ಸಾರಾಂಶ
ಸರ್ಕಾರಿ ಗೋಮಾಳ, ಕೆರೆ ಒತ್ತುವರಿ ತೆರವು ಸರ್ವೆ ಕಾರ್ಯದ ವೇಳೆ ಗ್ರಾಮಸ್ಥರು ತೀವ್ರ ವಾಗ್ವಾದಕ್ಕಿಳಿದ ಘಟನೆ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ನಡೆದಿದೆ.
- ಮಣ್ಣು ಗಣಿಗಾರಿಕೆ, ಒತ್ತುವರಿ ಖಂಡಿಸಿ ಪ್ರತಿಭಟಿಸಿದ್ದ ದಸಂಸ- - - ದಾವಣಗೆರೆ: ಸರ್ಕಾರಿ ಗೋಮಾಳ, ಕೆರೆ ಒತ್ತುವರಿ ತೆರವು ಸರ್ವೆ ಕಾರ್ಯದ ವೇಳೆ ಗ್ರಾಮಸ್ಥರು ತೀವ್ರ ವಾಗ್ವಾದಕ್ಕಿಳಿದ ಘಟನೆ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ನಡೆದಿದೆ.
ಕಬ್ಬೂರು ಗ್ರಾಮದಲ್ಲಿ ಸರ್ಕಾರಿ ಗೋಮಾಳ, ಕೆರೆ ಒತ್ತುವರಿ ತೆರವು ಸರ್ವೇಗೆ ಬಂದಿದ್ದ ಭೂ ಮಾಪಕರು ಕೈಗೊಂಡ ಅಳತೆಯಲ್ಲಿ ವ್ಯತ್ಯಾಸ ಬಂದಿದೆ ಎಂದು ಗ್ರಾಮಸ್ಥರು ಆರೋಪಿಸಿ, ಅಳತೆ ಕಾರ್ಯವನ್ನು ಸ್ಥಗಿತಗೊಳಿಸಿ, ವಾಗ್ವಾದಕ್ಕಿಳಿದರು. ಅಂತಿಮವಾಗಿ ಭೂಮಾಪಕರನ್ನು ಸ್ಥಳದಿಂದ ವಾಪಸ್ ಕಳಿಸಿದರು.ಕಬ್ಬೂರು ಗ್ರಾಮದ ರಿಜಿಸ್ಟರ್ ಸ.ನಂ.31-32ರಲ್ಲಿದ್ದ ಸರ್ಕಾರಿ ಗೋಮಾಳ, ಸ್ಮಶಾನವನ್ನು ಬಗೆದಿರುವುದು, ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡಿದ್ದು, ಒತ್ತುವರಿ ತೆರವುಗೊಳಿಸಿ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಎಸ್‌ಎಸ್ ಜಿಲ್ಲಾ ಘಟಕದಿಂದ ಡಿಸಿ ಕಚೇರಿ ಬಳಿ ಪ್ರತಿಭಟಿಸಲಾಗಿತ್ತು. ಈ ಹಿನ್ನೆಲೆ ಸರ್ವೆ ಕಾರ್ಯಕ್ಕೆ ಇಲಾಖೆ ಮುಂದಾಗಿತ್ತು.
ಗ್ರಾಮಸ್ಥರಾದ ಗಂಗಣ್ಣ, ಕುಮಾರಣ್ಣ, ರೇವಣ್ಣ, ಚಂದ್ರಪ್ಪ, ಪ್ರಸನ್ನ, ಗ್ರಾಪಂ ಸದಸ್ಯರಾದ ಕೋಟೆಪ್ಪ, ಮಂಜುನಾಥ, ವೈ.ಮಂಜುನಾಥ ಕಬ್ಬೂರು, ಡಿಎಸ್ಸೆಸ್ ಜಿಲ್ಲಾಧ್ಯಕ್ಷ ಕುಂದುವಾಡ ಮಂಜುನಾಥ, ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ ಬಣದ ಪದಾಧಿಕಾರಿಗಳು, ಮತ್ತೊಂದು ಸಂಘಟನೆಯ ಬಸವರಾಜ ಗೋಶಾಲೆ ಸೇರಿದಂತೆ ಗ್ರಾಮಸ್ಥರು ಇದ್ದರು.- - - (** ಈ ಪೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಿ)
-5ಕೆಡಿವಿಜಿ7:ದಾವಣಗೆರೆ ತಾಲೂಕು ಕಬ್ಬೂರು ಗ್ರಾಮದಲ್ಲಿ ಭೂ ಮಾಪಕ ಅಧಿಕಾರಿ ಸಿಬ್ಬಂದಿ ಸರ್ಕಾರಿ ಗೋಮಾಳ, ಕೆರೆ ಒತ್ತುವರಿ ಜಾಗ ಸರ್ವೆ ಕಾರ್ಯ ಅಸಮರ್ಪಕವಾಗಿ ನಡೆಸಿದ್ದಾರೆಂದು ಆರೋಪಿಸಿ, ಆಕ್ಷೇಪಿಸಿದ್ದರಿಂದ ಅಧಿಕಾರಿಗಳು ಸರ್ವೆ ಕಾರ್ಯ ಸ್ಥಗಿತಗೊಳಿಸಿದರು.