ಸಾರಾಂಶ
- ದಿ ಎಕನಾಮಿಕ್ಸ್ ಟೈಮ್ಸ್ ಪತ್ರಿಕೆ ದೇಶಾದ್ಯಂತ ನಡೆಸಿದ ಸರ್ವೆಯಲ್ಲಿ ವಿನಯ್ ಸಾಧನೆ ಪರಿಗಣನೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆದೇಶದ ಪ್ರಖ್ಯಾತ ಪತ್ರಿಕೆ ದಿ ಎಕನಾಮಿಕ್ಸ್ ಟೈಮ್ಸ್ ದೇಶಾದ್ಯಂತ ನಡೆಸಿದ ಸರ್ವೆಯಲ್ಲಿ ಟಾಪ್-5 ಸೂಪರ್ ಸ್ಟಾರ್ ಎಜುಕೇಟ್ ಎಂಬ ಕೀರ್ತಿಗೆ ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯ ಕುಮಾರ್ ಪಾತ್ರರಾಗಿದ್ದಾರೆ. ಈ ಮೂಲಕ ದೇಶಾದ್ಯಂತ ಜನಪ್ರಿಯ ವ್ಯಕ್ತಿ ಎಂಬ ಗೌರವಕ್ಕೂ ವಿನಯ್ ಭಾಜನರಾಗಿದ್ದಾರೆ.
ಸೂಪರ್ ಸ್ಟಾರ್ ಎಜುಕೇಟ್ ಎಂದು ಜಿ.ಬಿ. ವಿನಯ್ ಕುಮಾರ್ ಅವರನ್ನು ಗುರುತಿಸಿದ್ದು, ಇದು ಪ್ರತಿಷ್ಠಿತ ಗೌರವವೂ ಹೌದು. ಶಿಕ್ಷಕರ ದಿನದಂದು ಪತ್ರಿಕೆಯಲ್ಲಿ ಪ್ರಕಟಿಸಿದ್ದು, ಯುಪಿಎಸ್‌ಸಿ ಫಲಿತಾಂಶ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ, ಯಶಸ್ಸು, ಶೂನ್ಯದಿಂದ ಸಂಸ್ಥೆ ಆರಂಭಿಸಿ ದೇಶಾದ್ಯಂತ ಗಳಿಸಿರುವ ಜನಪ್ರಿಯತೆ, ಕೌಶಲ್ಯ, ಪರಿಶ್ರಮ ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಗೌರವ ನೀಡಲಾಗಿದೆ.ಬಿಲಿನಿಯರ್‌ಗಳು ಹೂಡಿಕೆ ಮಾಡಿದ ಸಂಸ್ಥೆಗಳನ್ನು ಹೊಂದಿರುವವರ ಜೊತೆಗೆ ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಿಸಿ, ಕಡಿಮೆ ಅವಧಿಯಲ್ಲಿ ರಾಜಕಾರಣದಲ್ಲಿ ಗಳಿಸಿದ ಜನಪ್ರಿಯತೆ, ಜನಬೆಂಬಲ, ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯೂ ವಿನಯ್ ಕುಮಾರ್ ಸಾಧನೆಯಲ್ಲಿ ಗಮನಾರ್ಹ ಅಂಶ. ಇನ್ನು ಘಟಾನುಘಟಿಗಳ ನಡುವೆ ದಾವಣಗೆರೆ ತಾಲೂಕಿನ ಕಕ್ಕರಗೊಳ್ಳದ ವಿನಯ್ ಕುಮಾರ್ ಅವರು, ಈ ಗೌರವಕ್ಕೆ ಪಾತ್ರರಾಗುವ ಮೂಲಕ ಕೇವಲ ದಾವಣಗೆರೆ ಜಿಲ್ಲೆ, ಕರ್ನಾಟಕ ಮಾತ್ರವಲ್ಲದೇ, ಇಡೀ ಭಾರತ ದೇಶದಲ್ಲಿಯೇ ಹೆಸರು ಸಂಪಾದನೆ ಮಾಡಿದ್ದು, ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.
ಅಸಾಧಾರಣ ಸಾಧನೆ ಪರಿಗಣನೆ:ಕರ್ನಾಟಕ ರಾಜ್ಯವನ್ನು ಐಎಎಸ್, ಐಪಿಎಸ್ ಹಬ್ ಮಾಡಿರುವ ಕೀರ್ತಿಗೆ ಜಿ.ಬಿ. ವಿನಯ್ ಕುಮಾರ್ ಪಾತ್ರರಾಗಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಅತ್ಯಂತ ಕಡಿಮೆ ಅವಧಿಯಲ್ಲಿ ಜನಮನ್ನಣೆ ಗಳಿಸಿದ್ದು, ಯುವಕ, ಯುವತಿಯರು ಸೇರಿದಂತೆ 43 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದರು. ಇಡೀ ಕರ್ನಾಟಕದ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರು ಹೆಚ್ಚಿನ ಮತಗಳು ಗಳಿಸಿದ್ದಾರೆ ಎಂಬ ಅಂಶವನ್ನು ಟಾಪ್-5 ಸೂಪರ್ ಸ್ಟಾರ್ ಎಜುಕೇಟ್ ಗೌರವ ನೀಡಲು ಪರಿಗಣಿಸಲಾಗಿದೆ.
- - -ಬಾಕ್ಸ್ * ಜನತೆ ಪ್ರೀತಿಯ ಫಲವಿದು: ವಿನಯಕುಮಾರ್ ಜಿ.ಬಿ. ವಿನಯ್ ಕುಮಾರ್ ಅವರು ಟಾಪ್ 5 ಸೂಪರ್ ಸ್ಟಾರ್ ಎಜುಕೇಟ್ ಎಂಬ ಗೌರವ ನೀಡಿರುವುದು ತುಂಬಾ ಸಂತಸ ತಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲ ವರ್ಗಗಳ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಮುಂದೆ ಬರಬೇಕು. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಬೇಕು. ಐಎಎಸ್, ಐಪಿಎಸ್, ಕೆಎಎಸ್ ಕನಸು ನನಸು ಮಾಡಿಕೊಳ್ಳಬೇಕು ಎಂಬ ಬಯಕೆ ಹೊಂದಿರುತ್ತಾರೆ. ಇದಕ್ಕೆ ಇನ್‌ಸೈಟ್ಸ್ ಸಂಸ್ಥೆ ವೇದಿಕೆ ಕಲ್ಪಿಸಲಿದೆ. ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ, ಜಿಲ್ಲೆಯ ಜನತೆ ತೋರಿದ ಪ್ರೀತಿಯಿಂದಾಗಿ ಇದು ಸಾಧ್ಯವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
- - - -8ಕೆಡಿವಿಜಿ29ಃ ಜಿ.ಬಿ. ವಿನಯ್ ಕುಮಾರ್