ಸಾರಾಂಶ
ಕೊಪ್ಪ, ಹರಿಹರಪುರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಹಳ್ಳಿ ಹಳ್ಳಿಯಲ್ಲಿ ಆಯೋಜನೆ ಆಗುತ್ತಿರುವುದು ಅಭಿನಂದನಾರ್ಹ. ಹಳ್ಳಿಗಳಲ್ಲಿ ಜನರು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿ ಎಂದು ಕಸಾಪ ಕೊಪ್ಪ ತಾಲೂಕು ಘಟಕದ ನಿಯೋಜಿತ ಅಧ್ಯಕ್ಷ ಜೆ.ಎಂ.ಶ್ರೀಹರ್ಷ ತಿಳಿಸಿದರು.
ಕನ್ನಡಪ್ರಭ ವಾರ್ತೆ, ಕೊಪ್ಪ
ಹರಿಹರಪುರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಹಳ್ಳಿ ಹಳ್ಳಿಯಲ್ಲಿ ಆಯೋಜನೆ ಆಗುತ್ತಿರುವುದು ಅಭಿನಂದನಾರ್ಹ. ಹಳ್ಳಿಗಳಲ್ಲಿ ಜನರು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿ ಎಂದು ಕಸಾಪ ಕೊಪ್ಪ ತಾಲೂಕು ಘಟಕದ ನಿಯೋಜಿತ ಅಧ್ಯಕ್ಷ ಜೆ.ಎಂ.ಶ್ರೀಹರ್ಷ ತಿಳಿಸಿದರು.ಹರಿಹರಪುರ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸಹಕಾರದೊಂದಿಗೆ ಚಂಡೆಗುಡ್ಡೆಯ ಕುವೆಂಪು ಸಭಾ ಭವನದಲ್ಲಿನಡೆದ ಕಸಾಪ ನಡಿಗೆ ಹಳ್ಳಿ ಕಡೆಗೆ ಹಾಗೂ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ ಸಾಧಕ ಹಿರಿಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂತಹ ಕಾರ್ಯಕ್ರಮಗಳು ಹಳ್ಳಿಗಳನ್ನು ಸಶಕ್ತಗೊಳಿಸುತ್ತವೆ ಎಂದರು.
ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಮುಖ್ಯೋಪಾಧ್ಯಾಯ ಅನಂತ ಹೆಬ್ಬಾರ್ ಯೋಗ ಎಂದರೆ ಒಟ್ಟಾಗಿರುವುದು ಎಂದು ಅರ್ಥವಾಗಿರುತ್ತದೆ. ನಮ್ಮ ಶರೀರ ಮತ್ತು ಮನಸ್ಸು ಎರಡು ಸಮಚಿತ್ತದಲ್ಲಿದ್ದಾಗ ನಾವು ಆರೋಗ್ಯದಿಂದ ಇರಲು ಸಾಧ್ಯ. ನಮ್ಮ ಮನಸ್ಸು ಹಾಗೂ ಶರೀರ ಸಮ ಚಿತ್ತದಲ್ಲಿರಬೇಕಾದರೆ ನಿಯಮಿತ ಯೋಗ ಪ್ರಾಣಾಯಾಮ ಸೂರ್ಯ ನಮಸ್ಕಾರ ನಿಯಮಿತವಾಗಿ ಅನುಸರಿಸುವುದು ಉತ್ತಮ. ಭೂಮಿ ಸಂರಕ್ಷಣೆ ಹಾಗೂ ಪರಿಸರದ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.ಕಸಾಪ ಹರಿಹರಪುರ ಹೋಬಳಿ ಘಟಕದ ಅಧ್ಯಕ್ಷ ವೈದ್ಯ ಬಿ.ಆರ್. ಅಂಬರೀಶ ಭಂಡಿಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಕಸಾಪ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮದ ಮೂಲ ಉದ್ದೇಶ ಹಳ್ಳಿಯಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದಾಗಿದೆ. ಸಾಧಕ ಹಿರಿಯರನ್ನ ಗುರುತಿಸಿ ಗೌರವಿಸುವು ದಾಗಿದೆ. ಪ್ರಬಂಧ ಆಶುಭಾಷಣ ರಸಪ್ರಶ್ನೆ ಮುಂತಾದ ಕಾರ್ಯಕ್ರಮಗಳ ಮೂಲಕ ಪ್ರತಿಭೆಗಳ ಅನಾವರಣಕ್ಕೆ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಶ್ರೀಮೂರ್ತಿ ಶೃಂಗೇರಿ ಹಿರಿಯ ಸಾಧಕರನ್ನು ಗೌರವಿಸಿ ಮಾತನಾಡಿ ರಾಜ್ಯದ ಏಕತೆ ಸಮಗ್ರತೆ ದೃಷ್ಟಿಯಿಂದ ರಚಿತವಾದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ಹಳ್ಳಿಗಳಲ್ಲಿ ಆಯೋಜನೆ ಆಗುತ್ತಿರುವುದು ಪ್ರಶಂಸನಿಯ ಎಂದರು. ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿ ಕಾರ್ಯಕ್ರಮಗಳಿಗೆ ನಾವೆಲ್ಲ ಸದಾ ಕೈಜೋಡಿಸಬೇಕು ಎಂದರು.ರೋಟರಿ ಸಮುದಾಯದಳ ಹರಿಹರಪುರ ಅಧ್ಯಕ್ಷ ಸಂಚನ್ ಬೇಳೆಗದ್ದೆ ಕನ್ನಡ ಸಾಹಿತ್ಯ ಪರಿಷತ್ತಿನ ಉಗಮ ಹಾಗೂ ಕಾರ್ಯಚಟುವಟಿಕೆಗಳ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ನಾಟಿ ವೈದ್ಯ ಹಾಗು ಹಿರಿಯ ಕೃಷಿ ಕಾರ್ಮಿಕರಾದ ಚಂದ್ರಮ್ಮ ಅವರನ್ನು ಗೌರವಿಸಲಾಯಿತು.ಕಸಾಪ ಹೋಬಳಿ ಘಟಕದ ಕೋಶಾಧ್ಯಕ್ಷ ಎ.ಓ.ವೆಂಕಟೇಶ್, ಪ್ರಧಾನ ಸಂಚಾಲಕ ಶುಕುರ್ ಅಹಮದ್, ಕಸಾಪ ಗ್ರಾಮ ಘಟಕ ಅಸಗೋಡು ಅಧ್ಯಕ್ಷ ಕೇಶವಮೂರ್ತಿ, ಸಾಂಸ್ಕೃತಿಕ ಕಾರ್ಯದರ್ಶಿ ಪದ್ಮಿನಿ ಲಕ್ಷ್ಮಿನಾರಾಯಣ್, ಮಂಜುಳಾ, ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ರಾಜೇಶ್, ಸೇವಾ ಪ್ರತಿನಿಧಿ ಸುರೇಖಾ, ಸಾಯಿಶ್ ವಗಳೆ, ಮಹಿಮ, ವೇದಾವತಿ, ಲಕ್ಷ್ಮಿ ನಾರಾಯಣ್,ಒಕ್ಕೂಟದ ಅಧ್ಯಕ್ಷ ಶೇಖರ್, ಸುಮಿತ್ರ ನಾರಾಯಣ್ ಮುಂತಾದವರು ಉಪಸ್ಥಿತರಿದ್ದರು.