ಬಿದಿರೆ ಕೆರೆಗೆ ಗ್ರಾಮಸ್ಥರಿಂದ ಬಾಗಿನ ಅರ್ಪಣೆ

| Published : Nov 03 2025, 01:30 AM IST

ಸಾರಾಂಶ

ಬಿದಿರೆ ಕೆರೆಗೆ ಹಳೇಬೀಡು, ಮಲ್ಲಾಪುರ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಂದ ಬಾಗಿನ ಅರ್ಪಣೆಯ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕೆರೆ ಹೊಯ್ಸಳರ ಕಾಲದ ಕೆರೆಯಾಗಿದ್ದು ಹಲವಾರು ವರ್ಷಗಳಿಂದ ಕೆರೆಯಲ್ಲಿ ನೀರು ಇಲ್ಲದೆ ಅಂತರ್ಜಲ ಇಲ್ಲದೆ ಈ ಬಾಗದ ಜನತೆಗೆ ತೊಂದರೆ ಉಂಟಾಗಿತ್ತು. ಆದರೂ ಕೆಲವರು ತಮ್ಮ ಜೀವನಕ್ಕೆ ಹೈನುಗಾರಿಕೆಯಲ್ಲಿ ಜೀವನ ನಡೆಸಿದರು. ಮಳೆ ಮತ್ತು ಹೋರಾಟದ ಮಧ್ಯೆ ನಮ್ಮ ಕೆರೆಗೆ ನೀರು ಬಂದಿದೆ. ಈ ಕೆರೆಯಿಂದ ಸುಮಾರು ೨೫ ಕಿ. ಮೀವರೆಗೂ ಅಂತರ್ಜಲ ಹೆಚ್ಚುತ್ತದೆ. ಇದರಿಂದ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗುತ್ತದೆ. ಈ ಕೆರೆಯ ನೈರ್ಮಲ್ಯತೆ ಕಾಪಾಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಹೋಬಳಿಯ ಬಿದಿರೆ ಕೆರೆಗೆ ಹಳೇಬೀಡು, ಮಲ್ಲಾಪುರ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಂದ ಬಾಗಿನ ಅರ್ಪಣೆಯ ಕಾರ್ಯಕ್ರಮವನ್ನು ನಡೆಸಲಾಯಿತು.

ಹಳೇಬೀಡಿಗೆ ಸೇರಿದ ಬಿದರಿಕೆರೆ ೪೫ ಎಕರೆ ವಿಸ್ತೀರ್ಣ ಹೊಂದಿದ್ದು, ಸುಮಾರು ೧೦ ವರ್ಷಗಳಿಂದ ಕೆರೆಯಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಇದ್ದು ಈ ಬಾರಿ ಮಳೆ ಮತ್ತು ನೀರು ಬರುವ ಮಾರ್ಗಗಳನ್ನು ಸರಿಪಡಿಸಿದ ಮೇಲೆ ಹೆಚ್ಚಿನ ರೀತಿಯಲ್ಲಿ ಕೆರೆಗೆ ನೀರು ಬಂದಿದೆ ಎಂದು ಸುತ-ಮುತ್ತ ಜಮೀನ ರೈತರು ತಿಳಿಸಿದರು. ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹುಲಿಗೌಡ ಮಾತನಾಡುತ್ತ, ಈ ಕೆರೆ ಹೊಯ್ಸಳರ ಕಾಲದ ಕೆರೆಯಾಗಿದ್ದು ಹಲವಾರು ವರ್ಷಗಳಿಂದ ಕೆರೆಯಲ್ಲಿ ನೀರು ಇಲ್ಲದೆ ಅಂತರ್ಜಲ ಇಲ್ಲದೆ ಈ ಬಾಗದ ಜನತೆಗೆ ತೊಂದರೆ ಉಂಟಾಗಿತ್ತು. ಆದರೂ ಕೆಲವರು ತಮ್ಮ ಜೀವನಕ್ಕೆ ಹೈನುಗಾರಿಕೆಯಲ್ಲಿ ಜೀವನ ನಡೆಸಿದರು. ಮಳೆ ಮತ್ತು ಹೋರಾಟದ ಮಧ್ಯೆ ನಮ್ಮ ಕೆರೆಗೆ ನೀರು ಬಂದಿದೆ. ಈ ಕೆರೆಯಿಂದ ಸುಮಾರು ೨೫ ಕಿ. ಮೀವರೆಗೂ ಅಂತರ್ಜಲ ಹೆಚ್ಚುತ್ತದೆ. ಇದರಿಂದ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗುತ್ತದೆ. ಈ ಕೆರೆಯ ನೈರ್ಮಲ್ಯತೆ ಕಾಪಾಡಬೇಕು. ಕಸ ಕಡ್ಡಿಗಳನ್ನು ಹಾಕಿ ತುಂಬಾ ಗಲೀಜು ಮಾಡಿದರೆ ಇದರ ಬಗ್ಗೆ ಸಣ್ಣ ನೀರವಾರಿ ಇಲಾಖೆ, ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ತೆಗೆದುಕೊಂಡು ಕೆರೆಯ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕೆರೆಯ ದಡದಲ್ಲಿ ನಾಮಫಲಕ ಹಾಕಿ ಸಾರ್ವಜನಿಕರಿಗೆ ಗಲೀಜು ಮಾಡಬಾರದು ಎಂದು ಸೂಚನೆ ನೀಡಬೇಕು ಎಂದು ತಿಳಿಸಿದರು.

ಬಾಗಿನ ಅರ್ಪಣೆಯ ಕಾರ್ಯಕ್ರಮದಲ್ಲಿ ರೈತ ಬಾಂಧವರು, ಮಹಿಳೆಯರು, ಪುರೋಹಿತರು ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು.