ಭಾರಿ ಮಳೆಗೆ ಹಾನಿಗೊಳಗಾದ ಪ್ರದೇಶಕ್ಕೆ ವಿಜಯಸಿಂಗ ಭೇಟಿ

| Published : Sep 27 2024, 01:21 AM IST

ಸಾರಾಂಶ

Vijayasinghe visits the area affected by heavy rains

-ಶೀಘ್ರ ರಸ್ತೆ ದುರಸ್ತಿ, ಬೆಳೆ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚನೆ

---------

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ: ತಾಲೂಕಿನ ಅಲಗೂಡ ಗ್ರಾಮದ ಹತ್ತಿರ ಭಾರಿ ಮಳೆಯಿಂದ ರಸ್ತೆ ಹಾಳಾಗಿದ್ದು, ಇದನ್ನು ಕಂಡು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯ್ ಸಿಂಗ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ತಕ್ಷಣವೇ ಈ ರಸ್ತೆ ಸುಧಾರಣೆ ಮಾಡಬೇಕು ಹಾಗೂ ರೈತರ ಬೆಳೆ ನಾಶವಾಗಿದ್ದು ಪರಿಹಾರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ವಿವಿಧ ರಸ್ತೆಯ ಕಾಮಗಾರಿ ಮಾಡುವರು ಗುಣಮಟ್ಟ ಕಾಯ್ದುಕೊಳ್ಳಬೇಕು ಯಾವುದೇ ರೀತಿಯ ಕಳಪೆ ಕಾಮಗಾರಿ ಆಗದಂತೆ ಎಚ್ಚರ ವಹಿಸಲು ಲೋಕೋಪಯೋಗಿ ಇಲಾಖೆ ಬೀದರ್ ಅವರಿಗೆ ತಿಳಿಸಿ ಕಳಪೆ ಕಾಮಗಾರಿಗಳ ಬಗ್ಗೆ ಗಮನಹರಿಸಿ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸಂತೋಷ್ ಗುತ್ತೇದಾರ್, ದಿನೇಶ್ ರಾಠೋಡ್, ನಗರಸಭೆ ಸದಸ್ಯ ವಿದೇಶ, ಪುರುಷೋತ್ತಮ್, ರವೀಂದ್ರ ಕುಮಾರ್ ಬೊರಳೆ, ಅನಂತ್ ವಾಡೇಕರ್, ಶುಭಂ ಉಕ್ಕವಲೆ, ಸಗಿರೋದ್ದಿನ್, ಮೂಸಾ ಕೆಬಿಎನ್, ಕರೀಂ ಸಾಬ್, ಎಂಡಿ ಕರೀಂ, ಡಿಕೆ ದಾವೂದ್, ಗ್ರಾಮಸ್ಥರು ಉಪಸ್ಥಿತರಿದ್ದರು.

--

ಚಿತ್ರ 26ಬಿಡಿಆರ್52

ಬಸವಕಲ್ಯಾಣ ತಾಲೂಕಿನ ಅಲಗೂಡ ಗ್ರಾಮದ ಹತ್ತಿರ ಭಾರಿ ಮಳೆಯಿಂದ ರಸ್ತೆ ಹಾಳಾಗಿದ್ದನ್ನು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

--