ಸರ್ಕಾರಿ ಶಾಲೆಗಾಗಿ ಗ್ರಾಮಸ್ಥರ ಪ್ರತಿಭಟನೆ

| Published : Feb 14 2024, 02:15 AM IST

ಸಾರಾಂಶ

ಮಕ್ಕಳ ಪೋಷಕರು, ಗ್ರಾಮಸ್ಥರು, ಸ್ಥಳೀಯ ಕೆಲವು ಮುಖಂಡರಿಂದ ಶಾಲೆಗಾಗಿ ಪ್ರತಿಭಟನೆ, ಅಧಿಕಾರಿಗಳ ನಿರ್ಲಕ್ಷ್ಯ ಮಾಡುತ್ತಿದಾದರೆಂಬ ಆರೋಪ. ಕಟ್ಟಡಿ ನಿರ್ಮಾಣ ಸ್ಥಗಿತಗೊಂಡರು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲವೆಂದು ಗ್ರಾಮಸ್ಥರ ಅಸಮಾದಾನ

ಕನ್ನಡಪ್ರಭ ವಾರ್ತೆ ಟೇಕಲ್

ಇಲ್ಲಿಯ ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿನ ತೊರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಂತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮಕ್ಕಳು ಓದಲು ಸರಿಯಾದ ಶಾಲೆ ಇಲ್ಲದಂತಾಗಿದೆ. ಇದಕ್ಕೆ ಅಧಿಕಾರಿಗಳು ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ವಹಿಸಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ತೊರಹಳ್ಳಿ ಗ್ರಾಮದಲ್ಲಿ ನಡೆದಿದೆ.

ತೊರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲಾ ಕಟ್ಟಡ ನಿರ್ಮಿಸುತ್ತಿರುವಾಗ ಗ್ರಾಮಸ್ಥರೊಬ್ಬರು ಈ ಸ್ಥಳ ತಮಗೆ ಸೇರಿದ್ದೆಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ತಕ್ಷಣ ಶಾಲಾ ಕಟ್ಟಡದ ಕಾಮಗಾರಿ ನಿಲ್ಲಿಸಲು ನ್ಯಾಯಾಲಯ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಒಂದು ತಿಂಗಳಾದರು ಈ ಬಗ್ಗೆ ಅಧಿಕಾರಿಗಳು ಗಮನಹರಿಸದಿದ್ದಾಗ ಶಾಲಾ ಪೋಷಕರು, ಗ್ರಾಮಸ್ಥರು ಕಂಗಲಾಗಿ ನಮ್ಮೂರಿಗೆ ಶಾಲೆ ಬೇಕೆಂದು ಪಟ್ಟು ಹಿಡಿದಿದ್ದಾರೆ.ಶಾಲಾ ಕಟ್ಟಡಕ್ಕಾಗಿ ಪಟ್ಟು

ಈ ನಿಟ್ಟಿನಲ್ಲಿ ಮಂಗಳವಾರ ತೊರಹಳ್ಳಿ ಗ್ರಾಮದಲ್ಲಿ ಮಕ್ಕಳ ಪೋಷಕರು, ಗ್ರಾಮಸ್ಥರು, ಸ್ಥಳೀಯ ಕೆಲವು ಮುಖಂಡರಾದ ಓಜರಹಳ್ಳಿ ಮುನಿಯಪ್ಪ, ಶ್ರೀಧರ್‌ಮೂರ್ತಿ, ರೈತಸಂಘದ ತಿಪ್ಪಸಂದ್ರದ ಹರೀಶ್‌ಗೌಡ, ಪ್ರಶಾಂತ್‌ರವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿ ಮಕ್ಕಳು ಶಾಲೆ ಬೇಕೆಂದು ಘೋಷಣೆ ಕೂಗಿದರು.

ಈ ವೇಳೆ ಸ್ಥಳಕ್ಕೆ ಮಾಲೂರು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಲಾ, ಹುಳದೇನಹಳ್ಳಿ ಪಂಚಾಯ್ತಿ ಪಿಡಿಒ ಸೋಮೇಶ, ಮಾಸ್ತಿ ಪಿಐ ರಾಮಪ್ಪಗುತ್ತೆದಾರ್, ಸ್ಥಳಕ್ಕೆ ಆಗಮಿಸಿ ಅವರ ಜೊತೆಗೆ ಮಾತುಕತೆ ನಡೆಸಲಾಯಿತು. ಈ ವಿಚಾರವು ನ್ಯಾಯಾಲಯದಲ್ಲಿ ಇರುವುದರಿಂದ ಸಮುದಾಯ ಭವನದಲ್ಲಿ ಶಾಲೆ ನಡೆಯುವಂತೆ ಮಾಡಲಾಗುವುದೆಂದು ಪಿಡಿಒ ಮತ್ತು ಬಿಇಒ ತಿಳಿಸಿದ ಮೇಲೆ ಪ್ರತಿಭಟನೆಯನ್ನು ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ರೈತ ಸಂಘದ ನಲ್ಲಂಡಹಳ್ಳಿ ಶ್ರೀಧರ್, ತೊರಹಳ್ಳಿ ಗ್ರಾಮದ ಶ್ರೀಧರ್‌ಮೂರ್ತಿ, ಮುರಳಿ, ಮುನಿಕೃಷ್ಣ, ಸುಬ್ರಮಣಿ, ಮತ್ತಿತರರು ಭಾಗವಹಿಸಿದ್ದರು.

13 ಕ.ಟಿ.ಇ.ಕೆ ಚಿತ್ರ 1 : ಟೇಕಲ್‌ನ ತೊರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆ ಬೇಕೆಂದು ಗ್ರಾಮಸ್ಥರು, ಮಕ್ಕಳು ಪ್ರತಿಭಟನೆ ನಡೆಸಿದರು.