ಕಳ್ಳತನಕ್ಕೆ ಬಂದಿದ್ದ ಖದೀಮರನ್ನು ಹಿಡಿದು ಥಳಿಸಿದ ಗ್ರಾಮಸ್ಥರು

| Published : Feb 06 2025, 11:47 PM IST

ಸಾರಾಂಶ

ಹಾಡಹಗಲೇ ಮನೆ ಕಳ್ಳತನಕ್ಕೆ ಇಳಿದಿದ್ದ ಖದೀಮರನ್ನು ಸಾರ್ವಜನಿಕರು ಹಿಡಿದು ಥಳಿಸಿರುವ ಘಟನೆ ತಾಲೂಕಿನ ಸಂಗೂರು ಗ್ರಾಮದಲ್ಲಿ ಗುರುವಾರ ನಡೆದಿದೆ.

ಹಾವೇರಿ: ಹಾಡಹಗಲೇ ಮನೆ ಕಳ್ಳತನಕ್ಕೆ ಇಳಿದಿದ್ದ ಖದೀಮರನ್ನು ಸಾರ್ವಜನಿಕರು ಹಿಡಿದು ಥಳಿಸಿರುವ ಘಟನೆ ತಾಲೂಕಿನ ಸಂಗೂರು ಗ್ರಾಮದಲ್ಲಿ ಗುರುವಾರ ನಡೆದಿದೆ.

ಗ್ರಾಮದ ಬಸವರಾಜ ಹೊಸೂರು ಎಂಬವರು ಮನೆಗೆ ಬೀಗ ಹಾಕಿಕೊಂಡು ಹೊಲಕ್ಕೆ ಹೋದಾಗ ಮನೆಗೆ ನುಗ್ಗಿದ್ದ ಇಬ್ಬರು ಕಳ್ಳರು ಟ್ರೆಜರಿ ಮುರಿದು ಕಳ್ಳತನ ಮಾಡಲು ಮುಂದಾಗಿದ್ದರು. ಅಷ್ಟೊತ್ತಿಗೆ ಮನೆಯ ಮಾಲೀಕ ಬಸವರಾಜ ಮನೆಗೆ ಬಂದಿದ್ದಾರೆ. ಆಗ ಕಳ್ಳರು ಮನೆಯ ಮಾಲೀಕನಿಗೆ ಚಾಕು ತೋರಿಸಿ ಹೆದರಿಸಿದ್ದಾರೆ. ತಕ್ಷಣ ಮಾಲೀಕ ಬಸವರಾಜ ಚೀರಿದಾಗ ಸುತ್ತಮುತ್ತಲಿನ ಮನೆಯವರು ಧಾವಿಸಿ ಕಳ್ಳರನ್ನು ಹಿಡಿದು ಥಳಿಸಿ ಬಾಯಿ ಬಿಡಿಸಿದಾಗ ಒಬ್ಬ ಹುಬ್ಬಳ್ಳಿ, ಮತ್ತೊಬ್ಬ ಲಕ್ಷ್ಮೇಶ್ವರದವನು ಎಂದು ತಿಳಿದು ಬಂದಿದೆ.

ಇಬ್ಬರನ್ನೂ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.