ದೇವಾಲಯ ಸ್ವಚ್ಛತೆಗೆ ಗ್ರಾಮಸ್ಥರು ಕಾರ್ಯನಿರ್ವಹಿಸಿ: ಗಾಯತ್ರಿ ಶಾಂತೇಗೌಡ

| Published : Nov 23 2023, 01:45 AM IST

ದೇವಾಲಯ ಸ್ವಚ್ಛತೆಗೆ ಗ್ರಾಮಸ್ಥರು ಕಾರ್ಯನಿರ್ವಹಿಸಿ: ಗಾಯತ್ರಿ ಶಾಂತೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ದೇವಾಲಯ ಸ್ವಚ್ಛತೆಗೆ ಗ್ರಾಮಸ್ಥರು ಕಾರ್ಯನಿರ್ವಹಿಸಿ: ಗಾಯತ್ರಿ ಶಾಂತೇಗೌಡನೂತನ ದೇವಾಲಯ ಉದ್ಘಾಟನಾ ಸಮಾರಂಭ

ಮತ್ತಾವರ ಗ್ರಾಮದಲ್ಲಿ ಶ್ರೀ ಕೆಂಚರಾಯಸ್ವಾಮಿ ನೂತನ ದೇವಾಲಯ ಉದ್ಘಾಟನಾ ಸಮಾರಂಭ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಗ್ರಾಮಗಳಲ್ಲಿ ದೇವಾಲಯ ನಿರ್ಮಿಸಿದರೆ ಸಾಲದು, ಮನೆಗೆ ಒಬ್ಬರಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರೆ ಮಾತ್ರ ದೇವಸ್ಥಾನ ಆವರಣ ಸ್ವಚ್ಛವಾಗಿರಲು ಸಾಧ್ಯ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಹೇಳಿದರು.ತಾಲೂಕಿನ ಮತ್ತಾವರ ಗ್ರಾಮದಲ್ಲಿ ಶ್ರೀ ಕೆಂಚರಾಯಸ್ವಾಮಿ ನೂತನ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಈ ಗ್ರಾಮದಲ್ಲಿ ಹಲವಾರು ಪಂಗಡಗಳಿದ್ದು ಮಕ್ಕಳಿಗೆ ಗುರು ಹಿರಿಯರ ಮಾರ್ಗದರ್ಶನ ಅಗತ್ಯ ದೆ. ಆ ನಿಟ್ಟಿನಲ್ಲಿ ಪೋಷಕರು ಜವಾಬ್ದಾರಿಯುತ ಮಕ್ಕಳಿಗೆ ಪೋಷಣೆ ಮಾಡಬೇಕು. ಜೊತೆಗೆ ದೇವಾಲಯಕ್ಕೆ ಕಳುಹಿಸಿಕೊಡುವ ಮೂಲಕ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು ಎಂದು ಸಲಹೆ ಮಾಡಿದರು. ಸಮಾರಂಭ ಉದ್ಘಾಟಿಸಿ ಮಾತನಾಡಿ ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್, ಮತ್ತಾವರದಲ್ಲಿ ದಲಿತ ಸಮುದಾಯ ಅತ್ಯಂತ ಶಕ್ತಿಯುತವಾಗಿದೆ. ಇದರಿಂದ ಎಲ್ಲಾ ಜನಾಂಗದ ವಿಶ್ವಾಸ ಗಳಿಸಿ ದೇವಾಲಯ ನಿರ್ಮಿಸಿರುವುದು ಒಳ್ಳೆಯ ಸಂಗತಿ ಎಂದರು. ದೇವಾಲಯ ಸಮಿತಿ ಅಧ್ಯಕ್ಷ ಸಗನಯ್ಯ ಮಾತನಾಡಿ ಶ್ರೀ ಕೆಂಚರಾಯ, ಗುಂಡಿನಮ್ಮ, ಹರಳಿಮರದಮ್ಮ, ಲೋಕದಮ್ಮ ದೇವರ ನೂತನ ವಿಗ್ರಹ ಪ್ರಾಣಪ್ರತಿಷ್ಠಾಪನೆ ಮತ್ತು ನೂತನ ದೇವಾಲಯ ಪ್ರವೇಶ ಇಂದಿನಿಂದ ಪ್ರಾರಂಭವಾಗಿದ್ದು ಇನ್ನೂ 3 ದಿನಗಳ ಕಾಲ ವಿಶೇಷ ಪೂಜೆ, ಹೋಮ ಜರುಗಲಿದೆ ಎಂದು ತಿಳಿಸಿದರು.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಡಿ.ರಮೇಶ್‌ಗೌಡ ಮಾತನಾಡಿ, ಪುರಾತನ ಹಿನ್ನೆಲೆ ಹೊಂದಿರುವ ಶ್ರೀ ಕೆಂಚರಾಯಸ್ವಾಮಿ ಗ್ರಾಮದ ಹೃದಯ ಭಾಗದಲ್ಲಿದೆ. ದೇವಾಲಯ ಜೀರ್ಣೋದ್ದಾರಕ್ಕಾಗಿ ಕಳೆದ 8 ವರ್ಷಗಳಿಂದ ಮುಂದಾಗಿದ್ದು ಎಲ್ಲಾ ದಾನಿಗಳ ಮೂಲಕ ಪೂರ್ಣಗೊಳಿಸಲಾಗಿದೆ ಎಂದರು.

ಚಿತ್ರದುರ್ಗ ಮಹಾಸಂಸ್ಥಾನ ಮಠದ ಶ್ರೀ ಬಸವನಾಗಿದೇವ ಶರಣರು ಆಶೀರ್ವಚನ ನೀಡಿದರು. ಇದೇ ವೇಳೆ ದೇವಾಲಯ ನಿರ್ಮಾಣಕ್ಕೆ ಸಹಕರಿಸಿ ದಾನಿಗಳು ಹಾಗೂ ಗ್ರಾಮಸ್ಥರಿಗೆ ದೇವಸ್ಥಾನ ಸಮಿತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮೂಗ್ತಿಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಅಂಬಿಕಾ ಪ್ರಕಾಶ್, ಸದಸ್ಯರಾದ ಎಂ.ಟಿ.ಪ್ರಭಾಕರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಆನಂದ್, ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶಿವಪ್ರಕಾಶ್, ಸಹ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಎಂ.ಕೆ.ಮಹೇಶ್, ಸದಸ್ಯರಾದ ಎಂ.ಡಿ. ಧರ್ಮೇಶ್ ಉಪಸ್ಥಿತರಿದ್ದರು.

22 ಕೆಸಿಕೆಎಂ 4ಚಿಕ್ಕಮಗಳೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿ ಶ್ರೀ ಕೆಂಚರಾಯಸ್ವಾಮಿ ನೂತನ ದೇವಾಲಯ ಉದ್ಘಾಟನಾ ಸಮಾರಂಭ ನಡೆಯಿತು. ಗಾಯತ್ರಿ ಶಾಂತೇಗೌಡ, ಎಚ್‌.ಎಚ್‌. ದೇವರಾಜ್‌, ರಮೇಶ್‌ಗೌಡ ಇದ್ದರು.