ಚುನಾವಣೆ ಬಹಿಷ್ಕಾರ ಹಿಂಪಡೆದ ಗ್ರಾಮಸ್ಥರು

| Published : Apr 08 2024, 01:04 AM IST / Updated: Apr 08 2024, 01:05 AM IST

ಸಾರಾಂಶ

ಶೃಂಗೇರಿ ತಾಲೂಕಿನ ಮರ್ಕಲ್‌ ಪಂಚಾಯಿತಿ ಯಡದಾಳು ಗ್ರಾಮಸ್ಥರು ನಿರ್ಧರಿಸಿದ್ದ ಚುನಾವಣೆ ಬಹಿಷ್ಕಾರವನ್ನು ಲಿಖಿತ ಭರವಸೆಯಿಂದ ಹಿಂಪಡೆದಿದ್ದಾರೆ.

ಶೃಂಗೇರಿ: ತಾಲೂಕಿನ ಮರ್ಕಲ್‌ ಪಂಚಾಯಿತಿ ಯಡದಾಳು ಗ್ರಾಮಸ್ಥರು ನಿರ್ಧರಿಸಿದ್ದ ಚುನಾವಣೆ ಬಹಿಷ್ಕಾರವನ್ನು ಲಿಖಿತ ಭರವಸೆಯಿಂದ ಹಿಂಪಡೆದಿದ್ದಾರೆ.

ಅರಣ್ಯ ವ್ಯವಸ್ಥಾಪನಾಧಿಕಾರಿ ಯಡದಾಳು ಗ್ರಾಮದಲ್ಲಿ ಸ್ಥಳ ಪರಿಶೀಲನೆ ಮಾಡದೇ 435,8 ಎಕರೆ ಜಾಗವನ್ನು ಮೀಸಲು ಅರಣ್ಯ ಎಂದು ಘೋಷಣೆ ಮಾಡಲು ಹೊರಟಿರುವ ಕ್ರಮವನ್ನು ವಿರೋಧಿಸಿ, ಜಂಟೀ ಸರ್ವೇ ನಡೆಸುವಂತೆ, ಪಾರಂಪಾರಿಕ ಜಮೀನು, ನಿವೇಶನ, ಧಾರ್ಮಿಕ ಕೇಂದ್ರಗಳನ್ನು 4(1) ನಿಂದ ಹೊರತು ಪಡಿಸುವಂತೆ ಒತ್ತಾಯಿಸಿ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ್ದರು.

ಬುಧವಾರ ತಹಸಿಲ್ದಾರ್‌, ಕಂದಾಯ ಇಲಾಖೆ ಅಧಿಕಾರಿಗಳು, ಚುನಾವಣೆ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರೂ ಗ್ರಾಮಸ್ಥರು ಲಿಖಿತ ಭರವಸೆ ನೀಡುವಂತೆ ಪಟ್ಟು ಹಿಡಿದು ಕುಳಿತರು.ಚುನಾವಣೆ ಬಹಿಷ್ಕಾರದ ನಿರ್ಧಾರ ಮುಂದುವರೆಸಿದರು.

ಶನಿವಾರ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಲಿಖಿತ ಭರವಸೆ ನೀಡಿದ ನಂತರ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ನಿರ್ಧಾರ ವಾಪಸ್‌ ಪಡೆದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅಗಸೊಳ್ಳಿ ನಾರಾಯಣ, ಹರೀಶ್‌, ರಾಮಣ್ಣನಾಯಕ್‌ ಸದುಗ್ಗಪ್ಪ, ಪುಡಿಯ, ಮಂಜುನಾಥ್ ಮತ್ತಿತರರು ಇದ್ದರು.

7 ಶ್ರೀ ಚಿತ್ರ 1-

ಶೃಂಗೇರಿ ತಾಲೂಕಿನ ಯಡದಾಳು ಗ್ರಾಮಸ್ಥರು ಕರೆನೀಡಿದ್ದ ಚುನಾವಣೆ ಬಹಿಷ್ಕಾರವನ್ನು ಹಿಂಪಡೆದರು.