ಕೇಂದ್ರದ ಯೋಜನೆಗಳ ಜನರಿಗೆ ತಲುಪಿವುದು ವಿಕಸಿತ ಭಾರತ ಸಂಕಲ್ಪಯಾತ್ರೆ ಉದ್ದೇಶ: ಹೇಮಗಿರೀಶ ಹಾವಿನಾಳ

| Published : Jan 10 2024, 01:45 AM IST / Updated: Jan 10 2024, 02:40 PM IST

ಕೇಂದ್ರದ ಯೋಜನೆಗಳ ಜನರಿಗೆ ತಲುಪಿವುದು ವಿಕಸಿತ ಭಾರತ ಸಂಕಲ್ಪಯಾತ್ರೆ ಉದ್ದೇಶ: ಹೇಮಗಿರೀಶ ಹಾವಿನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದಲ್ಲಿ ಅನೇಕ ಜನೋಪಯೋಗಿ ಯೋಜನೆಗಳಿದ್ದು, ಪ್ರಯೋಜನಗಳು ದೇಶದಾದ್ಯಂತ ಎಲ್ಲ ಉದ್ದೇಶಿತ ಫಲಾನುಭವಿಗಳಿಗೆ ಕಾಲಮಿತಿಯಲ್ಲಿ ತಲುಪಿಸುವುದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದು ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಹೇಳಿದರು.

ಮುಂಡರಗಿ: ಕೇಂದ್ರ ಸರ್ಕಾರದಲ್ಲಿ ಅನೇಕ ಜನೋಪಯೋಗಿ ಯೋಜನೆಗಳಿದ್ದು, ಇದರ ಪ್ರಯೋಜನಗಳು ದೇಶದಾದ್ಯಂತ ಎಲ್ಲ ಉದ್ದೇಶಿತ ಫಲಾನುಭವಿಗಳಿಗೆ ಕಾಲಮಿತಿಯಲ್ಲಿ ತಲುಪಿಸುವುದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದು ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಹೇಳಿದರು. 

ಅವರು ಮಂಗಳವಾರ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜರುಗಿದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೇಂದ್ರ ಸರ್ಕಾರದಿಂದ ಪಿಎಂ ಜೆಡಿವೈ, ಪಿಎಂ ಜೆಜೆಬಿವೈ, ಪಿಎಂ ಎಸ್ಬಿವೈ, ಮುದ್ರಾ, ಸ್ಟ್ಯಾಂಡ್ಅಪ್ ಇಂಡಿಯಾ, ಪಿಎಂ ಸೇವಾ ನಿಧಿ, ಪಿಎಂ ಜೆಎವೈ, ಪಿಎಂ ಕಿಸಾನ್, ಪಿಎಂ ಉಜ್ವಲ್ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, 2023ರ ನವೆಂಬರ್ 15ರಿಂದ ಪ್ರಾರಂಭವಾದ ಈ ಯಾತ್ರೆ ಕಾರ್ಯಕ್ರಮ ಜನವರಿ 26ರ ವರೆಗೆ ದೇಶಾದ್ಯಂತ ಜರುಗಲಿದೆ. 

ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ದೇಶದಾದ್ಯಂತ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಗದಗ ಲೀಡ್ ಬ್ಯಾಂಕಿನ ಪ್ರಕಾಶ ಎ. ಮಾತನಾಡಿ, ಕೇಂದ್ರ ಸರ್ಕಾರದಿಂದ ಅನೇಕ ಉದ್ಯೋಗ ಅವಕಾಶಗಳಿಗೆ ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿದರವೂ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಸಾಲ ಸೌಲಭ್ಯಗಳಿದ್ದು, ಅದನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಉತ್ತಮ ವ್ಯವಹಾರ ನಡೆಸಿ ಆ ಸಾಲವನ್ನು ನಿಗದಿತ ಅವಧಿಯಲ್ಲಿ ತೀರಿಸಿದಲ್ಲಿ ಮುಂದೆ ಹೆಚ್ಚಿನ ಸಾಲ ಪಡೆಯಲು ಅರ್ಹರಾಗುವ ಮೂಲಕ ಸ್ವ ಉದ್ಯೋಗವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಬಹುದು ಎಂದರು. 

ತಾಲೂಕು ಆಸ್ಪತ್ರೆಯ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಸಜ್ಜನರ ಮಾತನಾಡಿ, ಗುಣಮಟ್ಟದ ಆರೋಗ್ಯ ಸೇವೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದುವ ಮಹತ್ವಾಕಾಂಕ್ಷೆಯೊಂದಿಗೆ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಡಿಯಲ್ಲಿ ದೇಶಾದ್ಯಂತ ಕೋಟ್ಯಂತರ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗಿದೆ. 

ಅಲ್ಲದೇ ಟಿಬಿ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಸೂಕ್ತವಾದ ಸೇವೆಗಳು ಲಭ್ಯಇವೆ ಎಂದರು. ಎಚ್ಪಿ ಗ್ಯಾಸ್ ಏಜೆನ್ಸಿ ವಿತರಕ ಸಂಗಮೇಶ ಪಾಟೀಲ ಮಾತನಾಡಿ, ಹೊಗೆ ರಹಿತ ಕುಟುಂಬಗಳನ್ನು ಮಾಡುವ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಪ್ರಮುಖ ಉದ್ದೇಶವಾಗಿದ್ದು, ಈಗಾಗಲೇ ಮುಂಡರಗಿ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳಿದ್ದು, ಉಳಿದವರು ತಕ್ಷಣವೇ ದಾಖಲಾತಿಗಳನ್ನು ನೀಡುವ ಮೂಲಕ ಉಳಿದ ಫಲಾನುಭವಿಗಳು ಪಡೆದುಕೊಳ್ಳಬಹುದು ಎಂದರು. ಅಂಚೆ ಇಲಾಖೆಯ ಗೀತಾ ರಿತ್ತಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಲಿಂಗರಾಜಗೌಡ ಪಾಟೀಲ, ನಾಗೇಶ ಹುಬ್ಬಳ್ಳಿ, ಶಿವಪ್ಪ ಚಿಕ್ಕಣ್ಣವರ್, ಜ್ಯೋತಿ ಹಾನಗಲ್, ಪವನ್ ಮೇಟಿ, ಪವಿತ್ರಾ ಕಲ್ಲಕುಟಗರ್, ಮೈಲಾರಪ್ಪ ಕಲಕೇರಿ, ಎಸ್.ಎಸ್.ಗಡ್ಡದ, ವಿಜಯಕುಮಾರ ಶಿಳ್ಳೀನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳಿಗೆ ಸಾಲಪಡೆದ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಸಂದೀಪ ಕಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.