ವಿಜಯ ಪೂಜಾರಿಗೆ ಬಿಲ್ಲವ ಸಿರಿ ಪ್ರಶಸ್ತಿ ಪ್ರದಾನ

| Published : Sep 03 2024, 01:44 AM IST

ಸಾರಾಂಶ

ಹುಬ್ಬಳ್ಳಿ ನಗರದ ಶಿರೂರ ಪಾರ್ಕ್‌ನಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಹು-ಧಾ ಬಿಲ್ಲವ ಸಮಾಜ ಸೇವಾ ಸಂಘದ ವಾರ್ಷಿಕ ಬಿಲ್ಲವ ಸಿರಿ ಪ್ರಶಸ್ತಿಯನ್ನು ಹೊಟೇಲ್ ಉದ್ಯಮಿ ವಿಜಯ ಪಿಣಿಯಾ ಪೂಜಾರಿ ಅವರಿಗೆ ಪ್ರದಾನ ಮಾಡಲಾಯಿತು.

ಹುಬ್ಬಳ್ಳಿ: ಇಲ್ಲಿನ ಶಿರೂರ ಪಾರ್ಕ್‌ನಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಹು-ಧಾ ಬಿಲ್ಲವ ಸಮಾಜ ಸೇವಾ ಸಂಘದ ವಾರ್ಷಿಕ ಬಿಲ್ಲವ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಹೊಟೇಲ್ ಉದ್ಯಮಿ ವಿಜಯ ಪಿಣಿಯಾ ಪೂಜಾರಿ ಅವರಿಗೆ ಉದ್ಯಮದ ಸಾಧನೆಗಾಗಿ ’ಬಿಲ್ಲವ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಜೀವ ಪೂಜಾರಿ- ಸಾಹಿತ್ಯ ಹಾಗೂ ಸಂತೋಷ ಈಳಿಗೇರ- ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ವಾರ್ಷಿಕ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಸಮಾಜದ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್‌ನ ಶ್ರೀ ಆನಂದ ಗುರುಸ್ವಾಮಿ ಮಾತನಾಡಿ, ಸಂಘಟನೆ ಹಾಗೂ ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಎಲ್ಲರೂ ನಾರಾಯಣ ಗುರುಗಳ ಆದರ್ಶಗಳನ್ನು ಪಾಲನೆ ಮಾಡಬೇಕು. ಆಗ ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿಯಾಗುತ್ತದೆ ಎಂದರು.

ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತದ ಸಹ ಕಾರ್ಯದರ್ಶಿ ವಿನಾಯಕ ತಲಗೇರಿ ಅವರು ಶ್ರೀ ನಾರಾಯಣ ಗುರುಗಳ ಜೀವನ ಮತ್ತು ಸಾಧನೆ ಹಾಗೂ ಹಿಂದೂ ಕುಟುಂಬ ವ್ಯವಸ್ಥೆಯ ಕುರಿತು ಉಪನ್ಯಾಸ ನೀಡಿದರು.

ಹು-ಧಾ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಆನಂದ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ವಿವೇಕ ಪೂಜಾರಿ ಬಿಲ್ಲವ ಸಂಘದ ವಾರ್ಷಿಕ ವರದಿ ಮಂಡಿಸಿದರು. ಮಹಿಳಾ ಸಂಘದ ಸಂಚಾಲಕಿ ಜಲಜಾ ಪೂಜಾರಿ, ಸಲಹಾ ಮಂಡಳಿಯ ಹಿರಿಯ ಸದಸ್ಯ ಶಂಕರ ಕೋಟ್ಯಾನ್, ರಾಕೇಶ್ ಪೂಜಾರಿ, ಸಂಧ್ಯಾ ಪೂಜಾರಿ, ಜಯಶ್ರೀ ಪೂಜಾರಿ, ಸೌಮ್ಯ ಪೂಜಾರಿ ಸೇರಿದಂತೆ ಹಲವರಿದ್ದರು.