ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ

| Published : Jul 27 2025, 02:01 AM IST

ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ
Share this Article
  • FB
  • TW
  • Linkdin
  • Email

ಸಾರಾಂಶ

ಇಳಕಲ್ಲ ನಗರದ ಬಡವರಿಗೆ ಮನೆ ನೀಡಬೇಕೆನ್ನುವ ಗುರಿಯಿಂದ ಶಾಸಕನಾದ ಪ್ರಥಮ ಅವಧಿಯಲ್ಲಿ ಮನೆ ನೀಡಿದ್ದೆನು. ನಮ್ಮ ತಾಯಿ, ತಂದೆಯವರ ಅವಧಿಯಲ್ಲಿ ಬಡವರಿಗಾಗಿ ಅನೇಕ ಮನೆಗಳನ್ನು ನೀಡಿದ್ದಾರೆ. ಸೂರಿಲ್ಲದವರಿಗೆ ಸೂರು ನೀಡುವುದೇ ಕಾಂಗ್ರೆಸ್‌ ಪಕ್ಷದ ಗುರಿಯಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ನಗರದ ಬಡವರಿಗೆ ಮನೆ ನೀಡಬೇಕೆನ್ನುವ ಗುರಿಯಿಂದ ಶಾಸಕನಾದ ಪ್ರಥಮ ಅವಧಿಯಲ್ಲಿ ಮನೆ ನೀಡಿದ್ದೆನು. ನಮ್ಮ ತಾಯಿ, ತಂದೆಯವರ ಅವಧಿಯಲ್ಲಿ ಬಡವರಿಗಾಗಿ ಅನೇಕ ಮನೆಗಳನ್ನು ನೀಡಿದ್ದಾರೆ. ಸೂರಿಲ್ಲದವರಿಗೆ ಸೂರು ನೀಡುವುದೇ ಕಾಂಗ್ರೆಸ್‌ ಪಕ್ಷದ ಗುರಿಯಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದರು.

ನಗರದ ಜಗಜೀವನರಾಂ ಭವನದಲ್ಲಿ ಬಡವರಿಗೆ ಹಕ್ಕುಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಮಾಡಿ ಮಾತನಾಡಿ, ನಾನು ಶಾಸಕನಾದ ಮೇಲೆ ಬಡವರಿಗಾಗಿ ಮನೆ ನಿರ‍್ಮಾಣ ಮಾಡಬೇಕೆಂಬ ಕನಸಿನೊಂದಿಗೆ ೪೨ ಎಕರೆ ಭೂಮಿಯನ್ನು ಎಕರೆಗೆ ₹೨೨ಲಕ್ಷದಂತೆ ₹೯ ಕೋಟಿಗೆ ಖರೀದಿ ಮಾಡಿದ್ದು, ರಾಜ್ಯದ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು ಎಂದರು. ಎಸ್.ಆರ್.ಕೆ ಬಡಾವಣೆ, ಗುರುಲಿಂಗಪ್ಪ ಕಾಲೋನಿ, ನೇಕಾರ ಕಾಲೋನಿ ಹೀಗೆ ನಗರದ ವಿವಿಧಡೆ ಮನೆಗಳನ್ನು ನೀಡಿದ್ದೇವೆ.

ಸರ್ಕಾರದ ವತಿಯಿಂದ ₹೨,೭೦,೦೦೦ ಸಾಲಸೌಲಭ್ಯ ನೀಡುತ್ತದೆ. ಫಲಾನುಭವಿಗಳು ₹೩೦,೦೦೦ ವಂತಿಕೆ ನೀಡಬೇಕು. ಒಟ್ಟಾರೆ ಮೂರು ಲಕ್ಷ ಹಣದಲ್ಲಿ ಮನೆ ನಿರ‍್ಮಾಣ ಮಾಡಿ ಕೊಡಲಾಗುತ್ತದೆ ಎಂದು ಹೇಳಿದರು.

ಫಲಾನುಭವಿಗಳು ಯಾರೂ ಕೂಡ ತಗಡಿನ ಸೆಡ್‌ ಹಾಕದೆ ಮನೆ ಕಟ್ಟಲೇಬೇಕು. ಹಕ್ಕುಪತ್ರ ನೀಡಿದ್ದೇವೆ ಎಂದು ತಗಡು ಹಾಕುವುದು ಸರಿಯಲ್ಲ. ಯಾವುದೇ ಪಕ್ಷದವರಾದರೂ ಬಡವರಾಗಿದ್ದರೆ ಮನೆ ನೀಡುತ್ತೇನೆ. ಇದರಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದರು.

ಬಿಜೆಪಿಯವರು ಒಂದು ಮನೆ ಕೊಟ್ಟಿಲ್ಲ: ಬಿಜೆಪಿಯವರಿಗೆ ಬಡವರ ಬಗ್ಗೆ ಒಂದಿಷ್ಟೂ ಚಿಂತನೆ ಇಲ್ಲ. ಸುಖಾ ಸುಮ್ಮನೆ ಆರೋಪ ಮಾಡುತ್ತಾರೆ. ಕ್ಷೇತ್ರದಲ್ಲಿ ಒಂದೇ ಒಂದು ಮನೆ ನೀಡಿದ್ದರ ಬಗ್ಗೆ ಆದೇಶ ಪತ್ರ ತೋರಿಸಿ ಎಂದು ಮಾಜಿ ಶಾಸಕರಿಗೆ ಸವಾಲು ಹಾಕಿದರು.

೬೦೦೦ ಮನೆ ನೀಡಿದ್ದು ಕಾಶಪ್ಪನವರ ಕುಟುಂಬ; ಹುನಗುಂದ ಮತಕ್ಷೇತ್ರದಲ್ಲಿ ನಮ್ಮ ತಂದೆ, ತಾಯಿ ಹಾಗೂ ನನ್ನ ಅವಧಿಯಲ್ಲಿ ಒಟ್ಟಾರೆ ೬೦೦೦ ಮನೆಗಳನ್ನು ಬಡವರಿಗೆ ನೀಡಿದ್ದು ಕಾಶಪ್ಪನವರ ಕುಟುಂಬ ಎಂದರು.ನಗರಸಭೆಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಎಲ್ಲ ವಾರ್ಡ್‌ನ ಫಲಾನುಭವಿಗಳು ಉಪಸ್ಥಿತರಿದ್ದರು.