ರಸ್ತೆ ಸಂಪರ್ಕ ಇಲ್ಲದೆ ಜೋಳಿಗೆಯಲ್ಲಿ ಮೃತ ದೇಹ ಸಾಗಿಸಿದ ಗ್ರಾಮಸ್ಥರು

| Published : Sep 01 2024, 01:50 AM IST

ಸಾರಾಂಶ

ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಕೆ.ಮೇಗಲ್ ಗ್ರಾಮದ ಕೊಣೆಗೋಡು ಎಸ್‌.ಸಿ ಕಾಲೊನಿಗೆ ರಸ್ತೆ ಸಂಪರ್ಕ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಗ್ರಾಮದ ಯುವಕ ಅವಿನಾಶ್ ಎಂಬುವರು ಶುಕ್ರವಾರ ಮೃತಪಟ್ಟಿದ್ದು, ಅಂತ್ಯಸಂಸ್ಕಾರಕ್ಕಾಗಿ ಅವರ ಮೃತದೇಹವನ್ನು ಕಾಲೋನಿಯ ಮನೆಗೆ ತರಲು ರಸ್ತೆ ಇಲ್ಲದ ಕಾರಣ ಸಂಬಂಧಿಕರು ಬಡಿಗೆಗೆ ಜೋಳಿಗೆ ಕಟ್ಟಿಕೊಂಡು ಹೊತ್ತು ತಂದರು.

ಕಳಸ: ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಕೆ.ಮೇಗಲ್ ಗ್ರಾಮದ ಕೊಣೆಗೋಡು ಎಸ್‌.ಸಿ ಕಾಲೊನಿಗೆ ರಸ್ತೆ ಸಂಪರ್ಕ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಗ್ರಾಮದ ಯುವಕ ಅವಿನಾಶ್ ಎಂಬುವರು ಶುಕ್ರವಾರ ಮೃತಪಟ್ಟಿದ್ದು, ಅಂತ್ಯಸಂಸ್ಕಾರಕ್ಕಾಗಿ ಅವರ ಮೃತದೇಹವನ್ನು ಕಾಲೋನಿಯ ಮನೆಗೆ ತರಲು ರಸ್ತೆ ಇಲ್ಲದ ಕಾರಣ ಸಂಬಂಧಿಕರು ಬಡಿಗೆಗೆ ಜೋಳಿಗೆ ಕಟ್ಟಿಕೊಂಡು ಹೊತ್ತು ತಂದರು.

ಅವಿನಾಶ್ ಅವರನ್ನು ಗುರುವಾರ ಬೆನ್ನಿನ ಮೇಲೆ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಲೋನಿಗೆ ರಸ್ತೆ ಇಲ್ಲದ ಕಾರಣ, ಬಡಿಗೆಗೆ ಜೋಳಿಗೆ ಕಟ್ಟಿ ಮೃತದೇಹ ತರಬೇಕಾಯಿತು ಎಂದು ಗ್ರಾಮಸ್ಥರು ಹೇಳಿದರು. ಮಳೆಗಾಲದಲ್ಲಿ ಹಳ್ಳ ರಭಸವಾಗಿ ಹರಿಯುವುದರಿಂದ ಗ್ರಾಮದ ಸಂಪರ್ಕ ಕಡಿದು ಹೋಗುತ್ತದೆ. ರಸ್ತೆ, ಸೇತುವೆಗಾಗಿ ಹಲವು ವರ್ಷಗಳಿಂದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ, ಯಾರೂ ಕೂಡ ಸ್ಪಂದಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪ.