ವಿಜಯಪುರ-ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ರೈಲು ಪರಿಷ್ಕೃತ ವೇಳಾಪಟ್ಟಿ ಏ.1ರಿಂದ ಜಾರಿ

| Published : Mar 24 2024, 01:31 AM IST

ವಿಜಯಪುರ-ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ರೈಲು ಪರಿಷ್ಕೃತ ವೇಳಾಪಟ್ಟಿ ಏ.1ರಿಂದ ಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ರೈಲು ನಂಬರ್‌ 07377 ವಿಜಯಪುರದಿಂದ ಸಂಜೆ 3.30ಕ್ಕೆ ಹೊರಟು ಮರುದಿನ 9.35ಕ್ಕೆ ಮಂಗಳೂರು ಜಂಕ್ಷನ್‌ ನಿಲ್ದಾಣ ತಲುಪಲಿದೆ. ನಂಬರ್‌ 07378 ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 2.50ಕ್ಕೆ ಹೊರಟು ಮರುದಿನ 9.30ಕ್ಕೆ ವಿಜಯಪುರ ತಲುಪಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ವಿಜಯಪುರ-ಮಂಗಳೂರು ಜಂಕ್ಷನ್‌-ವಿಜಯಪುರ ನಡುವಿನ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿ ಪರಿಷ್ಕರಿಸಲಾಗಿದ್ದು, ಇದು ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ. ಇದರ ವೇಳಾಪಟ್ಟಿ ಪರಿಷ್ಕರಿಸುವಂತೆ ರೈಲ್ವೆ ಹೋರಾಟಗಾರರು ಬಹುದಿನಗಳಿಂದ ರೈಲ್ವೆ ಇಲಾಖೆಯನ್ನು ಒತ್ತಾಯಿಸುತ್ತಲೇ ಬಂದಿದ್ದರು. ರೈಲು ನಂಬರ್‌ 07377 ವಿಜಯಪುರದಿಂದ ಸಂಜೆ 3.30ಕ್ಕೆ ಹೊರಟು ಮರುದಿನ 9.35ಕ್ಕೆ ಮಂಗಳೂರು ಜಂಕ್ಷನ್‌ ನಿಲ್ದಾಣ ತಲುಪಲಿದೆ. ನಂಬರ್‌ 07378 ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 2.50ಕ್ಕೆ ಹೊರಟು ಮರುದಿನ 9.30ಕ್ಕೆ ವಿಜಯಪುರ ತಲುಪಲಿದೆ. ಇಲ್ಲಿವರೆಗೆ ವಿಜಯಪುರದಿಂದ ಸಂಜೆ 6.35ಕ್ಕೆ ಹೊರಟು ಮರುದಿನ ಬೆಳಗ್ಗೆ 9.35ಕ್ಕೆ ಮಂಗಳೂರು ಜಂಕ್ಷನ್‌ ತಲುಪುತ್ತಿತ್ತು. ಈಗ ವಿಜಯಪುರದಿಂದ ಮೂರು ಗಂಟೆ ಮುಂಚಿತವಾಗಿ ಹೊರಟು ಮರುದಿನ ಹಾಲಿ ಸಮಯಕ್ಕೆ ಮಂಗಳೂರು ಜಂಕ್ಷನ್‌ ತಲುಪಲಿದೆ. ಮಂಗಳೂರು ಜಂಕ್ಷನ್‌ನಿಂದ ಹಾಲಿ ವೇಳಾಪಟ್ಟಿಯಂತೆ ಮಧ್ಯಾಹ್ನ 2.50ಕ್ಕೆ ಹೊರಟು ಮಧ್ಯಾಹ್ನ 12.40ಕ್ಕೆ ವಿಜಯಪುರ ತಲುಪುತ್ತಿತ್ತು, ಇನ್ನು 3.20 ಗಂಟೆಗಳ ಮುಂಚಿತವಾಗಿ ತಲುಪಲಿದೆ. ಪುತ್ತೂರು-ಮಂಗಳೂರು ಜಂಕ್ಷನ್‌ ವೇಳಾಪಟ್ಟಿ: ಈ ರೈಲು ಕಬಕ-ಪುತ್ತೂರಿಗೆ ಬೆಳಗ್ಗೆ 7.55ರ ಬದಲು 7.45, ನೇರಳಕಟ್ಟೆಗೆ 8.09ರ ಬದಲು 7.59, ಬಂಟ್ವಾಳಕ್ಕೆ 8.28ರ ಬದಲು 8.18, ಪಡೀಲಿಗೆ 8.55ರ ಬದಲು 8.45, ಮಂಗಳೂರು ಜಂಕ್ಷನ್‌ಗೆ 8.59ರ ಬದಲು 8.49ಕ್ಕೆ ತಲುಪಲಿದೆ. ಮಂಗಳೂರು ಸೆಂಟ್ರಲ್‌ಗೆ ಇದನ್ನು ಈಗ ವಿಸ್ತರಿಸಿಲ್ಲವಾದರೂ ಹಿಂದಿನ ವೇಳಾಪಟ್ಟಿಯಂತೆ 9.25ಕ್ಕೆ ತಲುಪಲಿದೆ. ಮಂಗಳೂರು ಸೆಂಟ್ರಲ್‌ನಲ್ಲಿ ಹೆಚ್ಚುವರಿ ಫ್ಲ್ಯಾಟ್‌ಫಾರಂ ಲಭ್ಯತೆ ಮೇರೆಗೆ ಮುಂದಿನ ದಿನಗಳಲ್ಲಿ ಇಲ್ಲಿಗೂ ವಿಸ್ತರಣೆಗೊಳ್ಳಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿದೆ.