ಸಾರಾಂಶ
ಇಂಡಿ: ಇಂಡಿ ಜಿಲ್ಲೆಯಾಗಬೇಕು ಎಂದು ಒತ್ತಾಯಿಸಿ ತಾಲೂಕಿನ ಇಂಗಳಗಿ, ಬಬಲಾದ ಗ್ರಾಮಸ್ಥರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಂಡಿ: ಇಂಡಿ ಜಿಲ್ಲೆಯಾಗಬೇಕು ,ಇಂಡಿ ಉಪವಿಭಾಗವನ್ನು ಸಂವಿಧಾನದ ವಿಧಿ 371 ಜೆ ಅಡಿ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ ತಾಲೂಕಿನ ಇಂಗಳಗಿ, ಬಬಲಾದ ಗ್ರಾಮಸ್ಥರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟು ಟಿಪ್ಪುಸುಲ್ತಾನ, ಬಸವೇಶ್ವರ ವೃತ್ತದ ಮೂಲಕ ನಡೆದು ತಾಲೂಕು ಆಡಳಿತ ಸೌಧ ತಲುಪಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಇಂಗಳಗಿ ಗ್ರಾಮದ ಮುಖಂಡ ಪ್ರಭು ಹೊಸಮನಿ, ತಾಪಂ ಸದಸ್ಯ ಗಣಪತಿ ಬಾಣಿಕೋಲ ,ಉಮೇಶ ಬಳಬಟ್ಟಿ , ಬಾಪುರಾಯಗೌಡ ಬಿರಾದಾರ, ನಂಜುಂಡಪ್ಪ ವರದಿಯಂತೆ ಇಂಡಿ ತಾಲೂಕು ಗಡಿ ಭಾಗದಲ್ಲಿದ್ದು, ಸಾಕಷ್ಟು ಅಭಿವೃದ್ಧಿಯಾಗಬೇಕಾಗಿದೆ. ಜಿಲ್ಲೆಯಾಗಲು ಇಂಡಿ ಪಟ್ಟಣಕ್ಕೆ ಎಲ್ಲಾ ಅರ್ಹತೆಗಳು, ಮಾನದಂಡಗಳು ಇದ್ದು, ಸರ್ಕಾರ ಕೂಡಲೇ ಇಂಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.ಅಣ್ಣಪ್ಪ ಅಹಿರಸಂಗ, ಮಲ್ಲಿಕಾರ್ಜುನ ಕುಂಬಾರ, ಸುನೀಲಗೌಡ ಬಿರಾದಾರ, ರಾಜು ಚಾಬುಕಸವಾರ, ಭೀಮಣ್ಣ ಕೌಜಲಗಿ , ಹಣಮಂತ ಅರವತ್ತು, ಸೇರಿದಂತೆ ಇಂಗಳಗಿ, ಬಬಲಾದ ಗ್ರಾಮದ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.