ವಿಜಯ ದಶಮಿ ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ಪ್ರತೀಕ-ನಿತ್ಯಾನಂದ ಕುಂದಾಪುರ

| Published : Sep 26 2025, 01:00 AM IST

ಸಾರಾಂಶ

ವಿಜಯ ದಶಮಿಯು ದುಷ್ಟರ ಸಂಹಾರ ಹಾಗೂ ಶಿಷ್ಟರ ರಕ್ಷಣೆ ಪ್ರತೀಕವಾಗಿದೆ ಎಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಹೇಳಿದರು.

ರಾಣಿಬೆನ್ನೂರು: ವಿಜಯ ದಶಮಿಯು ದುಷ್ಟರ ಸಂಹಾರ ಹಾಗೂ ಶಿಷ್ಟರ ರಕ್ಷಣೆ ಪ್ರತೀಕವಾಗಿದೆ ಎಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಹೇಳಿದರು. ನಗರದ ಮೆಡ್ಲೇರಿ ರಸ್ತೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಬುಧವಾರ ಸಂಜೆ ಕಸಾಪ ನಗರ ಹಾಗೂ ಗ್ರಾಮೀಣ ಘಟಕಗಳ ಸಹಯೋಗದಲ್ಲಿ ಏರ್ಪಡಿಸಿದ್ದ ನಾಡಹಬ್ಬ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಬಾರಿ ನಗರ ಮತ್ತು ಗ್ರಾಮೀಣ ಮಟ್ಟದಲ್ಲಿ ಹಬ್ಬವನ್ನು ಆಚರಿಸುತ್ತಿರುವುದು ಉತ್ತಮ ಹೆಜ್ಜೆಯಾಗಿದೆ. ಸಾಹಿತಿಗಳನ್ನು ಸೇರಿಸಿಕೊಂಡು ಕನ್ನಡ ನಾಡು ಕಟ್ಟುವುದರ ಮುಖಾಂತರ ಸಾಹಿತ್ಯ ಪರಿಷತ್ತು ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತದೆ. ತೊಂದರೆಗಳಾದಾಗ ರಾಜ್ಯ ಸರ್ಕಾರಕ್ಕೆ ಸಾಹಿತ್ಯ ಪರಿಷತ್ತಿನ ಮೂಲಕ ಎಚ್ಚರಗೊಳಿಸುವಂಥ ಕೆಲಸಗಳು ನಡೆಯುತ್ತಿವೆ. ಹೋರಾಟಗಳ ಜತೆಯಲ್ಲಿಯೇ ಕನ್ನಡವನ್ನು ಕಟ್ಟುವ ಕೆಲಸ ನಡೆಯುತ್ತಿರುವುದು ಶ್ಲಾಘನೀಯ ಎಂದರು. ನವದುರ್ಗೆಯರ ಕುರಿತು ಜಿಲ್ಲಾ ಬಿಸಿಎಂ ಇಲಾಖೆ ನಿವೃತ್ತ ಅಧಿಕಾರಿ ವಿ.ಎಸ್. ಹಿರೇಮಠ ಉಪನ್ಯಾಸ ನೀಡಿದರು.ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ. ಕೆ.ಎಚ್. ಮುಕ್ಕಣ್ಣವರ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ವಾಸಪ್ಪ ಕುಸಗೂರ, ವೀರೇಶ ಜಂಬಿಗಿ, ಪ್ರೊ. ಶಿವಾನಂದ ಸಂಗಾಪುರ, ಎಸ್.ಎಚ್. ಪಾಟೀಲ., ವಿದ್ಯಾವತಿ ಮಳಿಮಠ, ಜಗದೀಶ ಮಳಿಮಠ, ಬಿ.ಪಿ. ಶಿಡೇನೂರ, ಎ.ಬಿ. ರತ್ನಮ್ಮ, ಗಾಯತ್ರಮ್ಮ ಕುರುವತ್ತಿ, ಎಫ್.ಎಂ. ಕಡಕೋಳ, ಬಸವರಾಜ ಉಮ್ಮನಗೌಡ್ರ, ಮಾರುತಿ ತಳವಾರ, ಡಾ. ಕಾಂತೇಶರೆಡ್ಡಿ ಗೋಡಿಹಾಳ, ಡಾ. ಸೋಮಲಿಂಗಪ್ಪ ಚಿಕ್ಕಳ್ಳವರ, ಪರಶುರಾಮ ಕುರುವತ್ತಿ, ಅನಸೂಯಾ ರಾಠೋಡ, ನಿರ್ಮಲಾ ಲಮಾಣಿ, ಶೋಭಾ ನಾಗನಗೌಡರ, ದ್ರಾಕ್ಷಾಯಿಣಿ ಉದಗಟ್ಟಿ ಉಪಸ್ಥಿತರಿದ್ದರು.ಬಸವರಾಜ ಸಾವಕ್ಕನವರ ತಂಡ ಸ್ಯಾಕ್ಸೋಫೋನ್ ವಾದನ ನುಡಿಸಿದರು. ಕನಕದಾಸ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.