ಸಾರಾಂಶ
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಫಲವಾಗಿ ರಾಜ್ಯದಲ್ಲಿ ಅನೇಕ ಗ್ರಾಮೀಣ ಪ್ರದೇಶದ ಜನರು ವರ್ಷಕ್ಕೆ ೧೦೦ ದಿನಗಳ ಉದ್ಯೋಗ ಪಡೆಯುತ್ತಿದ್ದಾರೆ. ಇದರಿಂದ ಹಸಿವು ಮುಕ್ತ ದೇಶ ನಿರ್ಮಾಣ ಮಾಡಲು ಕಾರಣವಾಗುತ್ತಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಫಲವಾಗಿ ರಾಜ್ಯದಲ್ಲಿ ಅನೇಕ ಗ್ರಾಮೀಣ ಪ್ರದೇಶದ ಜನರು ವರ್ಷಕ್ಕೆ ೧೦೦ ದಿನಗಳ ಉದ್ಯೋಗ ಪಡೆಯುತ್ತಿದ್ದಾರೆ. ಇದರಿಂದ ಹಸಿವು ಮುಕ್ತ ದೇಶ ನಿರ್ಮಾಣ ಮಾಡಲು ಕಾರಣವಾಗುತ್ತಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಅವರು ಬುಧವಾರ ತಾಲೂಕಿನ ಕಸಬಾ ಹೋಬಳಿಯ ರತ್ನಸಂದ್ರ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ೧೫ ನೇ ಹಣಕಾಸು ಹಾಗೂ ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲ ಬಳಸಿಕೊಂಡು ಸುಮಾರು ೭೫ ಲಕ್ಷ ಅನುದಾನದಲ್ಲಿ ಸುಸಜ್ಜಿತ ರೀತಿಯಲ್ಲಿ, ನಿರ್ಮಾಣವಾಗಿರುವ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಮಹಾತ್ಮ ಗಾಂಧಿಜಿಯವರು ಕಂಡ ಗ್ರಾಮ ಸ್ವರಾಜ್ ಕಲ್ಪನೆ ಸಾಕಾರಗೊಳ್ಳಲು ಗ್ರಾಮಗಳು ಅಭಿವೃದ್ಧಿಯಾಗಬೇಕು. ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಆಡಳಿತ ಸದೃಢ ವಾಗಿರಬೇಕು. ಈ ನಿಟ್ಟಿನಲ್ಲಿ ಶಿರಾ ತಾಲೂಕಿನ ರತ್ನಸಂದ್ರ ಗ್ರಾಮ ಪಂಚಾಯಿತಿ ಕಟ್ಟಡ ಭವ್ಯವಾಗಿ ನಿರ್ಮಾಣವಾಗಿದೆ. ಈ ಭವ್ಯವಾದ ಕಟ್ಟಡದಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ಜನರಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ದೇವರುಗಳು. ಜನಪ್ರತಿನಿಧಿಗಳು, ಅಧಿಕಾರಿಗಳು ಜನಸ್ನೇಹಿಯಾಗಿ ಕೆಲಸ ಮಾಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಶಿರಾ ತಾಲೂಕಿನಲ್ಲಿ ಈಗಾಗಲೇ ೬ ಹೊಸ ಗ್ರಾ ಪಂ ಕಟ್ಟಡಗಳು ನಿರ್ಮಾಣವಾಗಿವೆ. ಇನ್ನೊಂದು ವರ್ಷದಲ್ಲಿ ಉಳಿದ ಎಲ್ಲಾ ಗ್ರಾ ಪಂ ಕಟ್ಟಡಗಳು ನಿರ್ಮಾಣವಾಗಲಿವೆ. ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಕೆಲಸ ಮಾಡುವಂತೆ ಸೂಚನೆ ನೀಡಿದ್ದು, ಇದರಿಂದ ರೈತರಿಗೆ, ಸಾರ್ವಜನಿಕರಿಗೆ ಒಂದೇ ಸೂರಿನಡಿ ಕೆಲಸ ಕಾರ್ಯಗಳು ನಡೆಯಲು ಅನುಕೂಲವಾಗಲಿದೆ ಎಂದರು. ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ ಈ ದೇಶದ ಭವಿಷ್ಯ ಅಡಗಿರುವುದು ಗ್ರಾಮೀಣ ಪ್ರದೇಶಗಳಲ್ಲಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಾದರೇ ದೇಶ ಅಭಿವೃದ್ಧಿಯಾಗುತ್ತದೆ ಎಂದು ಮಹಾತ್ಮ ಗಾಂಧೀಜಿಯವರ ಆಶಯವಾಗಿತ್ತು. ಅದರಂತೆ ಗ್ರಾಮ ಸೌಧಗಳು ನಿರ್ಮಾಣ ಆಗುತ್ತಿದ್ದು, ಅದರಡಿಯಲ್ಲಿ ಜನರಿಗೆ ಉತ್ತಮ ಸೇವೆಗಳು ದೊರಕಲಿ. ಇಲ್ಲಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನರಿಗೆ ಸ್ಪಂಧಿಸಿ ಎಂದರು.ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್, ರತ್ನಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಿಂಗಮ್ಮ ಶ್ರೀರಂಗಪ್ಪ, ಉಪಾಧ್ಯಕ್ಷರಾದ ಜೀನಿ ದೀಲಿಪ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜುಂಜೇಗೌಡ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷರಾದ ಪಿಡಿಒ ನಾಗರಾಜ್, ಮಾಜಿ ಜಿ.ಪಂ ಸದಸ್ಯರಾದ ಅರೇಹಳ್ಳಿ ರಮೇಶ್, ದೊಡ್ಡಗೂಳ ರಾಮಚಂದ್ರಪ್ಪ, ಮುಖಂಡ ಗುಳಿಗೇನಹಳ್ಳಿ ನಾಗರಾಜ್, ರತ್ನಸಂದ್ರ ಗ್ರಾಮ ಪಂಚಾಯಿತಿ ಸದಸ್ಯರಾದ ದೊಡ್ಡಗೂಳ ರಾಜಣ್ಣ, ಪದ್ಮಾಪುರ ಮಂಜುನಾಥ್, ಸುಜಾತಾ ಪಾಂಡುರಂಗಪ್ಪ, ಹರೀಶ್, ಇಂಜಿನಿಯರ್ ನಾಗೇಂದ್ರಪ್ಪ, ತಾ.ಪಂ ಸಹಾಯಕ ನಿರ್ದೇಶಕರಾದ ಕನಕಪ್ಪ, ಮುಖಂಡರಾದ ಬಾಂಬೆ ರಾಜಣ್ಣ, ಗೋವಿಂದಪ್ಪ, ರಂಗಪ್ಪ, ಪರುಶಣ್ಣ, ನಾಗರತ್ನಮ್ಮ ಮುಕುಂದಪ್ಪ, ಶಿವಶಂಕರ್, ಮೂಗನಹಳ್ಳಿ ರಾಮು, ಗಂಜಲಗುಂಟೆ ಮುನಿರಾಜು, ಮಾರನಗೆರೆ ಕೃಷ್ಣಪ್ಪ, ರಾಮಚಂದ್ರಪ್ಪ, ಶಾಂತ ವೀರ ಪಾಟೀಲ್, ಚಂದ್ರಪ್ಪ, ಲಕ್ಷ್ಮಮ್ಮ, ಸೇರಿದಂತೆ ಹಲವರು ಹಾಜರಿದ್ದರು.