ಜಾತ್ರಾ ಮಹೋತ್ಸವಗಳಿಂದ ಗ್ರಾಮಗಳು ಸುಭೀಕ್ಷ : ಗುರುನಾಥ ಸ್ವಾಮೀಜಿ

| Published : Apr 19 2025, 12:39 AM IST

ಜಾತ್ರಾ ಮಹೋತ್ಸವಗಳಿಂದ ಗ್ರಾಮಗಳು ಸುಭೀಕ್ಷ : ಗುರುನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮಗಳು ಸುಭೀಕ್ಷವಾಗಿದ್ದರೆ ಮಾತ್ರ ದೇಶದ ಅಭಿವೃದ್ದಿ ಸಾಧ್ಯ. ಗ್ರಾಮಗಳಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ಉಂಟಾಗಬೇಕಾದರೆ ಜಾತ್ರಾ ಮಹೋತ್ಸವಗಳು ಹಾಗೂ ಧಾರ್ಮಿಕ ಸಮಾರಂಭಗಳಿಂದ ಮಾತ್ರ ಸಾಧ್ಯ ಎಂದು ಶೃಂಗೇರಿ ಶಾಖಾಮಠದ ಶ್ರೀ ಗುರುನಾಥ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಗ್ರಾಮಗಳು ಸುಭೀಕ್ಷವಾಗಿದ್ದರೆ ಮಾತ್ರ ದೇಶದ ಅಭಿವೃದ್ದಿ ಸಾಧ್ಯ. ಗ್ರಾಮಗಳಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ಉಂಟಾಗಬೇಕಾದರೆ ಜಾತ್ರಾ ಮಹೋತ್ಸವಗಳು ಹಾಗೂ ಧಾರ್ಮಿಕ ಸಮಾರಂಭಗಳಿಂದ ಮಾತ್ರ ಸಾಧ್ಯ ಎಂದು ಶೃಂಗೇರಿ ಶಾಖಾಮಠದ ಶ್ರೀ ಗುರುನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಆದಿಚುಂಚನಗಿರಿ ಶಾಖಾಮಠ ದಸರಿಘಟ್ಟದ ಶ್ರೀ ಚೌಡೇಶ್ವರಿ ದೇವಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಪೂರ್ವಜರ ಸಂಪ್ರದಾಯವನ್ನು ಮರೆತ ಕೆಲ ಮನುಜರು ಅತಿಯಾದ ಹಣದ ಆಸೆಯಿಂದ ಆಡಂಬರದ ಜೀವನಕ್ಕಾಗಿ ದ್ವೇಷ, ಅಸೂಯೆ ಸುಲಿಗೆ ದರೋಡೆ ಪ್ರವೃತ್ತಿಗೆ ಇಳಿಯುತ್ತಿರುವುದು ಭವಿಷ್ಯದಲ್ಲಿ ಸಂಸ್ಕಾರ ಸಂಸ್ಕೃತಿ ಮರೆಯುತ್ತಿದ್ದಾರೆ ಅನಿಸುತ್ತಿದೆ. ಹಸು ಮೇವು ತಿಂದು ಅಮೃತ ನೀಡಿದರೆ ಪ್ರಾಣಿ ಪಕ್ಷಿಗಳು ರೈತನ ಬೆಳೆಗೆ ಹಾನಿಕಾರಕವಾದ ಕ್ರಿಮಿ ಕೀಟಗಳನ್ನು ತಿಂದು ಸಹಾಯ ಮಾಡುತ್ತವೆ. ಆದರೆ ಮನುಷ್ಯಅಮೃತ ನೀಡಿದ ಹಸುವನ್ನು ಕಟುಕರಿಗೆ ನೀಡುತ್ತಾನೆ, ವೃದ್ಧಾಪ್ಯದ ತಂದೆ ತಾಯಿಯನ್ನು ವೃದ್ಧಾಶ್ರಮಗಳಿಗೆ ಕಳಿಸುತ್ತಾನೆ. ನೆಮ್ಮದಿ ಸಿಗಲಿಲ್ಲವೆಂದು ದೇವರಿಗೆ ಮೊರೆ ಹೋಗುತ್ತಾನೆ. ನೆಮ್ಮದಿ ಬೇಕೆಂದರೆ ತಂದೆ ತಾಯಿಯರನ್ನು ಸಲುಹಿ ನಂತರ ದೇವರ ದರ್ಶನ ಮಾಡಿದರೆ ದೇವಿ ಆಶೀರ್ವಾದ ನೀಡುತ್ತಾಳೆ. ಕ್ಷೇತ್ರದ ಅಭಿವೃದ್ಧಿಗೆ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅಪಾರ ಕೊಡುಗೆ ಸಲ್ಲಿಸುತ್ತಿದ್ದು ಸುಂದರ ರಥ ನಿರ್ಮಿಸಿ ಭಕ್ತರಿಗೆ ಪ್ರತಿನಿತ್ಯ ದಾಸೋಹ ನೀಡಿ ರಾಜ್ಯದ ಹಾಗೂ ಗ್ರಾಮದ ಸಾಮಾನ್ಯ ಭಕ್ತನಿಗೂ ದರ್ಶನ ಭಾಗ್ಯ ನೀಡುತ್ತಿದ್ದಾರೆ ಎಂದರು. ಎಸ್.ವಿ.ಪಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ಮಾತನಾಡಿ ರಾಜ್ಯದಲ್ಲಿಯೇ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಬರವಣಿಗೆಯ ಮುಖಾಂತರ ತಿಳಿಸಿ ಪರಿಹಾರ ದೊರಕಿಸಿ ಕೊಡುವ ಧಾರ್ಮಿಕ ಶಕ್ತಿ ಕೇಂದ್ರ ಇದ್ದರೆ ಅದು ಶ್ರೀ ಚೌಡೇಶ್ವರಿ ಸನ್ನಿಧಾನ. ಇಲ್ಲಿನ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಕ್ಷೇತ್ರದ ಅಭಿವೃದ್ಧಿಗೆ ಹಗಲಿರಲು ಶ್ರಮಿಸುತ್ತಿದ್ದು ಶ್ರೀ ಕ್ಷೇತ್ರ ಭಕ್ತರನ್ನು ಹೊಂದಿದೆ ಎಂದರು. ರಥೋತ್ಸವಕ್ಕೂ ಮೊದಲು ಚೌಡೇಶ್ವರಿ ದೇವಿಯವರನ್ನು ಹೂವಿನ ಮಂಟಪದಲ್ಲಿ ಗ್ರಾಮದ ರಾಜಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಸಮಾರಂಭದಲ್ಲಿ ಶಾಖಾಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಮಂಗಳೂರು ಶಾಖಾಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ, ಶೃಂಗೇರಿಯ ಶ್ರೀ ಶಂಭುನಾಥ ಸ್ವಾಮೀಜಿ, ಆದೀಹಳ್ಳಿಯ ಶ್ರೀ ಶಿವಪುತ್ರ ಸ್ವಾಮೀ ಇದ್ದರು. ಹಾಸನದ ನಿಶ್ಚಿತಾರವರಿಂದ ಭರತನಾಟ್ಯ ನಡೆಯಿತು. ಶ್ರೀ ಚೌಡೇಶ್ವರಿ ದೇವಿಯವರ ರಥೋತ್ಸವಕ್ಕೆ ಕ್ಷೇತ್ರದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ನಂತರ ಹರಿಕಥಾ ವಿದ್ವಾನ್ ಶೀಲಾ ನಾಯ್ಡುರವರಿಂದ ಹರಿಕಥೆ ಕಾರ್ಯಕ್ರಮ ನಡೆಯಿತು.