ಸಾರಾಂಶ
ಪಟ್ಟಣದ ವಿಜಯ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.98ರಷ್ಟು ಫಲಿತಾಂಶ ಪಡೆದಿದ್ದು, ಅವಳಿ ತಾಲೂಕಿನಲ್ಲಿ ಕಾಲೇಜು ಪ್ರಥಮ ಸ್ಥಾನ ಪಡೆಯಲು ಕಾರಣರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ವಿಜಯ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.98ರಷ್ಟು ಫಲಿತಾಂಶ ಪಡೆದಿದ್ದು, ಅವಳಿ ತಾಲೂಕಿನಲ್ಲಿ ಕಾಲೇಜು ಪ್ರಥಮ ಸ್ಥಾನ ಪಡೆಯಲು ಕಾರಣರಾಗಿದ್ದಾರೆ.ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ ಸೇರಿ 177 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 57 ಅತ್ಯುನ್ನತ ಶ್ರೇಣಿ, 100 ಪ್ರಥಮ ಶ್ರೇಣಿ, 16 ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, 4 ಜನ ಅನುತ್ತೀರ್ಣರಾಗಿ, ಕಾಲೇಜಿಗೆ ಶೇ.98 ಫಲಿತಾಂಶ ಲಭಿಸಿದೆ.
ವಿಜ್ಞಾನ ವಿಭಾಗದ ದಿವ್ಯ ವಿ.ಎಸ್. 600ಕ್ಕೆ 586 ಅಂಕಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ ಸಹನ ಎ.ಜಿ. 600ಕ್ಕೆ 574 ಅಂಕಗಳ ಗಳಿಸಿ ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲೂಕುಗಳಲ್ಲಿ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲ ವಸಂತ್ ಕುಮಾರ್ ಎಸ್. ತಿಳಿಸಿದ್ದಾರೆ.ನೂರಕ್ಕೆ ನೂರು ಅಂಕ ಸಾಧನೆ:
100ಕ್ಕೆ 100 ಅಂಕ ಗಳಿಸಿದವರು 3 ವಿದ್ಯಾರ್ಥಿಗಳು, ಜೀವಶಾಸ್ತ್ರದಲ್ಲಿ 2, ರಸಾಯನ ಶಾಸ್ತ್ರ 1, ಲೆಕ್ಕಶಾಸ್ತ್ರದಲ್ಲಿ 1 ಹಾಗೂ 100ಕ್ಕೆ 99 ಅಂಕ ಗಳಿಸಿದವರು 11 ವಿದ್ಯಾರ್ಥಿಗಳಿದ್ದಾರೆ.ವಿಜ್ಞಾನ ವಿಭಾಗದಲ್ಲಿ ದಿವ್ಯ ವಿ.ಎಸ್.- 586, ಸಾಕ್ಷಿ- 577, ದಿವ್ಯ ಎಂ.- 576. ವಾಣಿಜ್ಯ ವಿಭಾಗದಲ್ಲಿ
ಸಹನ- 574, ಶ್ರೇಯಾ- 566, ಪೂಜಾ- 555 ಅಂಕ.- - -
-8ಎಚ್.ಎಲ್.ಐ2: ದಿವ್ಯ ವಿ.ಎಸ್.-8ಎಚ್.ಎಲ್.ಐ2ಎ.: ಸಾಕ್ಷಿ
-8ಎಚ್.ಎಲ್.2: ಬಿ.ದಿವ್ಯ ಎಂ.-8ಎಚ್.ಎಲ್.ಐ2ಸಿ: ಸಹನ
-8ಎಚ್.ಎಲ್.ಐ2ಡಿ: ಶ್ರೇಯಾ-8ಎಚ್.ಎಲ್.ಐ2ಇ: ಪೂಜಾ
- - -