ವಿಜಯಪುರ ಸಹಕಾರಿ ಬ್ಯಾಂಕ್‌ಗಳು ರಾಜ್ಯಕ್ಕೆ ಮಾದರಿ : ಶಿವಾನಂದ ಎಸ್.ಪಾಟೀಲ್

| Published : Dec 31 2023, 01:31 AM IST / Updated: Dec 31 2023, 10:09 PM IST

ಸಾರಾಂಶ

ನಾನು ರೈತಪರ ಕಾಳಜಿ ಇರುವ ವ್ಯಕ್ತಿ. ನನ್ನ ಮಾತಿನಿಂದ ರೈತರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಪಕ್ಷದ ಮುದ್ರೆ ಇಟ್ಟು ಕೊಂಡು ನಾನು ಯಾವತ್ತು ರಾಜಕಾರಣ ಮಾಡಿಲ್ಲ.

ಕನ್ನಡ ಪ್ರಭ ವಾರ್ತೆ ಆಲಮೇಲ

ರೈತರು ಪ್ರಾಂಜಲ ಮನಸ್ಸಿನಿಂದ ಸ್ಥಾಪಿಸಿರುವ ಸಹಕಾರಿ ಬ್ಯಾಂಕಗಳು ಇಂದು ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಹೆಮ್ಮರವಾಗಿ ಬೆಳೆದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಸಚಿವ ಶಿವಾನಂದ ಎಸ್.ಪಾಟೀಲ ಹೇಳಿದರು.

 

ಪಟ್ಟಣದ ಶತಮಾತ ಕಂಡ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತದ ನೂತನ ಕಟ್ಟಡ ಉದ್ಘಾಟಸಿ ಮಾತನಾಡಿದ ಅವರು, ಇಂದು ಸಹಕಾರಿ ಕ್ರಾಂತಿಯಿಂದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸಿಗುತ್ತದೆ ಇದರಿಂದ ರೈತರಿಗೆ ಅನುಕೂಲವಾಗಿದೆ. ಬರಗಾಲ ಎದುರಾದರೂ ರೈತರು ಎದೆಗುಂದದೆ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿ ಉತ್ತಮ ಜೀವನ ನಡೆಸಬೇಕು. ನಾನು ರೈತಪರ ಕಾಳಜಿ ಇರುವ ವ್ಯಕ್ತಿ. ನನ್ನ ಮಾತಿನಿಂದ ರೈತರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಪಕ್ಷದ ಮುದ್ರೆ ಇಟ್ಟು ಕೊಂಡು ನಾನು ಯಾವತ್ತು ರಾಜಕಾರಣ ಮಾಡಿಲ್ಲ. ಮೂರು ಪಕ್ಷಗಳಲ್ಲಿ ಸುತ್ತಾಡಿ ಬಂದಿರುವೆ. ರೈತರ ಅಭಿವೃದ್ಧಿ ವಿಷಯದಲ್ಲಿ ರಾಜಿ ಮಾಡಿಕೊಳ್ಳಲಾರೆ ಎಂದರು.ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರು, ಪಿಕೆಪಿಎಸ್ ಸಿಇಒ ಭಾಗಣ್ಣ ಗುರಕಾರ ಮಾತನಾಡಿದರು. 

ಶ್ರೀ ಗುರು ಸಂಸ್ಥಾನ ಹೀರೆಮಠದ ಚಂದ್ರಶೇಖರ ಶಿವಾಚಾರ್ಯ, ಶ್ರೀ ಅಳ್ಳೋಳ್ಳಿಮಠದ ಶ್ರೀಶೈಲ ಅಳ್ಳೋಳ್ಳಿಮಠ, ಡಾ.ಸಂದೀಪ ಪಾಟೀಲ, ಪಿಕೆಪಿಎಸ್ ಅಧ್ಯಕ್ಷೆ ಭಾರತಿ ಕೊಳಾರಿ, ಉಪಾಧ್ಯಕ್ಷೆ ಶೋಭಾ ಅಫಜಲಪೂರ, ವಿ.ಡಿ.ಸಿ.ಸಿ ಬ್ಯಾಂಕ್ ವಿಜಯಪೂರ ನಿರ್ದೇಶಕ ಹಣಮಂತ್ರಾಯ ಗೌಡ ಪಾಟೀಲ, ವಿ.ಡಿ.ಸಿ.ಸಿ ಬ್ಯಾಂಕ್ ಸಿಇಒ ಎಸ್.ಡಿ.ಬಿರಾದಾರ, ವಿ.ಡಿ.ಸಿ.ಸಿ ಬ್ಯಾಂಕ್ ಸಿಂದಗಿ ನೋಡಲ್ ಅಧಿಕಾರಿಗಳು ಎನ್.ಜಿ.ಜನಿವಾರ, ಪಿಕೆಪಿಎಸ್ ನಿರ್ದೇಶಕ ಸಿದ್ದಪ್ಪ ಹಾವಳಗಿ, ಭೀಮಾಶಂಕರ ಬಂಡಗಾರ, ಗುರುರಾಜ್ ಅಳೂರ, ಅಬ್ದುಲ ವಹಾಬ್ ಸುಂಬಡ, ಪಂಚಯ್ಯ ರಾಂಪೂರಮಠ, ನಾಗರಾಜ್ ಅಮರಗೊಂಡ, ಮಹಿಬೂಬ ಮಸಳಿ, ಬಸವರಾಜ್ ಮೆಳ್ಳಿಗೇರಿ, ಜಟ್ಟೆಪ್ಪ ಬುರುಡ, ವಿ.ಡಿ.ಸಿ.ಸಿ ಬ್ಯಾಂಕ್‌ ಕ್ಷೇತ್ರಾಧಿಕಾರಿ ರಾಜು ರಾಠೋಡ ಮತ್ತು ಅಶೋಕ ಕೊಳಾರಿ, ಡಾ.ರಾಜೇಶ ಪಾಟೀಲ, ಶಿವಾನಂದ ಜಗತಿ, ಅಯೂಬ್ ದೇವರಮನಿ, ರಮೇಶ ಭಂಟನೂರ, ಶಿವಶರಣ ಗುಂದಗಿ, ಶ್ರೀಶೈಲ ಮಠಪತಿ, ಗಾಂಧಿಗೌಡ ಪಾಟೀಲ, ಫರೀಧಸಾಬ ಸುಂಬಡ ಸೇರಿದಂತೆ ಇತರರು ಇದ್ದರು.