ವಚನ ಸಾಹಿತ್ಯ ಪ್ರಾಧಿಕಾರ ರಚನೆಗೆ ವಿಜಯಶ್ರೀ ಸಬರದ ಸಲಹೆ

| Published : Jan 19 2025, 02:19 AM IST

ವಚನ ಸಾಹಿತ್ಯ ಪ್ರಾಧಿಕಾರ ರಚನೆಗೆ ವಿಜಯಶ್ರೀ ಸಬರದ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

Vijayashree Sabara's suggestion for formation of Vachana Sahitya Pradhikari

-ಶರಣ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ ಕುರಿತ ಗೋಷ್ಠಿಯಲ್ಲಿ ವಿಷಯ ಮಂಡನೆ

------

ವಚನ ಸಾಹಿತ್ಯದಲ್ಲಿ 39 ಮಂದಿ ವಚನಕಾರ್ತಿಯರಿದ್ದಾರೆ. ಸರ್ಕಾರ ವಚನ ಸಾಹಿತ್ಯ ಪ್ರಾಧಿಕಾರ ರಚನೆ ಮಾಡಬೇಕೆಂದು ಸಾಹಿತಿ ಡಾ.ವಿಜಯಶ್ರೀ ಸಬರದ ಸಲಹೆ ಮಾಡಿದರು. ಶರಣ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಶರಣ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ ವಿಚಾರ ಕುರಿತ ಚಿಂತನ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವರ್ಣಭೇದವನ್ನು ತೊಡೆದುಹಾಕಿ ಬದುಕಿದವರು ವೀರಶರಣೆಯರಾಗಿದ್ದಾರೆ. ಶರಣೆಯರ ವಿಚಾರಧಾರೆಗಳು ಇಂದು ಬದುಕಿಗೆ ಮಾರ್ಗದರ್ಶನ. ಭಕ್ತಿಗೆ ಹೊಸ ಆಯಾಮ ನೀಡಿ ಅಂಧ ಭಕ್ತಿಯನ್ನು ತಿರಸ್ಕರಿಸಿದರು ಎಂದರು. ಲಿಂಗ ಅಸಮಾನತೆಯನ್ನು ಶಿವಶರಣೆಯರು ವಿರೋಧಿಸಿ ಲಿಂಗಬೇಧವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಕಾಯಕದಲ್ಲಿ ನಿಷ್ಠೆ, ಪ್ರಾಮಾಣಿಕತೆ ಬೇಕೆಂದು ಆಯ್ದಕ್ಕ ಲಕ್ಕಮ್ಮ ಹೇಳಿದ್ದಾರೆ. ಅನೇಕ ಕ್ಷೇತ್ರಗಳ ಬಗೆಗೆ ತಮ್ಮ ವಚನಗಳಲ್ಲಿ ಶಿವಶರಣೆಯರು ತಿಳಿಸಿ ತಮ್ಮ ತತ್ವಗಳ ಮೌಲ್ಯಗಳನ್ನು ಹೆಚ್ಚಿಸಿದ್ದಾರೆ ಎಂದರು. ಡಾ.ವಿಜಯದೇವಿ, ಕವಯತ್ರಿ ತಾರಿಣಿ ಶುಭದಾಯಿನಿ, ಡಾ.ಸಿದ್ದರಾಮ ಬೆಲ್ದಾಳ ಶರಣರು, ಡಾ.ಬಸವಕುಮಾರ ಸ್ವಾಮೀಜಿಗಳು, ಡಾ.ಸಿ.ಸೋಮಶೇಖರ ಉಪಸ್ಥಿತರಿದ್ದರು. ಆನಂದ ಪಾಟೀಲ ಮತ್ತು ಸಂಗಡಿಗರು ವಚನ ಸಂಗೀತಕಾರ್ಯಕ್ರಮ ನಡೆಸಿಕೊಟ್ಟರು.

----------------

ಪೋಟೋ: ಶರಣ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಶರಣ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ ವಿಚಾರ ಕುರಿತ ಚಿಂತನ ಗೋಷ್ಠಿಯಲ್ಲಿ ಡಾ.ವಿಜಯಶ್ರೀ ಸಬರದ ಮಾತನಾಡಿದರು.

18 ಸಿಟಿಡಿ5