ಸಾರಾಂಶ
ಸಾಂಸ್ಕೃತಿಕ ಶ್ರೀಮಂತ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪುರಾತನ ಋಷಿ ಮುನಿಗಳು ಮತ್ತು ರಾಜ ಮಹಾರಾಜರು ಸಮಸ್ತ ವಿಶ್ವವೇ ಬೆರಗಾಗುವಂತಹ ವಾಸ್ತು ದೇವಾಲಯಗಳನ್ನು ನಿರ್ಮಿಸಿ ಜಗತ್ತಿನ ಗಮನ ಸೆಳೆದಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕು ಕಾಳೇಗೌಡನಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಶ್ರೀಮಾರಮ್ಮ ದೇವಸ್ಥಾನಕ್ಕೆ ಸಮಾಜ ಸೇವಕ ವಿಜಯ್ ರಾಮೇಗೌಡ ಆರ್ಥಿಕ ಸಹಾಯ ನೀಡಿದರು.ನಂತರ ಮಾತನಾಡಿದ ಅವರು, ಇತ್ತೀಚೆಗೆ ಗ್ರಾಮೀಣ ಭಾರತದಲ್ಲಿ ಜನ ಹಳೆಯ ದೇವಾಲಯಗಳ ಜೀರ್ಣೋದ್ಧಾರಕ್ಕೆ ಸಂಘಟಿತ ಪ್ರಯತ್ನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಸಾಂಸ್ಕೃತಿಕ ಶ್ರೀಮಂತ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪುರಾತನ ಋಷಿ ಮುನಿಗಳು ಮತ್ತು ರಾಜ ಮಹಾರಾಜರು ಸಮಸ್ತ ವಿಶ್ವವೇ ಬೆರಗಾಗುವಂತಹ ವಾಸ್ತು ದೇವಾಲಯಗಳನ್ನು ನಿರ್ಮಿಸಿ ಜಗತ್ತಿನ ಗಮನ ಸೆಳೆದಿದ್ದಾರೆ ಎಂದರು.
ಇತಿಹಾಸದಲ್ಲಿ ಘಟಿಸಿದ ಕೆಲವೊಂದು ಐತಿಹಾಸಿಕ ಪ್ರಮಾದಗಳು ನಮ್ಮ ಪ್ರಾಚೀನ ಶಿಲ್ಪಕಲೆಗಳು ಕಣ್ಮರೆಯಾಗುವಂತೆ ಮಾಡಿವೆ. ನಮ್ಮ ಯುವಕರು ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವಿಲ್ಲದಂತೆ ಬದುಕುವ ವಾತಾವರಣವನ್ನು ನಿರ್ಮಿಸಿತು ಎಂದರು.ಯುವಕರು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು. ಕೇವಲ ದೇವಾಲಯಗಳನ್ನು ನಿರ್ಮಿಸಿದರೆ ಸಾಲದು, ಅವುಗಳ ಸಂರಕ್ಷಣೆ ಬಗ್ಗೆಯೂ ಜಾಗೃತಿ ವಹಿಸಬೇಕು. ದೇವಾಲಯ ಸಮಿತಿಗಳು ರಾಜಕೀಯದಿಂದ ಮುಕ್ತವಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.
ಈ ವೇಳೆ ಜಿಪಂ ಮಾಜಿ ಸದಸ್ಯ ಕೋಡಿಮರನಹಳ್ಳಿ ದೇವರಾಜು, ತಾಪಂ ಮಾಜಿ ಸದಸ್ಯ ಮಾಧವ ಪ್ರಸಾದ್, ಮುರುಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗೋವಿಂದರಾಜು, ಗ್ರಾಪಂ ಅಧ್ಯಕ್ಷರಾದ ಕುಮಾರ್, ಲೋಕೇಶ್, ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕೆ.ಮಂಜುನಾಥ್ ಗೆ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ
ಮಂಡ್ಯ: ತಾಲೂಕಿನ ಉಮ್ಮಡಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೆ.ಮಂಜುನಾಥ್‌ಗೆ 2023ನೇ ಸಾಲಿನ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಲಭಿಸಿದೆ. ಮಂಜುನಾಥ್ ಅವರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಶ್ರದ್ಧೆ, ಪರಿಶ್ರಮ, ನಿಸ್ವಾರ್ಥ ಸೇವೆಗಾಗಿ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದು, ಬೆಂಗಳೂರು ವಿಧಾನಸೌಧ ಬ್ಯಾಂಕ್ವೆಂಟ್ ಹಾಲ್ ನಲ್ಲಿ ಏ.21ರ ಸೋಮವಾರ ಪ್ರಶಸ್ತಿ ಸ್ವೀಕರಿಸಲಿದ್ದಾರೆ.