ಇಂದು ವಿಕಾಸ ಸೌಹಾರ್ದ ಬ್ಯಾಂಕ್ ದಾವಣಗೆರೆ ಶಾಖೆ ಆರಂಭ: ಪ್ರಸನ್ನ ಹಿರೇಮಠ

| Published : May 29 2024, 12:46 AM IST

ಸಾರಾಂಶ

ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ 15ನೇ ಶಾಖೆಯನ್ನು ಮೇ 29ರಂದು ದಾವಣಗೆರೆಯ ಬಿನ್ನಿ ಕಂಪನಿ ರಸ್ತೆಯ ಶ್ರೀ ಕೊಟ್ಟೂರೇಶ್ವರ ಆರ್ಕೆಡ್‌ನಲ್ಲಿ ಆರಂಭಿಸಲಾಗುತ್ತಿದೆ ಎಂದು ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಹೊಸಪೇಟೆಯಲ್ಲಿ ಬ್ಯಾಂಕ್ ಆರಂಭವಾಗಿ 27 ವರ್ಷಗಳಿಂದ ಸೇವೆ

- ದಾವಣಗೆರೆ ಸೇರಿ ರಾಜ್ಯಾದ್ಯಂತ 15 ಶಾಖೆಗಳ ಹೊಂದಿರುವ ಬ್ಯಾಂಕ್ - - - ದಾವಣಗೆರೆ: ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ 15ನೇ ಶಾಖೆಯನ್ನು ಮೇ 29ರಂದು ದಾವಣಗೆರೆಯ ಬಿನ್ನಿ ಕಂಪನಿ ರಸ್ತೆಯ ಶ್ರೀ ಕೊಟ್ಟೂರೇಶ್ವರ ಆರ್ಕೆಡ್‌ನಲ್ಲಿ ಆರಂಭಿಸಲಾಗುತ್ತಿದೆ ಎಂದು ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ್ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸಪೇಟೆಯಲ್ಲಿ ವಿಕಾಸ ಬ್ಯಾಂಕ್ ಆರಂಭವಾಗಿ 27 ವರ್ಷವಾಗಿದೆ. ಸಹಕಾರಿ ಯಾತ್ರೆಯಲ್ಲಿ ಅನೇಕ ವಿನೂತನ ವಿಚಾರಗಳು, ಚಿಂತನೆಗಳಿಗೆ ಮುನ್ನುಡಿ ಬರೆಯುತ್ತ ಬಂದಿದೆ ಎಂದರು.

ಬೆಳಗ್ಗೆ 10.15ಕ್ಕೆ ನಡೆಯುವ ಶಾಖೆ ಉದ್ಘಾಟನಾ ಕಾರ್ಯಕ್ರಮ ಸಾನ್ನಿಧ್ಯವನ್ನು ಶ್ರೀ ಉಜ್ಜಯಿನಿ ಪೀಠದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿ ಕೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಹೊಸಪೇಟೆ ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಬ್ಯಾಂಕ್ ದಾವಣಗೆರೆಯಲ್ಲಿ ಆರಂಭವಾಗುವ ಶಾಖೆ ಸೇರಿದಂತೆ 15 ಶಾಖೆಗಳನ್ನು ರಾಜ್ಯದಲ್ಲಿ ಹೊಂದಿದೆ. ಡಿಜಿಟಲೀಕರಣಗೊಂಡಿರುವ 260 ಬ್ಯಾಂಕ್‌ಗಳಲ್ಲಿ ಟಾಪ್ 10 ಬ್ಯಾಂಕ್‌ಗಳಲ್ಲಿ ವಿಕಾಸ ಬ್ಯಾಂಕ್ ಸಹ ಒಂದಾಗಿದೆ. ಬ್ಯಾಂಕ್‌ನಲ್ಲಿ ಎಲ್ಲ ರೀತಿಯ ಸಾಲ ಸೌಲಭ್ಯಗಳಿವೆ. ವರ್ಷದ 365 ದಿನವೂ ಸೇವೆ ಒದಗಿಸುವ ಬ್ಯಾಂಕ್ ನಮ್ಮದಾಗಿದೆ. ಒಟ್ಟು ₹1355 ಕೋಟಿ ವ್ಯವಹಾರ ನಡೆಸುತ್ತಿದ್ದು, ಗ್ರಾಹಕರ ವಿಶ್ವಾಸ ಉಳಿಸಿಕೊಂಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಮಾಜಿ ಹಾಗೂ ಹಾಲಿ ನಿರ್ದೇಶಕರಾದ ಅನಂತ್ ಜೋಶಿ, ರಮೇಶ್ ಪುರೋಹಿತ್, ಎಂ.ವೆಂಕಪ್ಪ, ಜೆ.ಜಂಬಣ್ಣ, ಚೇತನ್ ಇದ್ದರು.

- - - -28ಕೆಡಿವಿಜಿ34ಃ:

ದಾವಣಗೆರೆಯಲ್ಲಿ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್‌ ಶಾಖೆ ಆರಂಭಿಸುವ ಕುರಿತು ಪ್ರಸನ್ನ ಹಿರೇಮಠ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.