ ಪ್ರಮುಖವಾಗಿ ಪ್ರಸ್ತಾಪಿಸುತ್ತಿದೆ.

ಶಿಕ್ಷಕರ ಹಕ್ಕುಗಳು ಮತ್ತು ಬೇಡಿಕೆಗಳಿಗೆ ಸಂಬಂಧಿಸಿ ವಿಧಾನ ಪರಿಷತ್ತಿನಲ್ಲಿ ನಡೆದ ಚರ್ಚೆಗಳು ಹಾಗೂ ಕೈಗೊಂಡಿರುವ ಪ್ರಯತ್ನಗಳ ಕುರಿತು ಶಿಕ್ಷಕರಿಗೆ ಮಾಹಿತಿ ನೀಡುವ ಮೂಲಕ ಅವರು ಮತದಾರರನ್ನು ಸಂಪರ್ಕಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳ ಅಗತ್ಯವನ್ನು ಅವರು ಒತ್ತಿಹೇಳುತ್ತಿದ್ದಾರೆ.

ಶಿಕ್ಷಕರ ಸಮಸ್ಯೆಗಳ ಪರಿಹಾರ, ಶೈಕ್ಷಣಿಕ ಅಭಿವೃದ್ಧಿ ಹಾಗೂ ಶಿಕ್ಷಕರ ಹಿತಾಸಕ್ತಿಗಳ ಪರವಾಗಿ ಧ್ವನಿ ಎತ್ತುವ ಉದ್ದೇಶದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಇವರ ತಂಡ ಹೇಳಿದೆ ಈಗಾಗಲೇ ತಾವುಗಳು ಪ್ರಚಾರಕ್ಕೆ ಹೋದಲೆಲ್ಲಾ ನಮೋಶಿವರ ಶಿಕ್ಷಕ ಪರ ನಿಲುವನ್ನು ಪ್ರತಿ ಮತದಾರರು ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದು ಅವರು 5 ನೇ ಬಾರಿಗೆ ವಿಜಯ ಪತಾಕೆ ಹಾರಿಸಲಿದ್ದಾರೆ ಎಂದು ಈ ತಂಡ ವಿಶ್ವಾಸ ಹೊರಹಾಕಿದೆ.