ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಕೊರಟಗೆರೆ ಪಟ್ಟಣದಲ್ಲಿ ಏ.೨೯ ರಿಂದ ಮೇ ೧ ರವರಗೆ ಊರಿನ ಗ್ರಾಮದೇವತೆಗಳಾದ ಕೋಟೆ ಮಾರಮ್ಮ ಮತ್ತು ಕೋಲ್ಲಾಪುರದಮ್ಮ ದೇವಿಗಳ ನೂತನ ದೇವಾಲಯ ಪುನರ್ ಪ್ರತಿಷ್ಠಾಪನಾ ಮಹೋತ್ಸವನ್ನು ವಿಜೃಭಣೆಯಿಂದ ಹಮ್ಮಿಕ್ಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎ.ಡಿ.ಬಲರಾಮಯ್ಯ ತಿಳಿಸಿದರು.ಪಟ್ಟಣದ ದೇವಾಲಯದ ಆವರಣದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪಟ್ಟಣದಲ್ಲಿ ಈ ದೇವಾಲಯ ನಿರ್ಮಾಣಕ್ಕೆ ಸುಮಾರು ೧.೫೦ ಕೋಟಿ ರುಗಳಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಲಾಗಿದ್ದು, ಈ ದೇವಾಲಯಗಳ ನಿರ್ಮಾಣಕ್ಕೆ ಭಕ್ತಾದಿಗಳು, ಸ್ಥಳೀಯ ಸಂಘ ಸಂಸ್ಥೆಯವರು, ಜನಪ್ರತಿನಿಧಿಗಳು ಅಂಗಡಿಗಳ ಮಾಲೀಕರು ದೇಣಿಗೆಯನ್ನು ನೀಡಿದ್ದಾರೆ ಎಂದು ತಿಳಿಸಿದರು. ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಸಿದ್ಧರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರದ ಶ್ರೀ ಡಾ.ಹನುಮಂತನಾಥಸ್ವಾಮೀಜಿ, ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವರಾದ ವಿ.ಸೋಮಣ್ಣ, ಸಹಕಾರ ಸಚಿವರಾದ ಕೆ.ಎನ್,ರಾಜಣ್ಣ, ಮಾಜಿ ಸಚಿವರು ಹಾಗೂ ಶಾಸಕರಾದ ಟಿ,ಬಿ.ಜಯಚಂದ್ರ, ಮಾಜಿ ಸಚಿವ ಸಿ.ವೀರಣ್ಣ, ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ಮಾಜಿ ಸಂಸದ ಮುದ್ದಹನುಮೇಗೌಡ, ಗೊರವನಹಳ್ಳಿ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಾಸುದೇವ್, ಮಾಜಿ ಶಾಸಕ ಪಿ.ಆರ್,ಸುಧಾಕರ್ ಲಾಲ್, ನಿವೃತ್ತ ಐ.ಎ.ಎಸ್ ಅನಿಲ್‌ಕುಮಾರ್, ಪ.ಪಂ.ಅಧ್ಯಕ್ಷೆ ಅನಿತಾ ಸೇರಿದಂತೆ ಎಲ್ಲಾ ಸದಸ್ಯರು, ಹಲವು ಗಣ್ಯರು ಆಗಮಿಸುವರು ಎಂದು ತಿಳಿಸಿದರು.
ಈ ಮೂರು ದಿನಗಳ ಕಾಲ ಕೊರಟಗೆರೆ ಪಟ್ಟಣದಲ್ಲಿ ಮಾಂಸ ಮಾರಾಟವನ್ನು ಮಾಡದಂತೆ ಮನವಿ ಮಾಡಿದ ಅವರು, ೨೬೫೦ ಮಂದಿ ಮುತೈದೆಯರಿಗೆ ಮಡ್ಲಕ್ಕಿ ಮತ್ತು ಸೀರೆಯನ್ನು ನೀಡಲಾಗುವುದು, ಈ ಮೂರು ದಿನಗಳ ಕಾಲ ಬರುವ ಸಾವಿರಾರು ಭಕ್ತಾದಿಗಳಿಗೆ ನಿರಂತರ ಅನ್ನ ಸಂತರ್ಪಣೆ ನಡೆಯಲಿದೆ ಎಂದರು. ಮಾರಮ್ಮ ದೇವಿಯ ಪ್ರಧಾನ ಅರ್ಚಕ ಶ್ರೀಧರಾಚಾರ್ ಮಾತನಾಡಿ ಕೋಟೆ ಮಾರಮ್ಮ ದೇವಿಯು ಮೈಸೂರು ಅರಸರ ರಕ್ಷಣೆಯ ದೇವಿಯಾಗಿದ್ದು, ಮೈಸೂರು ಅರಸರು ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಹೋಗುತ್ತಿದ್ದರು, ಇದರ ಪ್ರತಿರೂಪವಾಗಿ ಮೈಸೂರಿನ ಅರಮನೆ ಆರವರಣದಲ್ಲಿ ಕೋಟೆಮಾರಮ್ಮ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಕೊರಟಗೆರೆ ಪಟ್ಟಣವು ಪವಿತ್ರವಾದ ದೈವ ಭೂಮಿಯಾಗಿದ್ದು ಇಲ್ಲಿ ಗಂಗಾಧರೇಶ್ವರ, ಕೋಟೆ ಮಾರಮ್ಮ ಮತ್ತು ಕಟ್ಟೆಗಣಪತಿ ನೆಲೆಊರಿರುವ ಉದ್ಬವ ದೇವರುಗಳಾಗಿದ್ದಾರೆ ಎಂದು ಹೇಳಿದರು. ಅರ್ಚಕ ದೀಪಕ್ ಶರ್ಮ ಮಾತನಾಡಿ ಕೊರಟಗೆರೆ ಪಟ್ಟಣದಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಮಹೋತ್ಸವದಲ್ಲಿ ಏ.೨೯ ರ ಮಂಗಳವಾರ ಸಂಜೆ ೬ ಗಂಟೆಗೆ ಸಾವಿರಾರು ಮಹಿಳೆಯರಿಂದ ಕುಂಭಕಳಸ. ಗಂಗಾ ಪೂಜೆಯೊಂದಿಗೆ ದೇವಿಗಳಿಗೆ ಜಲಾದಿವಾಸ ನಡೆಯಲಿದೆ, ೩೦ ರ ಬುಧುವಾರ ಗಣಪತಿ ಪೂಜೆ, ಶುದ್ಧೀಕರಣಗಳು, ಕಳಸ ಪೂಜೆ, ನವಗ್ರಹ ಆರಾಧನೆ, ವಿವಿಧ ಹೋಮಗಳು ಸೇರಿದಂತೆ ಹಲವು ವಿವಿಧ ಪೂಜೆಗಳು ನಡೆಯಲಿವೆ, ಮೇ ೧ ರ ಗುರುವಾರ ದೇವಿಯವರ ಸ್ಥಿರಬಿಂಬದ ಅಷ್ಟಬಂಧ ಪ್ರತಿಷ್ಠಾಪನೆ, ೧೦ ಬಗೆಯ ವಿವಿಧ ಹೋಮಗಳು ಪೂರ್ಣಾಹುತಿ ಸೇರಿದಂತೆ ಹಲವು ಧಾರ್ಮಿಕ ವಿಧಿ ವಿದಾನಗಳೊಂದಿಗೆ ಮಹಾಮಂಗಳಾತಿ ನೆರವೇರಲಿದೆ ಎಂದರು. ಪ್ರತಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ,ವಿ.ಮಂಜುನಾಥ್, ಖಜಾಂಚಿ ಕೆ.ಎನ್.ಲಕ್ಷ್ಮಿನಾರಾಯಣ್, ಊರಿನ ಗೌಡರಾದ ಮುರಳೀಗೌಡ, ಎಸ್.ಪಿ.ಎಲ್.ಎನ್.ರಾವ್, ರಾಜಣ್ಣ ಟೀ, ಕೆ.ಆರ್.ಓಬಳರಾಜು, ಕೆ.ವಿ.ಪುರುಷೋತ್ತಮ್, ಕೆ.ಬಿ.ಲೋಕೇಶ್, ಕೃಷ್ಣಪ್ಪ, ರಾಘವೇಂದ್ರ, ರಂಜಿತ್, ಸಂಜಯ್, ಪುನೀತ್ ಸೇರಿದಂತೆ ಇನ್ನಿತರರು ಹಾಜರಿದ್ದರು.