ಕನ್ನಡಪ್ರಭ ವಾರ್ತೆ ವಿಜಯಪುರ: ಹಾಳಾದ ರಸ್ತೆ, ಎಲ್ಲೆಂದರಲ್ಲಿ ಕಸದ ರಾಶಿ, ಧೂಳು ಸೇರಿ ಹತ್ತಾರು ಸಮಸ್ಯೆಗಳಿಂದ ಜನ ಬೇಸತ್ತಿದ್ದರು. 2018ರಿಂದ ಇಲ್ಲಿಯವರೆಗೆ ವಿಜಯಪುರ ನಗರದ ಚಿತ್ರಣವೇ ಬದಲಾಗಿದೆ. ಅಸ್ತಮಾ ಮುಕ್ತ ನಗರವಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ: ಹಾಳಾದ ರಸ್ತೆ, ಎಲ್ಲೆಂದರಲ್ಲಿ ಕಸದ ರಾಶಿ, ಧೂಳು ಸೇರಿ ಹತ್ತಾರು ಸಮಸ್ಯೆಗಳಿಂದ ಜನ ಬೇಸತ್ತಿದ್ದರು. 2018ರಿಂದ ಇಲ್ಲಿಯವರೆಗೆ ವಿಜಯಪುರ ನಗರದ ಚಿತ್ರಣವೇ ಬದಲಾಗಿದೆ. ಅಸ್ತಮಾ ಮುಕ್ತ ನಗರವಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ವಾರ್ಡ್ ನಂ.33ರ ಕೇತನ ನಗರದ ಗಣಪತಿ ಪ್ರತಿಷ್ಠಾಪಿಸುವ ಸ್ಥಳದ ಹತ್ತಿರ ₹ 8.95 ಕೋಟಿ ಅನುದಾನದಲ್ಲಿ ಮದೀನಾ ನಗರ, ಕೇತನ ನಗರ, ಕೆ.ಜಿ.ಎನ್ ನಗರದಲ್ಲಿ ಆಂತರಿಕ ಒಳಚರಂಡಿ ಹಾಗೂ ಸಿಸಿ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಬಡಾವಣೆ, ಕಾಲೊನಿಗಳಲ್ಲಿಯೂ ಗುಣಮಟ್ಟದ ಸಿಸಿ ರಸ್ತೆಗಳನ್ನಾಗಿ ಮಾಡಿದ್ದರಿಂದ ಧೂಳು ಮುಕ್ತವಾಗಿವೆ. ದೇಶದಲ್ಲಿ ಅತ್ಯುತ್ತಮ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ವಿಜಯಪುರ 4ನೇ ಸ್ಥಾನದಲ್ಲಿದೆ. ಅಭಿವೃದ್ಧಿಯಿಂದ ಎಲ್ಲ ಭಾಗಗಳಲ್ಲಿಯೂ ನಿವೇಶನಗಳ ಬೆಲೆ ಹೆಚ್ಚಳವಾಗಿದೆ. ರಸ್ತೆ ಬದಿಯಲ್ಲಿ ಸಹ ಹೆಚ್ಚಿನ ಮರಗಳನ್ನು ನೆಡಲಾಗಿದೆ ಎಂದರು.ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಹೀಗಾಗಿ, ರಸ್ತೆಗಳ ಕಾಮಗಾರಿ ಕೈಗೊಳ್ಳುವ ಪೂರ್ವದಲ್ಲೇ ತಮ್ಮ ಪೈಪ್ ಮತ್ತಿತರೆ ಜೋಡಣೆ ಮಾಡಿಕೊಳ್ಳಬೇಕು. ರಸ್ತೆ ಆದ ನಂತರ ಅಗೆಯುವುದರಿಂದ ರಸ್ತೆಗಳು ಹಾಳಾಗುತ್ತವೆ. ಕಸಗಳನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ವಾಹನಗಳಲ್ಲಿ ಹಾಕಬೇಕು. ಪ್ಲಾಸ್ಟಿಕ್ ಎಸೆಯುವುದರಿಂದ ದನಕರುಗಳು ತಿಂದು ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ. ಆ ತಪ್ಪುಗಳನ್ನು ನಮ್ಮಿಂದ ನಡೆಯಬಾರದು ಎಂದು ಸಲಹೆ ನೀಡಿದರು.
ಮೇಯರ್ ಎಂ.ಎಸ್.ಕರಡಿ, ಸದಸ್ಯರಾದ ರಾಜಶೇಖರ ಕುರಿಯವರ, ಆರತಿ ಶಹಾಪುರ, ಮುಖಂಡರಾದ ಶಂಕರ ಹೂಗಾರ, ಆನಂದ ಹಂಜಿ, ವಿಠ್ಠಲ ನಡುವಿನಕೇರಿ, ಶುಭಂ ಜಾಧವ, ನಿತಿನ ಕಾಳೆ, ಸಂಗಮೇಶ ಹಿರೇಮಠ, ಗುರು ಪರಿತ್, ಮಹಾದೇವ ಬನ್ಸೋಡೆ, ಮಹಾದೇವಿ ಭಜಂತ್ರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.