ಕನ್ನಡಪ್ರಭ ವಾರ್ತೆ ಲಕ್ಷೇಶ್ವರ
ನಮ್ಮಲ್ಲಿರುವ ದುಷ್ಟ ಗುಣ ತೊಡೆದು ಹಾಕಿ ಅದರಲ್ಲಿ ವಿಜಯಶಾಲಿಗಳಾಗುವುದೇ ವಿಜಯದಶಮಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಬುಧವಾರ ಪಟ್ಟಣದ ಕೋರ್ಟ್ ಸರ್ಕಲ್ ಹತ್ತಿರ ಇರುವ ಗ್ರಾಮದೇವಿ ದೊಡ್ಡ ದ್ಯಾಮವ್ವ ದೇವಿಯ ದೇವಸ್ಥಾನದ ಮಹಾದ್ವಾರ ಉದ್ಘಾಟನೆ, ಕಳಸಾರೋಹಣ ಹಾಗೂ ಫಲಕದ ಉದ್ಘಾಟನೆಯ ಸಮಾರಂಭದಲ್ಲಿ ಮಾತನಾಡಿದರು.
ನಮ್ಮಲ್ಲಿರುವ ದೋಷ, ಸಿಟ್ಟು, ದ್ವೇಷ, ಅಸೂಯೆ ಯಾವುದಾದರೂ ಇದ್ದರೆ ಅವುಗಳನ್ನು ಮನಸ್ಸಿನಿಂದ ತೊಡೆದು ಹಾಕುವ ಸಂಕಲ್ಪ ಮಾಡುವ ದಿನ. ಮನುಷ್ಯ ಕಾಮ, ಕ್ರೋಧ, ಮದ ಮತ್ಸರದ ಸಂಕೋಲೆಯಲ್ಲಿ ಸಿಲುಕಿಕೊಳ್ಳತ್ತಾನೆ. ಆಗ ದೇವಿಯನ್ನು ನೆನೆದು ತಾಯಿಯ ಆಶೀರ್ವಾದ ಪಡೆಯಬೇಕು ಎಂದು ಹೇಳಿದರು.ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಹೇಶ ಲಿಂಬಯ್ಯಸ್ವಾಮಿಮಠ ಹಾಗೂ ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಸ್ವಾಮಿಗಳು ಮಾತನಾಡಿದರು.
ಸಭೆಯಲ್ಲಿ ಕರೇವಾಡಿಮಠದ ಮಳೆ ಮಲ್ಲಿಕಾರ್ಜುನ ಸ್ವಾಮಿಗಳು, ಶಿವನಗೌಡ ಪಾಟೀಲ, ಎಂ.ಆರ್. ಪಾಟೀಲ, ಜಯಕ್ಕ ಕಳ್ಳಿ, ಶಂಕ್ರಣ್ಣ ಗೊರವರ, ವೆಂಕಣ್ಣ ಚೌರೆಡ್ಡಿ, ವಾಸು ಬಡಿಗೇರ, ರಾಮನಗೌಡ ಪಾಟೀಲ, ಪ್ರಹ್ಲಾದರಾವ್ ಕುಲಕರ್ಣಿ, ಶಾಂತವ್ವ ಗಡೇದ ಸೇರಿದಂತೆ ಅನೇಕರು ಇದ್ದರು.
ಸಭೆಯಲ್ಲಿ ನಿಂಗಪ್ಪ ಬನ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಮರಾಠೆ ಸ್ವಾಗತಿಸಿದರು. ಬಸವರಾಜ ಬಾಳೇಶ್ವರಮಠ ಕಾರ್ಯಕ್ರಮ ನಿರ್ವಹಿಸಿದರು.