ವಿಜೃಂಭಣೆಯ ಹೇಮರೆಡ್ಡಿ ಮಲ್ಲಮ್ಮ ಜಾತ್ರಾ ಮಹೋತ್ಸವ

| Published : May 13 2024, 12:07 AM IST

ವಿಜೃಂಭಣೆಯ ಹೇಮರೆಡ್ಡಿ ಮಲ್ಲಮ್ಮ ಜಾತ್ರಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಕೆಂಭಾವಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಮಹಾಸಾಧ್ವಿ ಮಲ್ಲಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಮಹಾರಥೋತ್ಸವದಲ್ಲಿ ಸಾವಿರಾರು ಮಹಿಳೆಯರು ರಥವನ್ನು ಎಳೆದರು.

ಸುರಪುರ: ತಾಲೂಕಿನ ಕೆಂಭಾವಿ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಮಲ್ಲಮ್ಮಳ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಕಳೆದ ಹತ್ತು ದಿನಗಳಿಂದ ದೇವಸ್ಥಾನದಲ್ಲಿ ನಡೆಯುತ್ತಿದ್ದ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಪುರಾಣ ಮುಕ್ತಾಯ ಸಮಾರಂಭ ಮತ್ತು ಮಹಾರಥೋತ್ಸವ ಅತೀ ವಿಜೃಂಭಣೆಯಿಂದ ನೆರವೇರಿತು.

ರಥವನ್ನು ಸಾವಿರಕ್ಕೂ ಅಧಿಕ ಮಹಿಳೆಯರು ಎಳೆಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಮುಂಜಾನೆ ರಾಜಶೇಖರಯ್ಯ ಹಿರೇಮಠ ಮತ್ತು ಅರ್ಚಕ ವೀರೇಶ ಗಣಾಚಾರಿ ನೇತೃತ್ವದಲ್ಲಿ ಹೋಮಹವನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಸಂಜೆ ರಜತ ಖಚಿತ ಮಲ್ಲಮ್ಮಳ ಮೂರ್ತಿ ಜೊತೆಗೆ ರಥದ ಮೇಲೆ ಶಿಖರ ಏರುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರಿಂದ ಹೇಮರೆಡ್ಡಿ ಮಲ್ಲಮ್ಮ ಮಾತಾಕಿ ಜೈ ಎಂಬ ಘೋಷಣೆ ಎಲ್ಲೆಡೆ ಮೊಳಗಿದವು. ದೇವಸ್ಥಾನದ ಪ್ರಾಂಗಣ ಸಾವಿರಾರು ಭಕ್ತರಿಂದ ತುಂಬಿ ತುಳುಕುತ್ತಿತ್ತು.

ಮಾಗಣಗೇರಿ ಬ್ರಹನ್ಮಠದ ಡಾ. ವಿಶ್ವರಾಧ್ಯ ಶಿವಾಚಾರ್ಯ ಸ್ವಾಮಿಗಳು, ಹಿರೇಮಠದ ಚನ್ನಬಸವ ಶಿವಾಚಾರ್ಯರು, ಚಿಕ್ಕಮಠದ ಚನ್ನಯ್ಯ ಸ್ವಾಮಿಗಳು, ಪುರಾಣಿಕ ಅಜೇಂದ್ರ ಮಹಾಸ್ವಾಮಿಗಳು, ಹೇಮರೆಡ್ಡಿ ಸಂಸ್ಥೆಯ ಅಧ್ಯಕ್ಷ ಶಾಂತಗೌಡ ಬಿರಾದಾರ ನಿರಲಗಿ, ಶರಣಬಸವ ಡಿಗ್ಗಾವಿ, ಅಮ್ಮಣ್ಣ ಧರಿ, ವೈ.ಟಿ. ಪಾಟೀಲ್, ದೊಡ್ಡಪ್ಪಗೌಡ ಯಡಿಯಾಪುರ, ಡಾ. ಪ್ರವೀಣ ಪಾಟೀಲ್, ರಾಮನಗೌಡ ಯಾಳಗಿ, ಮೋಹನರೆಡ್ಡಿ ಡಿಗ್ಗಾವಿ, ನಿಂಗಣ್ಣ ಸೆಕ್ರೆಟರಿ, ಸಂಗನಗೌಡ ಮರಡ್ಡಿ, ಅಯ್ಯನಗೌಡ ಲಕ್ಕುಂಡಿ, ಡಾ. ಕಿರಣ ಜಕರೆಡ್ಡಿ,ರಾಜಶೇಖರ ಯಡಿಯಾಪುರ, ಸಿದ್ದನಗೌಡ ಶಿವಪುರ, ಶಂಕರಗೌಡ ಶಿವನಂದಿ, ಸಿದ್ದನಗೌಡ ಮಾಳಹಳ್ಳಿ, ಹಳ್ಳೆಪ್ಪಗೌಡ ಪರಸನಹಳ್ಳಿ, ನಿಂಗನಗೌಡ ಹನಿ, ಈರಣ್ಣಗೌಡ ಪರಸನಹಳ್ಳಿ, ಸಿದ್ದನಗೌಡ ವಮದಗನೂರ, ಶಂಕ್ರಯ್ಯ ಮುತ್ಯಾ, ಶ್ರೀಧರ ಹಿರೇಮಠ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.